5 ಉತ್ತಮ ಕುಂಕುಮಾದಿ ತೈಲ ಆನ್ ಲೈನ್ ನಲ್ಲಿ ಲಭ್ಯ 

Read this article in english 5 Top Kumkumadi Tailam (Oil) Available on Amazon India

ಅಮೆಜಾನ್ ಇಂಡಿಯಾದಲ್ಲಿ ಲಭ್ಯವಿರುವ 5 ಉತ್ತಮ  ಕುಂಕುಮಾದಿ ತೈಲ ಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ . ಆಯುರ್ವೇದದ ಪಠ್ಯಗಳಲ್ಲಿ ಉಲ್ಲೇಖಿಸಿರುವಂತೆ , ಎಳ್ಳಿನ ಎಣ್ಣೆ ಯನ್ನು ಮೂಲ ಎಣ್ಣೆಯಾಗಿ ಉಪಯೋಗಿಸಿ ಆಯುರ್ವೇದಾಚಾರ್ಯರು ಶಿಫಾರಸು ಮಾಡಿರುವ ಮೂಲಿಕೆಗಳನ್ನು ಬಳಸಿ ಮಾಡಿರುವಂತಹ ತೈಲಗಳಿವು .

ಎಚ್ಚರಿಕೆ: ಯಾವುದೇ ಸೌಂದರ್ಯ ಉತ್ಪನ್ನವನ್ನು ಬಳಸುವ ಮೊದಲು ಯಾವಾಗಲೂ ಪ್ಯಾಚ್ ಪರೀಕ್ಷೆಯನ್ನು ಮಾಡಿ. ನಿಮ್ಮ ಚರ್ಮ ಎಣ್ಣೆಯುಕ್ತ (ಆಯಿಲಿ ಸ್ಕಿನ್ ) ಹಾಗು  ಸೂಕ್ಷ್ಮವಾಗಿದ್ದರೆ  ಕುಂಕುಮಾದಿ ತೈಲ ನಿಮಗೆ ಸರಿಹೊಂದುವುದಿಲ್ಲ.

೫ ಉತ್ತಮ ಕುಂಕುಮಾದಿ ತೈಲಗಳ ಪಟ್ಟಿ

#1 ಔರಾವೇದಿಕ್ ಕುಂಕುಮಾದಿ ಆಯಿಲ್- 1೦೦ ಮಿಲಿ

ಈ ಉತ್ಪನ್ನವು ಉತ್ತಮ ವಿಮರ್ಶೆಗಳನ್ನು ಹೊಂದಿದೆ. ಇದರಲ್ಲಿ ೧೦೦ ಮಿಲಿ ಕುಂಕುಮಾದಿ ತೈಲ ಇದ್ದು ಬೆಲೆಯೂ ಸಮಂಜಸವಾಗಿದೆ . ಆಯುರ್ವೇದ ಗ್ರಂಥಗಳಲ್ಲಿ ಕುಂಕುಮಾದಿ ತೈಲಕ್ಕಾಗಿ ಪಟ್ಟಿ ಮಾಡಲಾದ  ಗಿಡಮೂಲಿಕೆಗಳನ್ನು ಒಳಗೊಂಡಿದೆ. ಎಳ್ಳೆಣ್ಣೆಯನ್ನು , ಗಿಡಮೂಲಿಕೆ ಹಾಗೂ ಮೇಕೆ ಹಾಲಿನೊಂದಿಗೆ (ಅಜಾ ದುಗ್ಧಾ)  ಸಂಸ್ಕರಿಸಲಾಗಿದೆ.  ಇದು ಹಾನಿಕಾರಕ ರಾಸಾಯನಿಕಗಳಾದ  ಸಲ್ಫೇಟ್ ಮತ್ತು ಪ್ಯಾರಾಬೆನ್‌ಗಳಿಂದ ಮುಕ್ತವಾಗಿದೆ. ಯಾವುದೇ ಪ್ರಾಣಿಗಳ ಮೇಲೆ ಇದನ್ನು ಪ್ರಯೋಗಿಸಲಾಗಿಲ್ಲ . (ಕ್ರೌರ್ಯ ಮುಕ್ತ)

Buy on Amazon

#2 ಆರ್ಯ ವೈದ್ಯ ಸಾಲಾ ಕೊಟ್ಟಕ್ಕಲ್ ಆಯುರ್ವೇದಿಕ್ ಕುಂಕುಮಾದಿ  ತೈಲಂ – 10 ಮಿಲಿ

ಕೇರಳಾದ ಕೊಟ್ಟಕ್ಕಲ್ ನಲ್ಲಿಯ  ಆರ್ಯ ವೈದ್ಯ ಸಾಲದವರು ತಯಾರಿಸಿದ್ದಾರೆ. ಬಹಳ ಹಳೆಯ ಹೆಸರಾಂತ ಆಯುರ್ವೇದ ಔಷಧಾಲಯ. ಅವರ ಪ್ರತಿ ಉತ್ಪನ್ನವು ಗುಣಮಟ್ಟಕ್ಕೆ  ಹೆಸರುವಾಸಿಯಾಗಿವೆ . ನೀವು ಶುದ್ಧ  ಆಯುರ್ವೇದ ವನ್ನು  ಬೇಕೆನ್ನುವುದಾದರೆ ಈ ಉತ್ಪನ್ನ ಖರೀದಿಸಬಹುದು .

Buy on Amazon

#3 ಖಾದಿ ಗ್ಲೋಬಲ್ ರಾಯಲ್ ಕುಂಕುಮಾದಿ  ತೈಲಮ್ , 12 ಮಿಲಿ

ಈಗ ಅವರು ಇದನ್ನು ಇಂಡಿಅರ್ತ್ ಎಂದು ಮರುಹೆಸರಿಸಿದ್ದಾರೆ. ಖಾದಿ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಆಯುರ್ವೇದದ ಪಠ್ಯಗಳಲ್ಲಿ ಉಲ್ಲೇಖಿಸಿರುವಂತೆ ಇದು ಬಹುತೇಕ ಎಲ್ಲ ಘಟಕಾಂಶಗಳನ್ನು ಒಳಗೊಂಡಿದೆ. ಇದಕ್ಕೆ  ಮಿಶ್ರ ವಿಮರ್ಶೆಗಳು (ರಿವ್ಯೂ) ಬಂದಿವೆ

Buy on Amazon

#4 ಕೇರಳ ಆಯುರ್ವೇದ ಕುಂಕುಮಾದಿ  ತೈಲ – 10 ಮಿಲಿ

ಆಯುರ್ವೇದದ ಪಠ್ಯಗಳಲ್ಲಿ ಉಲ್ಲೇಖಿಸಿರುವಂತೆ ಗಿಡಮೂಲಿಕೆಗಳನ್ನು ಒಳಗೊಂಡಿದೆ. ಒಳ್ಳೆಯ ಪ್ಯಾಕೇಜ್  ಮತ್ತು ಬಳಸಲು ಸುಲಭವಾಗಿದೆ. ಇದು 30 ಮಿಲಿ ಪ್ಯಾಕ್‌ನಲ್ಲಿಯೂ ಲಭ್ಯವಿದೆ.

Buy on Amazon

#5 ಕಾಮಧೇನು  ಕುಂಕುಮಾದಿ  ತೈಲ 50 ಮಿಲಿ

ಕುಂಕುಮಾದಿ  ತೈಲ ತಯಾರಿಸಲು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಗಿಡಮೂಲಿಕೆಗಳನ್ನು ಒಳಗೊಂಡಿದೆ. ಇದನ್ನು ತೈಲಪಾಕ ವಿಧಿ ಮೂಲಕ ತಯಾರಿಸಲಾಗುತ್ತದೆ. ಇದೊಂದು ತೃಪ್ತಿದಾಯಕ ಖರೀದಿ.

Buy on Amazon

ಕುಂಕುಮಾದಿ  ತೈಲವನ್ನು  ಬಳಸುವುದು ಹೇಗೆ ?

ಈ ಎಣ್ಣೆ ಅಥವಾ ತೈಲವನ್ನು  ಅನೇಕ ಚರ್ಮದ ತೊಂದರೆಗಳಲ್ಲಿ ಬಳಸಬಹುದು .

ಮೊಡವೆ, ಗುಳ್ಳೆ ಮತ್ತು ಕಲೆಗಳಿಗೆ ಬಳಸುವ ಬಗೆ

ನಿಮ್ಮ ಬೆರಳ ತುದಿಯಲ್ಲಿ ಈ ತೈಲದ ಕೆಲವು ಹನಿಗಳನ್ನು ತೆಗೆದುಕೊಂಡು ಮುಖಕ್ಕೆ ಮಸಾಜ್ ಮಾಡಿ. 20 ನಿಮಿಷಗಳ ನಂತರ ಅದನ್ನು ತೊಳೆಯಿರಿ. ಅಥವಾ ವೈದ್ಯರ ನಿರ್ದೇಶನದಂತೆ ಉಪಯೋಗಿಸಿ .

ಗರ್ಭಿಣಿಯರಲ್ಲಿ ಉಂಟಾಗುವ ಬರೆ ಗುರುತುಗಳಿಗೆ  (ಸ್ಟ್ರೆಚ್ ಮಾರ್ಕ್ಸ್ )

೧೦ ಮಿಲಿ ಕುಂಕುಮಾದಿ ತೈಲವನ್ನು ೨೦ ಮಿಲಿ ಎಳ್ಳೆಣ್ಣೆಯೊಂದಿಗೆ ಬೆರೆಸಿರಿ . ಈ ಮಿಶ್ರಿತ ಎಣ್ಣೆಯನ್ನು ಎಲ್ಲೆಲ್ಲಿ ಬರಿಯ ಗುರುತುಗಳಿವೆಯೋ (ಹೊಟ್ಟೆ, ತೊಡೆ , ಎದೆ ಇತ್ಯಾದಿ) ಅಲ್ಲೆಲ್ಲಾ  ಮಸ್ಸಾಜ್ ಮಾಡಿ ೩೦ ನಿಮಿಷಗಳ ನಂತರ ಸ್ನಾನ ಮಾಡಿ.

ದೇಹದ ಚರ್ಮದ ಹೊಳಪು ಹಾಗು ವರ್ಣವನ್ನು  ಹೆಚ್ಚಿಸಲು

೧೦ ಮಿಲಿ ಕುಂಕುಮಾದಿ ತೈಲವನ್ನು ೫೦ ಮಿಲಿ ತೆಂಗಿನ ಎಣ್ಣೆಯೊಂದಿಗೆ ಬೆರೆಸಿರಿ . ಈ ಮಿಶ್ರಿತ ಎಣ್ಣೆಯನ್ನು ದೇಹಾದ್ಯಂತ ಮಸ್ಸಾಜ್ ಮಾಡಿ ೩೦ ನಿಮಿಷಗಳ ನಂತರ ಸ್ನಾನ ಮಾಡಿ

ಆಯುರ್ವೇದದ ಪ್ರಾಚೀನ ಔಷಧಶಾಸ್ತ್ರ ಪಠ್ಯವಾದ ಭೈಷಜ್ಯ ರತ್ನಾವಳಿ ಪ್ರಕಾರ, ಕುಂಕುಮಾದಿ  ತೈಲದಲ್ಲಿ ಇರಬೇಕಾದ ಮೂಲಿಕೆಗಳ  ಪಟ್ಟಿ.

 1. ರಕ್ತ ಚಂದನ
 2. ಕೇಸರಿ (saffron) -ಆಯುರ್ವೇದದ ಪ್ರಕಾರ ಕೇಸರಿಯ ಉಪಯೋಗಗಳೇನು ? Uses of Kesari / Saffron
 3. ಲಾಕ್ಷ
 4. ಮಂಜಿಷ್ಟ
 5. ಮಧುಯಷ್ಠಿ
 6. ಮರದರಿಶಿಣ
 7. ಉಶೀರ
 8. ಪದ್ಮಕಾ
 9. ನೀಲಿ ಕಮಲ
 10. ವಟ
 11. ಅಂಜೂರದ ಚಕ್ಕೆ
 12. ಕೆಂಪು ಕಮಲ
 13. ಬಿಲ್ಪತ್ರೆ
 14. ಅಗ್ನಿಮಂಥ
 15. ಶ್ಯೋನಾಕಾ
 16. ಗಂಭಾರಿ
 17. ಪಾಟಲ
 18. ಶಾಲಪರ್ಣಿ
 19. ಪೃಷ್ಣಪರ್ಣಿ
 20. ಗೋಕ್ಷುರಾ
 21. ಬೃಹತಿ
 22. ಕಂಟಕಾರಿ
 23. ಮಧುಕಾ
 24. ಪಟ್ಟಂಗ
 25. ಎಳ್ಳಿನ ಎಣ್ಣೆ
 26. ಮೇಕೆ ಹಾಲು

ಪ್ರಾಚೀನ ಆಯುರ್ವೇದ ಗ್ರಂಥಗಳಲ್ಲಿ ವಿವರಿಸಿದಂತೆ ಕುಂಕುಮಾದಿ ತೈಲವನ್ನು  ತೈಲ ಪಾಕ  ವಿಧಿಯ  ಪ್ರಕಾರ ಸಿದ್ಧಪಡಿಸಬೇಕು .