ಡಯಾಬಿಟಿಸ್  ನಿಯಂತ್ರಿಸಲು ಅತ್ಯುತ್ತಮ ಆಯುರ್ವೇದ ಗಿಡಮೂಲಿಕೆಗಳು ayurvedic medicine for diabetes in kannada

ಈ ಆಯುರ್ವೇದ ಗಿಡಮೂಲಿಕೆಗಳು ಡಯಾಬಿಟಿಸ್ ಅಥವಾ ಸಕ್ಕರೆ ಖಾಯಿಲೆಯನ್ನು ಚೆನ್ನಾಗಿ ಹತೋಟಿಯಲ್ಲಿಡುತ್ತವೆ . ಇವುಗಳನ್ನು ಉಪಯೋಗಿಸುವ ಬಗೆ ಇಲ್ಲಿ ತಿಳಿಯಿರಿ .

ವಿಷಯ ಸೂಚಿ

ಮಧುಮೇಹ ಚಿಕಿತ್ಸೆಗಾಗಿ ಪರಿಣಾಮಕಾರಿ ಗಿಡಮೂಲಿಕೆಗಳು

ಜಿಮ್ನೆಮಾ ಸಿಲ್ವೆಸ್ಟ್ರೆ / ಮಧುನಾಶಿನಿ /ಕಡಸಿಗೆ /ಸಣ್ಣ ಗೆರೆಸೆ ಹಂಬು/ ಗುಡ್ಮಾರ್

ಬೆಳ್ಳುಳ್ಳಿ

ಸಕ್ಕರೆ ಖಾಯಿಲೆಗೆ ಬೆಟ್ಟದ ನೆಲ್ಲಿಕಾಯಿ

ಡಯಾಬಿಟಿಸ್ ಗೆ ಹಾಗಲಕಾಯಿ

ಶುಗರ್ ಕಡಿಮೆ ಮಾಡಲು ದಾಲ್ಚಿನ್ನಿ

ರಕ್ತದ ಸಕ್ಕರೆ ಅಂಶ ಕಡಿಮೆಯಾಗಲು ಅರಿಶಿನ

Read This Article in English Natural Ayurvedic Remedies for Diabetes

ಆಯುರ್ವೇದಲ್ಲಿ  ಉಲ್ಲೇಖಿಸಲಾದ 20 ಬಗೆಯ ಪ್ರಮೇಹಗಳಲ್ಲಿ ಡಯಾಬಿಟಿಸ್ ಮೆಲೈಟಿಸ್  ಒಂದು. ಇದನ್ನು ಆಯುರ್ವೇದದಲ್ಲಿ ಮಧುಮೇಹ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ದೇಹದಲ್ಲಿನ ಸಕ್ಕರೆ ಮಟ್ಟವು ಮಾಮೂಲಿಗಿಂತ ಹೆಚ್ಚಾದಾಗ ಉಂಟಾಗುವ ರೋಗವಾಗಿದೆ . ಇದನ್ನು ಸಕ್ಕರೆ ಖಾಯಿಲೆ ಎಂದೂ ಹೇಳುತ್ತಾರೆ .

ಮಧುಮೇಹ ಚಿಕಿತ್ಸೆಗಾಗಿ ಪರಿಣಾಮಕಾರಿ ಗಿಡಮೂಲಿಕೆಗಳು

ದುರದೃಷ್ಟವಶಾತ್ ಔಷಧ ಕ್ಷೇತ್ರದಲ್ಲಿ ಇಷ್ಟು ಬೆಳವಣಿಗೆಯ ನಂತರವೂ ಮಧುಮೇಹಕ್ಕೆ ಯಾವುದೇ ಶಾಶ್ವತ ಚಿಕಿತ್ಸೆ ಇಲ್ಲ . ಆದರೆ ದೈನಂದಿನ ಜೀವನಶೈಲಿಯ ಬದಲಾವಣೆಗಳು ಮತ್ತು ಕೆಲವು ನೈಸರ್ಗಿಕ ಆಯುರ್ವೇದ ಗಿಡಮೂಲಿಕೆಗಳು ಹಾಗು ಔಷಧಿಗಳ ಸಹಾಯದ ಮೂಲಕ ಇದನ್ನು ನಿಯಂತ್ರಣದಲ್ಲಿಡಬಹುದು.

ಈ ಲೇಖನದಲ್ಲಿ ಡಯಾಬಿಟಿಸ್ ಅನ್ನು  ನಿಯಂತ್ರಣದಲ್ಲಿಡಲು ಬಹಳ ಸಹಾಯಕವಾಗುವಂತಹ ಕೆಲವು ಗಿಡಮೂಲಿಕೆಗಳ ಬಗ್ಗೆ ಮತ್ತು ಇದಕ್ಕಾಗಿ ಜೀವನ ಶೈಲಿಯಲ್ಲಿ ತರಬೇಕಾದ ಬದಲಾವಣೆಗಳ ಬಗ್ಗೆ  ಚರ್ಚಿಸೋಣ.

ಜಿಮ್ನೆಮಾ ಸಿಲ್ವೆಸ್ಟ್ರೆ / ಮಧುನಾಶಿನಿ /ಕಡಸಿಗೆ /ಸಣ್ಣ ಗೆರೆಸೆ ಹಂಬು/ ಗುಡ್ಮಾರ್

ಈ ಮೂಲಿಕೆಯನ್ನು  ಸಾಕಷ್ಟು ರೋಗಗಳಲ್ಲಿ  ಚಿಕಿತ್ಸೆ ನೀಡಲು ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ ಆದರೆ ಇದನ್ನು ಮುಖ್ಯವಾಗಿ ರಕ್ತದಲ್ಲಿನ ಗ್ಲೂಕೋಸ್ ಅಥವಾ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಇದು ಮಧುಮೇಹಿಗಳಿಗೆ ಬಹಳ ಸಹಾಯಕವಾದ ಸಸ್ಯವಾಗಿದೆ.  ಇದು ಆಹಾರದಿಂದ ದೇಹವು ಹೀರಿಕೊಳ್ಳುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅನೇಕ ಅಧ್ಯಯನಗಳ ಪ್ರಕಾರ ,  ಈ ಮೂಲಿಕೆಯು ದೇಹದಲ್ಲಿ ಇನ್ಸುಲಿನ್ ಸ್ರವಿಸುವ ಮೇದೋಜ್ಜೀರಕ ಗ್ರಂಥಿಯನ್ನು  (ಪ್ಯಾಂಕ್ರೆಯಾಸ್) ಪ್ರಚೋದಿಸಿ ಹೆಚ್ಚಿನ ಇನ್ಸುಲಿನ್ ಸ್ರವಿಸುವಂತೆ ಮಾಡುತ್ತದೆ .

ಮಧುಮೇಹಕ್ಕೆ ಬೆಳ್ಳುಳ್ಳಿ

ಆಯುರ್ವೇದದ ಪ್ರಕಾರ ಡಯಾಬಿಟಿಸ್  ವಾತದೋಷದ ಏರುಪೇರಿನಿಂದ ಉಂಟಾಗುವ  ಅಸ್ವಸ್ಥತೆಯಾಗಿದೆ. ಇಂತಹ ಸಂಧರ್ಭಗಳಲ್ಲಿ  ಬೆಳ್ಳುಳ್ಳಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗು ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಕ್ಕರೆ ಖಾಯಿಲೆಗೆ ಬೆಟ್ಟದ ನೆಲ್ಲಿಕಾಯಿ

ಮಧುಮೇಹ ರೋಗಿಗಳಿಗೆ ಇದು ಅದ್ಭುತವಾಗಿ ಸಹಾಯಮಾಡುವ ಸಸ್ಯವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ದೃಷ್ಟಿ ಸಮಸ್ಯೆಗಳು, ಮಲಬದ್ಧತೆ ಮತ್ತು ಡಯಾಬಿಟಿಸ್ ಗೆ   ಸಂಬಂಧಿಸಿದ ಇತರ ತೊಂದರೆಗಳನ್ನು ಸಹ ತಡೆಯುತ್ತದೆ.

 ಡಯಾಬಿಟಿಸ್ ಗೆ ಹಾಗಲಕಾಯಿ

ಆಯುರ್ವೇದ ಆಚಾರ್ಯರು ಮಧುಮೇಹದಲ್ಲಿ ಅಥವಾ ಡಯಾಬಿಟಿಸ್ ನಲ್ಲಿ ಹಾಗಲಕಾಯಿ ಉಪಯೋಗಿಸಲು ಶಿಫಾರಸು ಮಾಡುತ್ತಾರೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ಎಲೆ ಮತ್ತು ಕಾಯಿಯನ್ನು  ಔಷಧೀಯ ಉದ್ದೇಶಕ್ಕಾಗಿ ಬಳಸಲಾಗುತ್ತದೆ.

ಇದರ  ತೆಳುವಾದ ಹೋಳುಗಳನ್ನು (ಬೀಜಗಳನ್ನು ತೆಗೆದುಹಾಕಿ) ಮತ್ತು ಸ್ವಲ್ಪ ನೀರನ್ನು ಮಿಕ್ಸರ್ನಲ್ಲಿ ಸೇರಿಸಿ ಅದರ ರಸವನ್ನು ತೆಗೆಯಿರಿ. ಮಧುಮೇಹ ರೋಗಿಗಳು ದಿನಕ್ಕೆ 10 – 30 ಮಿಲಿ ಈ ರಸ ಸೇವಿಸಬಹುದು.  ಬೇಯಿಸಿದ ಹಾಗಲಕಾಯಿಯನ್ನು ಸಹ  ತಿನ್ನಬಹುದು.

ಮಧುಮೇಹದಲ್ಲಿ ಬರುವ ಮತ್ತು ದೇಹದ ತೂಕ ಹೆಚ್ಚಾದ ಕಾರಣದಿಂದಾಗಿ ಉಂಟಾಗುವ ನಿಮಿರು ದೌರ್ಬಲ್ಯದ ಪರಿಸ್ಥಿತಿಗಳಲ್ಲಿ ಇದು ತುಂಬಾ ಉಪಯುಕ್ತವಾಗಿದೆ.

ಶುಗರ್ ಕಡಿಮೆ ಮಾಡಲು ದಾಲ್ಚಿನ್ನಿ

ಮಧುಮೇಹಕ್ಕೆ ದಾಲ್ಚಿನ್ನಿ ಬಹಳ ಸಹಾಯಕವಾಗಿದೆ. ಇದು ದೇಹದ ತೂಕವನ್ನು ಇಳಿಸುವುದಲ್ಲದೆ , ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ. ದಾಲ್ಚಿನಿ ಟೀ ಇದರಲ್ಲಿ ಬಹಳ ಉಪಯುಕ್ತ .

ರಕ್ತದ ಸಕ್ಕರೆ ಅಂಶ ಕಡಿಮೆಯಾಗಲು ಅರಿಶಿನ

ಅರಿಶಿನವನ್ನು ನಿಯಮಿತವಾಗಿ ಬಳಸಿದಾಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಡಯಾಬಿಟಿಸ್ ರೋಗಿಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಇದನ್ನು ಬಳಸಬಹುದು. ಡಯಾಬಿಟಿಸ್ನಿಂದ ನಿಮಿರು ದೌರ್ಬಲ್ಯಕ್ಕೆ ಒಳಗಾದ ಪುರುಷರು ಇದನ್ನು ಬಳಸಬಹುದು. ಇದು ಮಧುಮೇಹವನ್ನು ನಿಯಂತ್ರಿಸುವುದಲ್ಲದೆ ವೀರ್ಯವನ್ನು ಸಹ ಶುದ್ಧೀಕರಿಸುತ್ತದೆ. ( Read ಅರಿಶಿನ ನಿಮ್ಮ ಆರೋಗ್ಯಕ್ಕೆ ಹೇಗೆ ಉಪಯುಕ್ತ ? turmeric benefits in kannada )

ಆಹಾರ ನಿಯಂತ್ರಣಗಳು

ನೈಸರ್ಗಿಕ ಗಿಡಮೂಲಿಕೆಗಳ ಸಹಾಯವನ್ನು ತೆಗೆದುಕೊಳ್ಳುವುದರ ಜೊತೆಗೆ , ಮಧುಮೇಹದಿಂದ ಸಾಮಾನ್ಯ ಜೀವನವನ್ನು ನಡೆಸಲು ಉತ್ತಮ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಸಹ ಬಹಳ ಮುಖ್ಯ..  ಮೊದಲನೆಯದಾಗಿ ನಿಮ್ಮ ಆಹಾರದಿಂದ ಸಕ್ಕರೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು . ಹೆಚ್ಚು ಸಕ್ಕರೆ ಅಂಶ ಉಳ್ಳ ಆಹಾರಗಳನ್ನು ಮಿತವಾಗಿ ಸೇವಿಸಬೇಕು . ದೇಹದ ತೂಕ ಹೆಚ್ಚಾಗದಂತೆ ಸಮತೋಲನವಾದ ಆಹಾರ ಸೇವಿಸಬೇಕು .

ವ್ಯಾಯಾಮ

ಮಧುಮೇಹವನ್ನು ನಿಯಂತ್ರಣದಲ್ಲಿಡಲು ವ್ಯಾಯಾಮಗಳು ಬಹಳ ಮುಖ್ಯ. ಪ್ರತಿದಿನ 30 ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮ ಮಾಡುವುದು, ಈ ವಿಷಯದಲ್ಲಿ ಸಹಾಯ ಮಾಡುತ್ತದೆ. ಚುರುಕಾದ ವಾಕಿಂಗ್ ಅಥವಾ ವೇಗವಾಗಿ ನಡೆಯುವುದು ಒಟ್ಟಾರೆ ಅತ್ಯುತ್ತಮ ವ್ಯಾಯಾಮ.

ನಿಯಮಿತವಾಗಿ ನಿಮ್ಮ ವೈದ್ಯರು ಹೇಳಿರುವ ಡಯಾಬಿಟಿಸ್ ಔಷಧಗಳನ್ನು ಸೇವಿಸಿ. ಅವುಗಳನ್ನು ನಿಲ್ಲಿಸಬೇಡಿ . ಪ್ರತಿ ೩ ತಿಂಗಳಿಗೊಮ್ಮೆ ನಿಮ್ಮ ರಕ್ತ ತಪಾಸಣೆ ಮಾಡಿಸಿಕೊಳ್ಳಿ . ಇದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟ ತಿಳಿಯುತ್ತದೆ . ಔಷಧಗಳಲ್ಲಿ ಅಥವಾ ಜೀವನ ಶೈಲಿಯಲ್ಲಿ ಯಾವುದೇ ಬದಲಾವಣೆ ಮಾಡುವ ಮುನ್ನ ನಿಮ್ಮ ಕುಟುಂಬ ವೈದ್ಯರ ಸಲಹೆ ತೆಗೆದುಕೊಳ್ಳಿ .

ಲೇಖಕಿ : ಡಾ.ಸವಿತಾ ಸೂರಿ, ಸಲಹೆಗಾರ ಆಯುರ್ವೇದ ವೈದ್ಯೆ

ಉಚಿತ ಆಯುರ್ವೇದ ಸಮಾಲೋಚನೆ

+91 9945995660 / +91 9448433911 ಗೆ ಕರೆ ಮಾಡಿ

ವಾಟ್ಸ್ ಅಪ್ + 91 6360108663 /