ಡಯಾಬಿಟೀಸ್, ಪಿ.ಸಿ.ಒ.ಎಸ್, ತೂಕ ನಷ್ಟಕ್ಕಾಗಿ ಹಾಗಲಕಾಯಿಯನ್ನು  ಬಳಸುವುದು ಹೇಗೆ ?

ಹಾಗಲಕಾಯಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಮತ್ತು ಉಪಯೋಗಗಳನ್ನು ಹೊಂದಿದೆ. ಪಿಸಿಓಎಸ್, ಸ್ತ್ರೀ ಬಂಜೆತನ ಮತ್ತು ಡಯಾಬಿಟಿಸ್ನಲ್ಲಿ ಇದು ತುಂಬಾ ಉಪಯುಕ್ತ  . ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಪರಿವಿಡಿ

ಆಯುರ್ವೇದದಲ್ಲಿ ಹಾಗಲಕಾಯಿ

ಹಾಗಲಕಾಯಿಯ ಆಯುರ್ವೇದ ಗುಣಗಳು

ಹಾಗಲಕಾಯಿಯ ಆಯುರ್ವೇದ ಆರೋಗ್ಯ ಪ್ರಯೋಜನಗಳು ಮತ್ತು ಉಪಯೋಗಗಳು

ಹಾಗಲಕಾಯಿ ಸೇವಿಸುವುದು ಹೇಗೆ ?

Read this article in English Ayurveda Health Benefits of Bitter Gourd or Bitter Melon (Karela)

ಆಯುರ್ವೇದದಲ್ಲಿ ಹಾಗಲಕಾಯಿ

ಈ ಹಣ್ಣು ಕುಕುರ್ಬಿಟೇಶಿಯ ಕುಟುಂಬಕ್ಕೆ ಸೇರಿದ್ದು ಮತ್ತು ಅದರ ಸಸ್ಯದ ಸಸ್ಯಶಾಸ್ತ್ರೀಯ ಹೆಸರು ಮೊಮೊರ್ಡಿಕಾ ಚರಂತಿಯಾ. ಈ ಸಸ್ಯವು ಬಳ್ಳಿಯಾಗಿದೆ. ಇದರ ಹಣ್ಣುಗಳು ರುಚಿಯಲ್ಲಿ ತುಂಬಾ ಕಹಿಯಾಗಿರುತ್ತವೆ. ಇದರ ಪಲ್ಯ , ಗೊಜ್ಜು , ಚಿಪ್ಸ್ ಮುಂತಾದವುಗಳನ್ನು  ಭಾರತದಲ್ಲಿ  ಪ್ರತಿಯೊಬ್ಬರೂ ಇಷ್ಟಪಡುತ್ತಾರೆ (ಮಕ್ಕಳನ್ನು ಹೊರತುಪಡಿಸಿ). ಮೊಡವೆ, ಗುಳ್ಳೆಗಳನ್ನು (acne, pimple) , ಸೋರಿಯಾಸಿಸ್ (psoriasis ), ಮಧುಮೇಹ (diabetes) ಇತ್ಯಾದಿಗಳ ಚಿಕಿತ್ಸೆಗಾಗಿ ಆಯುರ್ವೇದ ವೈದ್ಯರು ಇದನ್ನು ಉಪಯೋಗಿಸಲು ಸೂಚಿಸಿದ್ದಾರೆ. ಇದು ರಕ್ತವನ್ನು ( Rakta dhtu) ಶುದ್ಧೀಕರಿಸಲು ಸಹಾಯ ಮಾಡುತ್ತದೆ.

ಹಾಗಲಕಾಯಿಯ  ಆಯುರ್ವೇದ ಗುಣಗಳು

ಆಯುರ್ವೇದ ಗ್ರಂಥಗಳು ಈ ಹಣ್ಣಿನ ಗುಣಲಕ್ಷಣಗಳನ್ನು ಈ ರೀತಿ ವಿವರಿಸುತ್ತವೆ .

ಇದು ರುಚಿಯಲ್ಲಿ ತುಂಬಾ ಕಹಿಯಾಗಿರುತ್ತದೆ (tikta rasa or bitter taste ) ಮತ್ತು ಕಟು ರಸವನ್ನು ( katu rasa ) ಹೊಂದಿರುತ್ತದೆ . ಇದು ಜೀರ್ಣಕ್ರಿಯೆಯ ( digestion) ನಂತರವೂ ತೀವ್ರವಾದ ರುಚಿಯನ್ನು ಉಳಿಸಿಕೊಳ್ಳುತ್ತದೆ. ಈ ತರಕಾರಿ ಪಚನವಾಗಲು ಹಗುರವಾಗಿರುತ್ತದೆ . ಇದು ದೇಹದ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ದೇಹದ ನೀರಿನ ಪ್ರಮಾಣ ಕಡಿಮೆ ಮಾಡುತ್ತದೆ . ಆದ್ದರಿಂದ, ನೀವು ಈ ತರಕಾರಿಯನ್ನು ಸೇವಿಸಿದಾಗ, ಹೆಚ್ಚಾಗಿ ನೀರನ್ನು ಕುಡಿಯುವುದು ಬಹಳ ಮುಖ್ಯ..  ಇದು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಮತ್ತು ಹಸಿವನ್ನು ಹೆಚ್ಚಿಸುತ್ತದೆ. ಎಲೆ ಮತ್ತು ಹಣ್ಣುಗಳನ್ನು ಔಷಧೀಯ ಉದ್ದೇಶಕ್ಕಾಗಿ ಬಳಸಲಾಗುತ್ತದೆ.

ಇದು  ಕಫ ದೋಶ (kapha dosha ) ಮತ್ತು ಪಿತ್ತ ದೋಶವನ್ನು (pitta dosha ) ಸಮತೋಲನಗೊಳಿಸುತ್ತದೆ ಮತ್ತು  ವಾತ  ದೋಶವನ್ನು (vata dosha ) ಹೆಚ್ಚಲು  ಬಿಡುವುದಿಲ್ಲ .

ಹಾಗಲಕಾಯಿಯ ಆಯುರ್ವೇದ ಆರೋಗ್ಯ ಪ್ರಯೋಜನಗಳು ಉಪಯೋಗಗಳು

ಇದನ್ನು ವಿವಿಧ ಆರೋಗ್ಯ ಪರಿಸ್ಥಿತಿಗಳಿಗೆ ಪರಿಹಾರವಾಗಿ ಬಳಸಲಾಗುತ್ತದೆ. ಆಯುರ್ವೇದದ ಪ್ರಾಚೀನ ಗ್ರಂಥಗಳು ಇದರ ಉಪಯುಕ್ತತೆಯನ್ನು ಈ ರೀತಿ ಹೇಳುತ್ತವೆ.

ಹಾಗಲಕಾಯಿಯ  ಎಲೆಗಳ ಬಳಕೆ

ಇದನ್ನು ಆಹಾರವಾಗಿ ಬಳಸಬಹುದು (ಇತರ ಆಹಾರಗಳೊಂದಿಗೆ ಸೇವಿಸಬಹುದು). ಇದು ಪಿತ್ತ ದೋಷವನ್ನು ಹೆಚ್ಚಿಸುತ್ತದೆ.  ಇದರ ರಸವನ್ನು ಕರುಳಿನ ಹುಳುಗಳನ್ನು ಕಡಿಮೆ ಮಾಡಲು ಮತ್ತು ಸೋಂಕಿತ ಗಾಯಗಳಿಗೆ ಔಷಧಿಯಾಗಿ ಬಳಸಬಹುದು.

ಹಾಗಲಕಾಯಿ

ಆಯುರ್ವೇದ ಆಚಾರ್ಯರು ಇದನ್ನು  ಜೀರ್ಣಕ್ರಿಯೆ ಸುಧಾರಿಸಲು ಮತ್ತು ಮಲಬದ್ಧತೆಯನ್ನು ( constipation ) ನಿವಾರಿಸಲು ಶಿಫಾರಸು ಮಾಡುತ್ತಾರೆ. ಇದನ್ನು ಅವೃಷ್ಯ ಎಂದು ಕರೆಯಲಾಗುತ್ತದೆ ಅಂದರೆ ಇದು ಲೈಂಗಿಕ ಶಕ್ತಿ ಹೆಚ್ಚಿಸುವುದಿಲ್ಲ. ಆದ್ದರಿಂದ ಇದನ್ನು ನಿಮಿರು ದೌರ್ಬಲ್ಯ ದಲ್ಲಿ  ಬಳಸಬಾರದು.

ಚರ್ಮದ ಕಾಯಿಲೆಗಳ ಮೇಲೆ ಪರಿಣಾಮ

ಹಾಗಲಕಾಯಿ ರಕ್ತ ಶುದ್ಧೀಕರಣಕಾರಕವಾಗಿ ಕಾರ್ಯನಿರ್ವಹಿಸುವುದರಿಂದ, ಇದನ್ನು ಸೋರಿಯಾಸಿಸ್ , ಮೊಡವೆ ಮತ್ತು ದದ್ದುಗಳಂತಹ ಚರ್ಮದ ಕಾಯಿಲೆಗಳಲ್ಲಿ ಬಳಸಲಾಗುತ್ತದೆ.

ದೇಹದ ತೂಕದ ಮೇಲೆ  ಪರಿಣಾಮ

ಹಾಗಲಕಾಯಿ ಬೊಜ್ಜನ್ನು ಒಣಗಿಸುವ ಕೆಲಸವನ್ನು ಮಾಡುತ್ತದೆ. ಇದು ಕೊಬ್ಬಿನ ಅಂಗಾಂಶವನ್ನು ಒಣಗಿಸುತ್ತದೆ ಮತ್ತು ಕೊಬ್ಬಿನ ಚಯಾಪಚಯವನ್ನು ಹೆಚ್ಚಿಸುತ್ತದೆ. ಈ ಗುಣಲಕ್ಷಣಗಳೊಂದಿಗೆ, ಇದು ಅತ್ಯುತ್ತಮ ತೂಕ ನಷ್ಟ ಮೂಲಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಆಯುರ್ವೇದದ ಆಚಾರ್ಯರು ಇದನ್ನು ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಸಲುವಾಗಿ  ಶಿಫಾರಸು ಮಾಡುತ್ತಾರೆ.

ಡಯಾಬಿಟಿಸ್ ಮೇಲೆ ಪರಿಣಾಮ

ಆಯುರ್ವೇದ ಆಚಾರ್ಯರು ಮಧುಮೇಹದಲ್ಲಿ ಅಥವಾ ಡಯಾಬಿಟಿಸ್ ನಲ್ಲಿ ಹಾಗಲಕಾಯಿ ಉಪಯೋಗಿಸಲು ಶಿಫಾರಸು ಮಾಡುತ್ತಾರೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ.

ಪುರುಷ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ

ಹಾಗಲಕಾಯಿ ಪುರುಷರಲ್ಲಿ ನಿಮಿರುರೋಗಕ್ಕೆ  ಕಾರಣವಾಗುವ ಎರಡು ಪ್ರಮುಖ ಪರಿಸ್ಥಿತಿಗಳನ್ನು ನಿಯಂತ್ರಿಸುತ್ತದೆ . ಇದು ಮಧುಮೇಹವನ್ನು ಸುಧಾರಿಸುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ಮಧುಮೇಹದಲ್ಲಿ ಬರುವ ಮತ್ತು ದೇಹದ ತೂಕ ಹೆಚ್ಚಾದ ಕಾರಣದಿಂದಾಗಿ ಉಂಟಾಗುವ ನಿಮಿರು ದೌರ್ಬಲ್ಯದ ಪರಿಸ್ಥಿತಿಗಳಲ್ಲಿ ಇದು ತುಂಬಾ ಉಪಯುಕ್ತವಾಗಿದೆ.

ಸ್ತ್ರೀ ಬಂಜೆತನ ಮತ್ತು ಪಿಸಿಓಎಸ್ / ಪಿಸಿಒಡಿ ಮೇಲೆ ಪರಿಣಾಮಗಳು

ಹಾಗಲಕಾಯಿಯನ್ನು  ಅನಿಯಮಿತ ಮುಟ್ಟನ್ನು ನಿಯಂತ್ರಿಸಲು ಬಳಸಲಾಗುತ್ತದೆ. ಹಾಗಲಕಾಯಿ ಎದೆ ಹಾಲನ್ನು ಸಹ ಶುದ್ಧೀಕರಿಸುತ್ತದೆ . ಜೀವಕೋಶಗಳ ಇನ್ಸುಲಿನ್ ಸಂವೇದನೆಯನ್ನು  ಸುಧಾರಿಸುವ ಮೂಲಕ  ಪಿಸಿಒಡಿ ಅಥವಾ ಪಿಸಿಓಎಸ್ನಲ್ಲಿ ಸಹಾಯ ಮಾಡುತ್ತದೆ. ಇದು ದೇಹದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಸ್ತ್ರೀ ಫಲವತ್ತತೆಯನ್ನು ಸುಧಾರಿಸುತ್ತದೆ. ಆದ್ದರಿಂದ ಹಾಗಲಕಾಯಿಯನ್ನು  PCOS ಕ್ಯಾಪ್ಸುಲ್‌ಗಳಲ್ಲಿ ಮುಖ್ಯ ಘಟಕಾಂಶವಾಗಿ ಬಳಸಲಾಗುತ್ತದೆ, ಇದು ಪಿಸಿಒಡಿ ಅಥವಾ ಪಿಸಿಓಎಸ್‌ಗೆ ( PCOD or PCOS ) ಆಯುರ್ವೇದ ಚಿಕಿತ್ಸೆಯಾಗಿದೆ.

ಹಾಗಲಕಾಯಿ  ಸೇವಿಸುವುದು ಹೇಗೆ?

ಇದರ  ತೆಳುವಾದ ಹೋಳುಗಳನ್ನು (ಬೀಜಗಳನ್ನು ತೆಗೆದುಹಾಕಿ) ಮತ್ತು ಸ್ವಲ್ಪ ನೀರನ್ನು ಮಿಕ್ಸರ್ನಲ್ಲಿ ಸೇರಿಸಿ ಅದರ ರಸವನ್ನು ತೆಗೆಯಿರಿ. ಮಧುಮೇಹ ರೋಗಿಗಳು ದಿನಕ್ಕೆ 10 – 30 ಮಿಲಿ ಈ ರಸ ಸೇವಿಸಬಹುದು.  ಬೇಯಿಸಿದ ಹಾಗಲಕಾಯಿಯನ್ನು ಸಹ  ತಿನ್ನಬಹುದು.

ತೆಗೆದುಕೊಳ್ಳಬೇಕಾದ ಪ್ರಮಾಣ

– ತಾಜಾ ರಸ 10-20 ಮಿಲಿ. ಪ್ರತಿ ದಿನ

ಆದರೆ ಯಾವುದೇ ಆಯುರ್ವೇದ ಮನೆಮದ್ದುಗಳನ್ನು ಪ್ರಯತ್ನಿಸುವ ಮೊದಲು, ಅರ್ಹ ವೈದ್ಯರನ್ನು ಸಂಪರ್ಕಿಸಿ.

ಲೇಖಕಿ : ಡಾ.ಸವಿತಾ ಸೂರಿ, ಸಲಹೆಗಾರ ಆಯುರ್ವೇದ ವೈದ್ಯೆ

ಉಚಿತ ಆಯುರ್ವೇದ ಸಮಾಲೋಚನೆ

+91 9945995660 / +91 9448433911 ಗೆ ಕರೆ ಮಾಡಿ

ವಾಟ್ಸ್ ಅಪ್ + 91 6360108663