ಕೂದಲಿನ ಆರೋಗ್ಯಕ್ಕೆ ತಾಮ್ರದ ನೀರು – ಆಯುರ್ವೇದ ಮಾಹಿತಿ

ನಮ್ಮ ದೇಹಕ್ಕೆ ತಾಮ್ರ ಅಗತ್ಯವಾದ ಖನಿಜವಾಗಿದೆ .  ಹೈಡ್ರೋಜನ್ ಆಕ್ಸಿಡೀಕರಣ, ಮೆಲನಿನ್ ಅಭಿವೃದ್ಧಿ (ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡುವ ದೇಹದ ರಾಸಾಯನಿಕ ) ಮತ್ತು ಯಕೃತ್ತಿನಲ್ಲಿ ಸಂಗ್ರಹವಾದ ಹಳೆಯ ಕೆಂಪು ರಕ್ತ ಕಣಗಳಿಂದ ಕಬ್ಬಿಣವನ್ನು ಬಿಡುಗಡೆ ಮಾಡಲು , ಇವೇ  ಮುಂತಾದ ಕ್ರಿಯೆಗಳಿಗೆ ಕ್ರಿಯಾ ವರ್ಧಕವಾಗಿ ತಾಮ್ರ ಕೆಲಸ ಮಾಡುತ್ತದೆ . ತಾಮ್ರದ ನೀರಿನ ಮೂಲಕ ದೇಹಕ್ಕೆ ಈ ಖನಿಜವನ್ನು ಪೂರೈಸಬಹುದು. ಇದೆ ಕಾರಣಕ್ಕಾಗಿ, ಆಯುರ್ವೇದವು ತಾಮ್ರದ ಪಾತ್ರೆಗಳಿಂದ ನೀರನ್ನು ಕುಡಿಯಲು ಶಿಫಾರಸು ಮಾಡುತ್ತದೆ.

Read this article in English Copper Water Benefits for Hair Ayurveda

ವಿಷಯ ಸೂಚಿ

ಆಯುರ್ವೇದದಲ್ಲಿ ಕೂದಲಿನ ಆರೋಗ್ಯದ ಮಹತ್ವ

ಮಾನವರಿಗೆ ತಾಮ್ರ ಬಹಳ ಮುಖ್ಯ ಏಕೆ  ?

ತಾಮ್ರದ ನೀರು ಎಂದರೇನು?

ಆಯುರ್ವೇದದಲ್ಲಿ ಕೂದಲಿನ ಆರೋಗ್ಯದ ಮಹತ್ವ

ಕೂದಲು ಉದುರುವುದು ರೋಗವಲ್ಲ . ಇದು ಒಂದು ರೋಗ ಲಕ್ಷಣ ಅಷ್ಟೇ.   ಆಯುರ್ವೇದದಲ್ಲಿ  ಕೂದಲಿನ ಉದುರುವಿಕೆಗೆ ಮಹತ್ವ ನೀಡಿ , ಅದನ್ನು ಆಳವಾಗಿ ಅಧ್ಯಯನ ಮಾಡಲಾಗಿದೆ . ಇದರಿಂದಲೇ  ಹಲವಾರು ಕೇಶ ತೈಲಗಳು, ನೈಸರ್ಗಿಕ ಶ್ಯಾಂಪೂಗಳ ವಿಕಸನವಾಗಿರುವುದು . ಆಧುನಿಕ 21 ನೇ ಶತಮಾನದ ಮಹಿಳೆ ಪುರುಷರಂತೆ ತನ್ನ ಕೂದಲನ್ನು ಚಿಕ್ಕದಾಗಿಸಿಕೊಂಡರೆ, ಹಿಂದಿನ ಕಾಲದ ಭಾರತೀಯ ಪರಂಪರೆಯಲ್ಲಿ ಉದ್ದ, ನಯವಾದ ಮತ್ತು ಹೊಳಪುಳ್ಳ ಕೂದಲಿನ ಒಡೆಯರಾಗಲು ಮಹತ್ವ ನೀಡುತ್ತಿದ್ದರು. ಕೂದಲು ಪುರುಷರ ಮತ್ತು ಸ್ತ್ರೀಯರ ಸೌಂದರ್ಯ ಹೆಚ್ಚಿಸುತ್ತದೆ .  ಇದನ್ನು ಪ್ರಾಚೀನ  ದೇವಾಲಯಗಳ, ಚಿತ್ರಗಳಲ್ಲಿ ಹಾಗು ವಿಗ್ರಹಗಳಲ್ಲಿ ನೋಡಬಹುದು . ಸೌಂದರ್ಯಕ್ಕಿಂತ ಹೆಚ್ಚಾಗಿ, ಬ್ರಹ್ಮಾಂಡದಿಂದ ಹೊರಸೂಸಲ್ಪಟ್ಟ ಕಾಸ್ಮಿಕ್ ಶಕ್ತಿಯನ್ನು ಸಂಗ್ರಹಿಸಲು ನೈಸರ್ಗಿಕ ಆಂಟೆನಾಗಳಂತೆ ಕೂದಲನ್ನು ಪ್ರಕೃತಿಯಿಂದ ನಮಗೆ ನೀಡಲಾಗಿದೆ ಎಂದು ಹಲವಾರು ಜ್ಞಾನಿಗಳು ನಂಬುತ್ತಾರೆ . ಚಕ್ರಗಳು ಸಕ್ರಿಯವಾಗಿದ್ದರೆ, ಕೂದಲು ಬೇಗ ಬೆಳ್ಳಗಾಗುವುದಿಲ್ಲ . ಅಲ್ಲದೆ  ಕೂದಲೀನಾ ಅರೋಗ್ಯ ,  ಹಾರ್ಮೋನುಗಳ ಸ್ಥಿತಿಯನ್ನು ಸಹ ಸೂಚಿಸುತ್ತದೆ.

ಮಾನವರಿಗೆ ತಾಮ್ರ ಬಹಳ ಮುಖ್ಯ ಏಕೆ  ?

ತಾಮ್ರವು ಮಾನವನ ದೇಹದಲ್ಲಿ ಅತ್ಯಂತ ಹೆಚ್ಚಾಗಿ ಕಂಡುಬರುವ ಖನಿಜಗಳಲ್ಲಿ ಮೂರನೆಯದಾಗಿದೆ . ಇದು ಸೆರುಲೋಪ್ಲಾಸ್ಮಿನ್ ಎಂಬ ಪ್ಲಾಸ್ಮಾ ಪ್ರೋಟೀನ್‌ ಸಹಾಯದಿಂದ ರಕ್ತ ಪ್ರವಾಹದಲ್ಲಿ ಸಾಗುತ್ತದೆ .  ಮಾನವನ ದೇಹದಲ್ಲಿ ಪಿತ್ತಜನಕಾಂಗ ಮತ್ತು ಮೆದುಳು ಅತಿದೊಡ್ಡ ಪ್ರಮಾಣದ ತಾಮ್ರವನ್ನು ಹೊಂದಿರುತ್ತದೆ ಹಾಗು ಈ ಖನಿಜ ಇತರ ಅಂಗಗಳಲ್ಲಿ ಸಣ್ಣ ಪ್ರಮಾಣದಲ್ಲಿರುತ್ತದೆ.

  1. ತಾಮ್ರವು ನಮ್ಮ ದೇಹದನೈಸರ್ಗಿಕ ವರ್ಣದ್ರವ್ಯವಾದ ಮೆಲನಿನ್ ಗೆ ಬೇಕಾದ ಅತ್ಯಗತ್ಯ ಖನಿಜವಾಗಿದೆ . ಮೆಲನಿನ್ ಚರ್ಮ, ಕೂದಲು ಮತ್ತು ಕಣ್ಣುಗಳಿಗೆ ಬಣ್ಣವನ್ನು ನೀಡುವ ವರ್ಣದ್ರವ್ಯವಾಗಿದೆ  . ಅಲ್ಲದೆ ತಾಮ್ರವು , ರಕ್ತನಾಳಗಳನ್ನು ಗಟ್ಟಿಯಾಗದಂತೆ ಮತ್ತು ಒಡೆಯದಂತೆ ತಡೆಯುವ  ಕಿಣ್ವವನ್ನು ತಯಾರಿಸಲು ಅಗತ್ಯವಾಗಿರುತ್ತದೆ.
  2. ದೇಹದ ಅಂಗ ಹಾಗು ಅಂಗಾಂಶಗಳನ್ನು ಬಲವಾಗಿ ಹಿಡಿದು ಬಂಧಿಸುವ ಕಾರ್ಯವನ್ನು ಇಲಾಸ್ಟಿನ್ ಹಾಗು ಕೊಲ್ಲಾಜೆನ್ ಎಂಬ ಅಂಗಾಂಶಗಳು ಮಾಡುತ್ತವೆ . ತಾಮ್ರವು ಕೊಲ್ಲಾಜೆನ್ ಉತ್ಪಾದನೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಕೊಲ್ಲಾಜೆನ್ಮೂಳೆ, ಕಾರ್ಟಿಲೆಜ್, ಚರ್ಮ ಮತ್ತು ಸ್ನಾಯುರಜ್ಜು ಇವುಗಳ ರಚನೆಗೆ ಕಾರಣವಾದ ಪ್ರೋಟೀನ್.
  3. ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ  ತಾಮ್ರವು ದೊರಕದಿದ್ದರೆ , ಕೆಂಪುರಕ್ತ ಕಣದಲ್ಲಿರುವ ಹಿಮೋಗ್ಲೋಬಿನ್ ಉತ್ಪಾದನೆಯು ಕಡಿಮೆಯಾಗುತ್ತದೆ ಮತ್ತು ಇದು  ರಕ್ತಹೀನತೆಗೆ ಕಾರಣವಾಗುತ್ತದೆ. ರಕ್ತಹೀನತೆ ಎಂದರೆ ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗಿದೆ ಎಂದು ಅರ್ಥ . ಹಿಮೋಗ್ಲೋಬಿನ್ ಕೆಲವು ಪ್ರೋಟೀನ್ಗಳು ಮತ್ತು ಕಬ್ಬಿಣದಿಂದ ಕೂಡಿದೆ. ಇದು ನಮ್ಮ ಎಲ್ಲಾ ಕೆಂಪು ರಕ್ತ ಕಣಗಳಿಗೆ ಆಮ್ಲಜನಕದ ವಾಹಕವಾಗಿದೆ.  ಶಕ್ತಿಯನ್ನು ಉತ್ಪಾದಿಸಲು ನಮಗೆ ಆಮ್ಲಜನಕ ಬೇಕಾಗುತ್ತದೆ. ಹಿಮೋಗ್ಲೋಬಿನ್‌ನ ಅಂಶ ಕಡಿಮೆಯಾದರೆ   ನಮ್ಮ  ಶಕ್ತಿಯೂ  ಕಡಿಮೆಯಾಗುತ್ತದೆ . ಇದರಿಂದಾಗಿ ಆಯಾಸವಾಗುತ್ತದೆ. ರಕ್ತ ಹೀನತೆಯಿಂದ  ಚರ್ಮದ ಆರೋಗ್ಯ ಕೆಡುತ್ತದೆ ಹಾಗು ಕೂದಲು ಉದುರಲು ಪ್ರಾರಂಭವಾಗುತ್ತದೆ ರಕ್ತಹೀನತೆಗೆ ಚಿಕಿತ್ಸೆ ನೀಡಿದರೆ, ಕೂದಲು ಉದುರುವಿಕೆ ತಾನಾಗೇ ನಿಲ್ಲುತ್ತದೆ .
  4. . ತಾಮ್ರವು ಆರೋಗ್ಯಕರಚರ್ಮ ಮತ್ತು ಕೂದಲಿಗೆ  ಅತ್ಯಗತ್ಯವಾಗಿದೆ .  ತಾಮ್ರದ ನೀರಿನ ಮೂಲಕ ದೇಹಕ್ಕೆ ಬೇಕಾದ ತಾಮ್ರ ಪಡೆಯಬಹುದು

ತಾಮ್ರದ ನೀರು ಎಂದರೇನು?

ತಾಮ್ರದ ಪಾತ್ರೆಯಲ್ಲಿ  ರಾತ್ರಿಯಿಡೀ ಸಂಗ್ರಹವಾಗಿರುವ ನೀರನ್ನು  ಮರುದಿನ ಕುಡಿಯುವಂತೆ  ಆಯುರ್ವೇದ ಶಿಫಾರಸು ಮಾಡುತ್ತದೆ. ಇದನ್ನು ಆಯುರ್ವೇದ ದೈನಂದಿನ ದಿನಚರಿಯಲ್ಲಿ ಅಥವಾ ದಿನಾಚರ್ಯದಲ್ಲಿ ಉಲ್ಲೇಖಿಸಲಾಗಿದೆ. ತಾಮ್ರದ ಪಾತ್ರೆಯನ್ನು ಪ್ರತಿದಿನ ಸ್ವಚ್ಚ  ಗೊಳಿಸಬೇಕು. ಕುಡಿಯುವ  ನೀರಿನ ತಾಮ್ರದ ಪಾತ್ರೆಯನ್ನು ಸ್ವಚ್ಛಗೊಳಿಸಲು  ಈ ವಿಧಾನವನ್ನು ಅನುಸರಿಸಿ. ತಾಮ್ರದ ಪಾತ್ರೆಯನ್ನು  ಹುಣಸೆ ರಸದಿಂದ ಚೆನ್ನಾಗಿ ತೊಳೆಯಿರಿ. ನಿಂಬೆ ಗಾತ್ರದ ಹುಣಸೆಹಣ್ಣನ್ನು 15 ನಿಮಿಷಗಳ ಕಾಲ ನೆನೆಸಿಡಿ. ಈ ನೆನೆಸಿದ ಹುಣಸೆಹಣ್ಣಿನೊಂದಿಗೆ ತಾಮ್ರದ ಪಾತ್ರೆಯನ್ನು ಸ್ಕ್ರಬ್ ಮಾಡಿ. ಇದನ್ನು 5 ನಿಮಿಷಗಳ ಕಾಲ ಬಿಡಿ. ನಂತರ  ಡಿಶ್ ವಾಶ್ ಸೋಪ್ ಮತ್ತು ಶುದ್ಧ ನೀರಿನಿಂದ ತೊಳೆಯಿರಿ. ಈ ಪಾತ್ರೆಯನ್ನು ಶುದ್ಧ ಕುಡಿಯುವ   ನೀರಿನಿಂದ ತುಂಬಿಸಿ ರಾತ್ರಿಯಿಡೀ ಬಿಡಿ. ಇದನ್ನು ತಾಮ್ರದ ನೀರು ಎಂದು ಕರೆಯಲಾಗುತ್ತದೆ. ಮರುದಿನ ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ದೇಹಕ್ಕೆ ಬೇಕಾದ ತಾಮ್ರವನ್ನು  ಉತ್ತಮ ರೀತಿಯಲ್ಲಿ ಪೂರೈಸುತ್ತದೆ . ಇದರಿಂದ ಕೂದಲು ಉದುರುವುದು ನಿಲ್ಲುತ್ತದೆ .

ಸಾಮಾನ್ಯವಾಗಿ, ಹೆಚ್ಚಿನ ರೋಗಗಳು ರಕ್ತದಲ್ಲಿನ  ಕಬ್ಬಿಣದ ಅಂಶವನ್ನು ಕಡಿಮೆ ಮಾಡುತ್ತವೆ .  ಮತ್ತು ತಾಮ್ರದ ನೀರನ್ನು ಕುಡಿಯುವುದು , ನೆನಸಿದ ಖರ್ಜೂರ , ಅಥವಾ ಒಣದ್ರಾಕ್ಷಿ ತಿನ್ನುವುದು , ಇವೇ ಮೊದಲಾದ ಮನೆ ಮದ್ದುಗಳು ರಕ್ತಹೀನತೆಯನ್ನು ಸರಿಪಡಿಸಲು ಸಹಾಯ ಮಾಡುತ್ತವೆ .

ಲೇಖಕಿ : ಡಾ.ಸವಿತಾ ಸೂರಿ, ಸಲಹೆಗಾರ ಆಯುರ್ವೇದ ವೈದ್ಯೆ

ಉಚಿತ ಆಯುರ್ವೇದ ಸಮಾಲೋಚನೆ

+91 9945995660 / +91 9448433911 ಗೆ ಕರೆ ಮಾಡಿ

ವಾಟ್ಸ್ ಅಪ್ + 91 6360108663 /