ಖರ್ಜೂರದ ಅರೋಗ್ಯ ಲಾಭಗಳು –  ಆಯುರ್ವೇದದ ಪ್ರಕಾರ dates health benefits kannada

ಖರ್ಜೂರಗಳನ್ನು ಆಯುರ್ವೇದದಲ್ಲಿ ನಿಮಿರು ದೌರ್ಬಲ್ಯ ( ಗಂಡಸರಲ್ಲಿ ನಿಮಿರು ದೌರ್ಬಲ್ಯ Erectile Dysfunction or Impotence in Kannada ) , ಶೀಘ್ರ ಸ್ಖಲನ , ಕಡಿಮೆ ವೀರ್ಯಾಣುಗಳ ಇರುವಿಕೆ ( ವೀರ್ಯಾಣುಗಳ ಸಂಖ್ಯೆ ಹಾಗು ಚಲನೆ ಹೆಚ್ಚಿಸಲು ಅತ್ಯುತ್ತಮ ಒಣ ಹಣ್ಣುಗಳು) ಇಂತಹ ಸಂಧರ್ಭಗಳಲ್ಲಿ ಬಳಸುವಂತೆ ಶಿಫಾರಸು ಮಾಡಲಾಗುತ್ತದೆ. ಅಲ್ಲದೆ ಗರ್ಭಿಣಿಯರಿಗೂ ಇದು ಉತ್ತಮವಾದ ಆಹಾರವಾಗಿದೆ .

Read this article in English Ayurveda Health Benefits of Dates or Khajur

ಖರ್ಜೂರದ ಹಣ್ಣುಗಳು ವಿಶ್ವವ್ಯಾಪಿ ಪ್ರಸಿದ್ಧವಾಗಿವೆ  ಮತ್ತು ಇದರ ಔಷಧೀಯ ಗುಣಗಳನ್ನು ವಿಜ್ಞಾನಿಗಳು ಮತ್ತು ಆಯುರ್ವೇದ ಆಚಾರ್ಯರು ಹೊಗಳುತ್ತಾರೆ .

ವಿಷಯ ಸೂಚಿ

ಖರ್ಜೂರದ ಆಯುರ್ವೇದೀಯ ಗುಣ

ನಿಮಿರು ದೌರ್ಬಲ್ಯದಲ್ಲಿ ಹಾಗು ಕಡಿಮೆ ವೀರ್ಯಾಣುಗಳಿದ್ದಾಗ ಖರ್ಜುರ ಬಳಸುವುದು ಹೇಗೆ ?

ಸಂಧಿವಾತ ಮತ್ತು ಕೀಲು ನೋವಿನಲ್ಲಿ ಉಪಯುಕ್ತತೆ

ಮಲಬದ್ಧತೆಗೆ ಖರ್ಜೂರ ರಾಮಬಾಣ

ಸಿಸ್ಟೈಟಿಸ್ ಮತ್ತು ಯುಟಿಐನಲ್ಲಿ

ಸಣ್ಣಗಿರುವವರು ದಪ್ಪಗಾಗಲು ಖರ್ಜೂರ

ಖರ್ಜೂರವನ್ನು ಗರ್ಭವತಿಯರು  ಹೇಗೆ ಬಳಸಬೇಕು?

ಅಸಿಡಿಟಿ ಹಾಗು ಗ್ಯಾಸ್ ತೊಂದರೆಗಳಲ್ಲಿ ಖರ್ಜೂರದ ಉಪಯುಕ್ತತೆ

ಖರ್ಜೂರದ ಆಯುರ್ವೇದೀಯ ಗುಣ

Check 7 Best Soft Dates or Khajur Available Online in India

ಆಯುರ್ವೇದದಲ್ಲಿ ಈ ಹಣ್ಣುಗಳಿಗೆ ಸಂಸ್ಕೃತ ಹೆಸರು ಖಾರ್ಜುರಾ. ಇವು ವಾತ ದೋಷ  ಮತ್ತು ಪಿತ್ತ ದೋಷಗಳನ್ನು  ಸಮತೋಲನಗೊಳಿಸುತ್ತವೆ

ಆಯುರ್ವೇದದ ಪ್ರಕಾರ ಖರ್ಜೂರ  ರುಚಿಗೆ ಸಿಹಿಯಾಗಿರುತ್ತವೆ (ಮಧುರ ರಸ) ಮತ್ತು ಅಂಗಾಂಶಗಳ ತೇವಾಂಶವನ್ನು ಹೆಚ್ಚಿಸುತ್ತದೆ (ಸ್ನಿಗ್ಧಾ). ಇದನ್ನು  ಜೀರ್ಣಿಸಿಕೊಳ್ಳಲು ಸ್ವಲ್ಪ ಕಷ್ಟ  (ಗುರು) . ದೇಹ ಶೀತಕವಾಗಿ (ಶೀತ ವೀರ್ಯ ) ಕಾರ್ಯನಿರ್ವಹಿಸುತ್ತದೆ.

ನಿಮಿರು ದೌರ್ಬಲ್ಯದಲ್ಲಿ ಹಾಗು ಕಡಿಮೆ ವೀರ್ಯಾಣುಗಳಿದ್ದಾಗ ಖರ್ಜುರ ಬಳಸುವುದು ಹೇಗೆ ?

ಇವನ್ನು ವೃಶ್ಯ ಅಥವಾ ಕಾಮೋತ್ತೇಜಕ ಹಣ್ಣುಗಳು ಎಂದು ಪ್ರಶಂಸಿಸಲಾಗುತ್ತದೆ. ಆದ್ದರಿಂದ  ಲೈಂಗಿಕ ಶಕ್ತಿ ( ಲೈಂಗಿಕ ಶಕ್ತಿ ಹೆಚ್ಚಿಸಲು 5 ಸೂಪರ್ ಹಣ್ಣುಗಳು 5 Fruits for Erectile Dysfunction in Kannada ), ಕಾಮೋತ್ತೇಜನ ಮತ್ತು ಪುರುಷ ಬಂಜೆತನದಂತಹ ಪುರುಷರ ಆರೋಗ್ಯ ಪರಿಸ್ಥಿತಿಗಳಲ್ಲಿ ಇವುಗಳನ್ನು ಶಿಫಾರಸು ಮಾಡಲಾಗುತ್ತದೆ. ಪುರುಷರು ಹಾಲಿನೊಂದಿಗೆ ಅಥವಾ ಕ್ಯಾರೆಟ್‌ನೊಂದಿಗೆ ಬಳಸಬಹುದು .  ಆಯುರ್ವೇದ ತತ್ವಗಳ ಪ್ರಕಾರ ಈ ಹಣ್ಣು ಶುಕ್ರ ಧಾತು ಹೆಚ್ಚಿಸುತ್ತದೆ . ಸಮತೋಲಿತ ಸ್ಥಿತಿಯಲ್ಲಿರುವಾಗ ಶುಕ್ರ ಧಾತು ಪುರುಷರ  ಲೈಂಗಿಕ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಆಯುರ್ವೇದ ಆಚಾರ್ಯರು ವಾಜಿಕರಣ ಚಿಕಿತ್ಸೆಯಲ್ಲಿ ಇವನ್ನು ಉಪಯೋಗಿಸುವಂತೆ  ಶಿಫಾರಸು ಮಾಡುತ್ತಾರೆ. ನಿಮಿರು ದೌರ್ಬಲ್ಯಕ್ಕೆ  ಪರಿಹಾರವಾಗಿ ಬಳಸುವ ಅನೇಕ ಆಯುರ್ವೇದ ಔಷಧಿಗಳು  ಈ ರುಚಿಕರವಾದ ಹಣ್ಣುಗಳನ್ನು ಒಳಗೊಂಡಿರುತ್ತವೆ. ವಾಜೀಕರಣ ಪಾಕವಿಧಾನವಾದ  “ಆಯುರ್ವೇದ ವೃಶ್ಯ ಕ್ಷೀರ” ಅವುಗಳಲ್ಲಿ ಒಂದು. ಈ ಹಣ್ಣುಗಳಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ.

ಪೊಟ್ಯಾಸಿಯಮ್ ಹೃದಯ ಮತ್ತು ನರಮಂಡಲದ ಕಾರ್ಯಗಳನ್ನು ಸಮರ್ಥವಾಗಿ  ನಿರ್ವಹಿಸಲು ಸಹಾಯ ಮಾಡುತ್ತದೆ.

ಪೊಟ್ಯಾಸಿಯಮ್ ಕೊರತೆ ಮತ್ತು ಸೋಡಿಯಂ ಮತ್ತು ಪೊಟ್ಯಾಸಿಯಮ್ ಮಟ್ಟಗಳ ನಡುವೆ ಅಸಮತೋಲನ ಇದ್ದಾಗಲೂ ನಿಮಿರು ದೌರ್ಬಲ್ಯ ಸಂಭವಿಸಬಹುದು. ಬಲವಾದ ನಿಮಿರುವಿಕೆಯನ್ನು ಪಡೆಯಲು ಆರೋಗ್ಯಕರ ಹೃದಯ ಮತ್ತು ರಕ್ತನಾಳಗಳು ಅತ್ಯಗತ್ಯ. ಪೊಟ್ಯಾಸಿಯಮ್ ಸಮೃದ್ಧವಾಗಿ  ಉಳ್ಳ ಖರ್ಜೂರ ,  ಈ ಪರಿಸ್ಥಿತಿಗಳನ್ನು  ನಿವಾರಿಸಲು ಪುರುಷರಿಗೆ ಸಹಾಯ ಮಾಡುತ್ತದೆ.

ಆಯುರ್ವೇದ ಪಠ್ಯ “ಭಾವ ಪ್ರಕಾಶ” ದ ಪ್ರಕಾರ , ಖರ್ಜೂರ “ಶುಕ್ರಲ” (ಶುಕ್ರ ಧಾತು ಅಥವಾ ವೀರ್ಯವನ್ನು ಹೆಚ್ಚಿಸುವ ಗಿಡಮೂಲಿಕೆಗಳು) ವಾಗಿ  ಕಾರ್ಯನಿರ್ವಹಿಸುತ್ತವೆ. ಪೌಷ್ಠಿಕಾಂಶಯುಕ್ತ ಸಮೃದ್ಧ ಹಣ್ಣು ವೀರ್ಯದ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಸಂಧಿವಾತ ಮತ್ತು ಕೀಲು ನೋವಿನಲ್ಲಿ ಉಪಯುಕ್ತತೆ

ಕೀಲು ನೋವು ಮತ್ತು ಉರಿಯೂತಕ್ಕೆ ಮೂಲ ಕಾರಣವಾದ ವಾತ ದೋಷವನ್ನು ಸಮತೋಲನಗೊಳಿಸಲು ಖರ್ಜೂರ  ಸಹಾಯ ಮಾಡುತ್ತದೆ. ಆದ್ದರಿಂದ ಕೀಲು ನೋವು ಮತ್ತು ಸಂಧಿವಾತದಿಂದ ಬಳಲುತ್ತಿರುವ ಜನರು ಈ ಹಣ್ಣುಗಳನ್ನು ಸೇವಿಸುವುದರಿಂದ ಪ್ರಯೋಜನ ಪಡೆಯುತ್ತಾರೆ.

ಮಲಬದ್ಧತೆಗೆ ಖರ್ಜೂರ ರಾಮಬಾಣ

ಇವುಗಳಲ್ಲಿ ನಾರಿನ ಅಂಶ ‌ಸಮೃದ್ಧವಾಗಿದೆ ಮತ್ತು  ಮಲದ ಪರಿಮಾಣ ಹೆಚ್ಚಿಸುತ್ತದೆ . ಮಲಬದ್ಧತೆಯಿಂದ ಮುಕ್ತರಾಗಲು ಪ್ರತಿದಿನ 5- 10 ಖರ್ಜೂರಗಳನ್ನು ಸೇವಿಸಿ. ಗರ್ಭಿಣಿಯರು  ಇದನ್ನು ಮಲಬದ್ಧತೆಗೆ ಸುರಕ್ಷಿತವಾಗಿ ಬಳಸಬಹುದು.

ಸಿಸ್ಟೈಟಿಸ್ ಮತ್ತು ಯುಟಿಐನಲ್ಲಿ:

ಖರ್ಜೂರ  ಮೂತ್ರವರ್ಧಕ ಮತ್ತು ದೇಹ ಶೀತಕವಾಗಿ  ಕಾರ್ಯನಿರ್ವಹಿಸುತ್ತದೆ. ಸಿಸ್ಟೈಟಿಸ್ (ಮೂತ್ರ ಕೋಶದ ಉರಿಯೂತ), ಮೂತ್ರದ ಸೋಂಕು ಮತ್ತು ಉರಿ ಮೂತ್ರ ಮುಂತಾದ ಪರಿಸ್ಥಿತಿಗಳಲ್ಲಿ ಅವು ಬಹಳ ಸಹಾಯಕವಾಗಿವೆ.

ಸಣ್ಣಗಿರುವವರು ದಪ್ಪಗಾಗಲು ಖರ್ಜೂರ

ಈ ಹಣ್ಣುಗಳಲ್ಲಿ  ಹೆಚ್ಚಿನ ಕ್ಯಾಲೊರಿಗಳಿವೆ. ಆದ್ದರಿಂದ ಅವು ಆರೋಗ್ಯಕರವಾಗಿ ದೇಹದ  ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ದೇಹದ ಗಾತ್ರ  ಹೆಚ್ಚಿಸಲು ದಿನಕ್ಕೆ 10 ರಿಂದ 15 ಖರ್ಜೂರಗಳನ್ನು ಸೇವಿಸಿ ನಂತರ ಒಂದು ಲೋಟ ಹಾಲು ಕುಡಿಯಿರಿ .

ಖರ್ಜೂರವನ್ನು ಗರ್ಭವತಿಯರು  ಹೇಗೆ ಬಳಸಬೇಕು?

ವಿಡಿಯೋ ನೋಡಿ  ಖರ್ಜೂರವನ್ನು ಗರ್ಭವತಿಯರು  ಹೇಗೆ ಬಳಸಬೇಕು ?

ಖರ್ಜೂರಗಳು  ಹೆಚ್ಚು ಪೌಷ್ಟಿಕವಾಗಿದ್ದು, ಸಾಕಷ್ಟು ಖನಿಜಗಳು, ಜೀವಸತ್ವಗಳು ಮತ್ತು ಆಂಟಿ-ಆಕ್ಸಿಡೆಂಟ್‌ಗಳನ್ನು ಒಳಗೊಂಡಿರುತ್ತವೆ. ಗರ್ಭಾವಸ್ಥೆಯಲ್ಲಿ ಇದು ಉತ್ತಮ ಪ್ರಮಾಣದ ಪೋಷಕಾಂಶಗಳನ್ನು ಪೂರೈಸುತ್ತದೆ. ಕೇಸರಿ ( ಆಯುರ್ವೇದದ ಪ್ರಕಾರ ಕೇಸರಿಯ ಉಪಯೋಗಗಳೇನು ? Uses of Kesari / Saffron ) , ತುಪ್ಪ, ಏಲಕ್ಕಿ ಮುಂತಾದ ಇತರ ಪದಾರ್ಥಗಳನ್ನು ಸೇರಿಸುವ ಮೂಲಕ ಖರ್ಜೂರದ ಸತ್ವಗಳನ್ನು ಇನ್ನೂ ಬಲಪಡಿಸಿ ಅದರ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಬಹುದು. ಇದಕ್ಕಾಗಿ ಪಾಕವಿಧಾನ ಇಲ್ಲಿದೆ. ಇದನ್ನು ಆಯುರ್ವೇದ ವೈದ್ಯರು , ಗರ್ಭಿಣಿ ಮಹಿಳೆಯರಿಗೆ ಉಪಯೋಗಿಸುವಂತೆ ಸಲಹೆ ನೀಡುತ್ತಾರೆ.

ಸುಮಾರು 15 ತಾಜಾ ಖರ್ಜೂರಗಳನ್ನು ಸಣ್ಣಗೆ ಕತ್ತರಿಸಿ ಅದಕ್ಕೆ  10 ಟೀ ಚಮಚ  ಶುದ್ಧ ತುಪ್ಪ ಬೆರೆಸಿ. ಒಂದು ಚಿಟಿಕೆ ಶುಂಠಿ ಪುಡಿ, ಏಲಕ್ಕಿ ಪುಡಿ ಮತ್ತು ಕೆಲವು ಎಳೆಗಳಷ್ಟು  ಕೇಸರಿ (saffron) ಯನ್ನು ಸೇರಿಸಿ. ಇದನ್ನು ಗಾಳಿಯಾಡದಂತೆ ಗಾಜಿನ ಭರಣಿಯಲ್ಲಿ ತುಂಬಿಡಿ . ಫ್ರಿಜ್ ನಲ್ಲಿ ಇಡಬೇಡಿ . ಪ್ರತಿದಿನ ಇದನ್ನು  1 ಚಮಚದಷ್ಟು  ಮುಂಜಾನೆ ಸೇವಿಸಿ. ತೂಕ ಹೆಚ್ಚಿಸಲು ಸಿದ್ಧರಿರುವ ಜನರು, ಗರ್ಭಿಣಿಯರು ಮತ್ತು ಕಡಿಮೆ ಶಕ್ತಿಯ ಮಟ್ಟವನ್ನು ಹೊಂದಿರುವ ಜನರು ಇದನ್ನು ಬಳಸಬಹುದು.

ಅಧಿಕ ಕೊಲೆಸ್ಟ್ರಾಲ್, ಡಯಾಬಿಟಿಸ್ ( ಡಯಾಬಿಟಿಸ್ ನಿಯಂತ್ರಿಸಲು ಅತ್ಯುತ್ತಮ ಆಯುರ್ವೇದ ಗಿಡಮೂಲಿಕೆಗಳು ayurvedic medicine for diabetes in kannada ) , ಅತಿಯಾದ ತೂಕ ಇವೇ ಮೊದಲಾದ ಅರೋಗ್ಯ ಸಮಸ್ಯೆಗಳಿರುವವರು ಇದನ್ನು ಉಪಯೋಗಿಸಬೇಡಿ .

ಅಸಿಡಿಟಿ ಹಾಗು ಗ್ಯಾಸ್ ತೊಂದರೆಗಳಲ್ಲಿ ಖರ್ಜೂರದ ಉಪಯುಕ್ತತೆ

ಈ ಹಣ್ಣುಗಳನ್ನು  ಅಸಿಡಿಟಿ ಹಾಗು ಗ್ಯಾಸ್ ತೊಂದರೆಗಳಲ್ಲಿ ಪರಿಣಾಮಕ್ರಿ ಔಷಧವಾಗಿ ಬಳಸಬಹುದು . ಇದರ ಕ್ಷಾರೀಯ ಸ್ವಭಾವವು ಹೊಟ್ಟೆಯಲ್ಲಿ ಅತಿಯಾದ ಆಮ್ಲ ಸ್ರವಿಸುವಿಕೆಯಿಂದ ಉಂಟಾಗುವ ಹಿಂಸೆಯನ್ನು  ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದಕ್ಕಾಗಿ  2 ತಾಜಾ ಖರ್ಜೂರಗಳನ್ನು ಸಣ್ಣಗೆ ಕತ್ತರಿಸಿ . ಇವುಗಳನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿ. ಇದು ಎದೆಯುರಿ ಶಮನಗೊಳಿಸುತ್ತದೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ.

ಲೇಖಕಿ : ಡಾ.ಸವಿತಾ ಸೂರಿ, ಸಲಹೆಗಾರ ಆಯುರ್ವೇದ ವೈದ್ಯೆ

ಉಚಿತ ಆಯುರ್ವೇದ ಸಮಾಲೋಚನೆ

+91 9945995660 / +91 9448433911 ಗೆ ಕರೆ ಮಾಡಿ

ವಾಟ್ಸ್ ಅಪ್ + 91 6360108663 /