ನಿಮಿರು ದೌರ್ಬಲ್ಯಕ್ಕೆ ಆಯುರ್ವೇದ ಮನೆಮದ್ದು – ED Home Remedies Kannada

ಆಯುರ್ವೇದ ಆಚಾರ್ಯರು ನಿಮಿರು ದೌರ್ಬಲ್ಯಕ್ಕೆ ಪರಿಹಾರವಾಗಿ  ವಿವಿಧ ನೈಸರ್ಗಿಕ ಮನೆಮದ್ದುಗಳು, ಆಹಾರಗಳು ಮತ್ತು ವ್ಯಾಯಾಮಗಳನ್ನು ಶಿಫಾರಸು ಮಾಡಿದ್ದಾರೆ .  ಈ ಮನೆಮದ್ದುಗಳು ಶೀಘ್ರ  ಸ್ಖಲನ ಅಥವಾ ಪಿ.ಇ ಗೆ ಸಹ  ಸಹಾಯ ಮಾಡುತ್ತವೆ .

Read this article in English Ayurvedic Natural Indian Home Remedies for Erectile Dysfunction

ವಿಷಯ ಸೂಚಿ

ನಿಮಿರು ದೌರ್ಬಲ್ಯಕ್ಕೆ , ತುಪ್ಪ ಮತ್ತು  ಒಣ ಹಣ್ಣುಗಳು

ತೆಂಗಿನ ಹಾಲು ಮತ್ತು ಏಳನೀರು ಲೈಂಗಿಕ ಶಕ್ತಿ ಹೆಚ್ಚಿಸಬಲ್ಲವು

ಶೀಘ್ರ ಸ್ಖಲನಕ್ಕೆ ಮನೆಮದ್ದಾಗಿ ಈರುಳ್ಳಿ

ಬೆಳ್ಳುಳ್ಳಿ ಹಾಲು

ಹಾಲಿನೊಂದಿಗೆ  ಪಿಪ್ಪಲಿ ಅಥವಾ ಹಿಪ್ಪಲಿ

ಹಾಲು ಮತ್ತು ಖರ್ಜೂರ

ಅಶ್ವಗಂಧದ  ಹಾಲು  ಮತ್ತು ಲೇಹ್ಯ

ನಿಮಿರು ದೌರ್ಬಲ್ಯ ಹಾಗು ಶೀಘ್ರ ಸ್ಖಲನ , ಇವೆರಡೂ ಲೈಂಗಿಕ ಸಮಸ್ಯೆಗಳು , ಬಹಳ ಹಿಂದಿನಿಂದಲೂ ಪುರುಷರನ್ನು ಬಾಧಿಸುತ್ತಲೇ ಇವೆ.  ಈ ಸಮಸ್ಯೆಗಳಿಗೆ ಪರಿಹಾರವಾಗಿ ಅನೇಕ ಉಪಯುಕ್ತ ಮನೆಮದ್ದುಗಳನ್ನು , ಆಯುರ್ವೇದ ರೀತ್ಯಾ , ದಿನಬಳಕೆಯ  ಅಡಿಗೆ ಪದಾರ್ಥಗಳನ್ನು ಬಳಸಿ , ತಯಾರಿಸುವ ವಿಧಗಳು ಯುಗಗಳಿಂದಲೂ ರೂಢಿಯಲ್ಲಿವೆ .  ಇಂತಹ ಕೆಲವು ಮನೆಯಲ್ಲಿ ತಯಾರಿಸಬಹುದಾದ  ಪರಿಹಾರಗಳು ಇಲ್ಲಿವೆ. ಇವುಗಳಲ್ಲಿ ಕೆಲವನ್ನು ಭಾರತೀಯ ಆಯುರ್ವೇದ ಗ್ರಂಥಗಳಲ್ಲಿಯೂ ಶಿಫಾರಸು ಮಾಡಲಾಗಿದೆ.

ಆಚಾರ್ಯ ಚರಕರು  ವಿವಿಧ ಕಾರಣಗಳಿಂದ ಉಂಟಾಗುವ ಲೈಂಗಿಕ ದುರ್ಬಲತೆಗೆ ವಿವಿಧ ಚಿಕಿತ್ಸಾ ವಿಧಾನಗಳನ್ನು  ಚರಕ ಸಂಹಿತೆಯ ಚಿಕಿತ್ಸಾ ಸ್ಥಾನದಲ್ಲಿ  ವಿವರಿಸಿದ್ದಾರೆ . ಈ ಚಿಕೆತ್ಸೆಗಳು ಲೈಂಗಿಕ ಶಕ್ತಿ ಹೆಚ್ಚಿಸಿ ಪುರುಷರನ್ನು ಬಲಪಡಿಸುತ್ತವೆ .

ನಿಮಿರು ದೌರ್ಬಲ್ಯಕ್ಕೆ , ತುಪ್ಪ ಮತ್ತು  ಒಣ ಹಣ್ಣುಗಳು

 ತುಪ್ಪವನ್ನು ಆಯುರ್ವೇದ ಆಚಾರ್ಯರು ವೃಶ್ಯ ಅಥವಾ ಕಾಮೋತ್ತೇಜಕ ಎಂದು ಹೊಗಳಿದ್ದಾರೆ. ನಿಮಿರು ದೌರ್ಬಲ್ಯ ಹಾಗು ಶೀಘ್ರ ಸ್ಖಲನ ತೊಂದರೆಗಳಲ್ಲಿ  ಇದರ ಬಳಕೆ ಮಾಡುವಂತೆ ಹೇಳಿದ್ದಾರೆ . ಶುಷ್ಕ ಹಣ್ಣುಗಳು ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಬಹಳ ಪರಿಣಾಮಕಾರಿ.  ಸಮ ಪ್ರಮಾಣದಲ್ಲಿ ಒಣದ್ರಾಕ್ಷಿ, ಆಕ್ರೋಟು , ಬಾದಾಮಿ ಹಾಗು ಬೀಜ ರಹಿತ ಖರ್ಜುರಗಳನ್ನು ತೆಗೆದುಕೊಳ್ಳಿ.  ಇವುಗಳನ್ನು ಅಗತ್ಯವಿರುವಷ್ಟು  ತುಪ್ಪದೊಂದಿಗೆ ಪ್ರತ್ಯೇಕವಾಗಿ ಹುರಿಯಿರಿ . ಹೀಗೆ ಹುರಿದ ಒಣ ಹಣ್ಣುಗಳನ್ನು ಗಾಳಿಯಾಡದಂತೆ ಒಂದು ಡಬ್ಬದಲ್ಲಿ ಮುಚ್ಚಿಡಿ .  ಒಂದು ಟೇಬಲ್ ಚಮಚದಷ್ಟು ಈ ಮಿಶ್ರಣವನ್ನು  ವನ್ನು ಒಂದು ಲೋಟ ಹಾಲಿನೊಂದಿಗೆ ಕುದಿಸಿ . ಈ ಹಾಲನ್ನು ಆಹಾರದ ನಂತರ ಪ್ರತಿದಿನ ಎರಡು ಬಾರಿ ಸೇವಿಸಿ.

ಎಚ್ಚರಿಕೆ: ಅಧಿಕ ಕೊಲೆಸ್ಟ್ರಾಲ್ ಇರುವ ಪುರುಷರು ತುಪ್ಪವನ್ನು ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ.

ತೆಂಗಿನ ಹಾಲು ಮತ್ತು ಏಳನೀರು ಲೈಂಗಿಕ ಶಕ್ತಿ ಹೆಚ್ಚಿಸಬಲ್ಲವು

ಆಯುರ್ವೇದದಲ್ಲಿ ಬಲಿತ ತೆಂಗಿನಕಾಯಿಯ ತಿರುಳನ್ನು ಉತ್ತಮ ಕಾಮೋತ್ತೇಜಕ ಅಥವಾ ವಾಜಿಕರ ಎಂದು ಪ್ರಶಂಸಿಸಲಾಗುತ್ತದೆ. ಇದು ಪುರುಷರ ವೀರ್ಯದ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ. ತೆಂಗಿನಕಾಯಿಯ  ತಾಜಾ ತುರಿಯಿಂದ  ಹಿಂಡಿದ ತೆಂಗಿನ ಹಾಲು ಜೀರ್ಣಾಂಗಗಳನ್ನು  ಧೃಢಗೊಳಿಸುತ್ತವೆ .  ಇದು ಶುಕ್ರ ಧಾತುವನ್ನು  ಪೋಷಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.  ಇದಕ್ಕಾಗಿ ಒಂದು ಸಣ್ಣ ಕಪ್ ತಾಜಾ ತೆಂಗಿನಕಾಯಿ ತುರಿ ತೆಗೆದುಕೊಳ್ಳಿ. ಸ್ವಲ್ಪ ನೀರು ಸೇರಿಸಿ ಮತ್ತು ಮಿಕ್ಸಿಯಲ್ಲಿ  ರುಬ್ಬಿಕೊಳ್ಳಿ . ನಂತರ ಇದನ್ನು ಹಿಂಡಿ ತೆಂಗಿನ ಹಾಲನ್ನು ತೆಗೆಯಿರಿ. ಇದೇ ಪ್ರಕ್ರಿಯೆಯನ್ನು ಹಲವು ಬಾರಿ ಪುನರಾವರ್ತಿಸಿ.  ಈ ಹಾಲನ್ನು ಪ್ರತಿದಿನ ೧ ಲೋಟ ಕುಡಿಯಿರಿ.

ಎಳನೀರು  ದೇಹವನ್ನು ತಂಪಾಗಿಸುತ್ತದೆ  ಇದನ್ನು  ಪ್ರತಿದಿನ ಕುಡಿಯುವುದರಿಂದ ದೇಹವು ಶಕ್ತಿಯುತವಾಗುತ್ತದೆ . ಆಯುರ್ವೇದ ವಾಜಿಕರಣ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿರುವ ಪುರುಷರ ಆಹಾರದಲ್ಲಿ  ಎಳನೀರನ್ನು ಸೇರಿಸಬಹುದು.

ಎಚ್ಚರಿಕೆ: ಮಧುಮೇಹ ಅಥವಾ ಡಯಾಬಿಟಿಸ್  ಹೊಂದಿರುವ ಪುರುಷರು  ಎಳನೀರನ್ನು ಕುಡಿಯಬಾರದು. ನಿಮ್ಮಲ್ಲಿ ಪಿತ್ತ ಹೆಚ್ಚಾಗಿ ಇದ್ದರೆ ತೆಂಗಿನ ಹಾಲು ಕುಡಿಯಬೇಡಿ.

ಶೀಘ್ರ ಸ್ಖಲನಕ್ಕೆ  ಮನೆಮದ್ದಾಗಿ  ಈರುಳ್ಳಿ  :

ಈರುಳ್ಳಿಯನ್ನು ಅತ್ಯುತ್ತಮ ವಾಜಿಕರ ಎಂದು ಕರೆಯಲಾಗುತ್ತದೆ. ಹಸಿ  ಅಥವಾ ಬೇಯಿಸಿದ ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮಿರು ದೌರ್ಬಲ್ಯ , ಅಕಾಲಿಕ ಸ್ಖಲನ ಮತ್ತು ಲೈಂಗಿಕ ಶಕ್ತಿ ಕಡಿಮೆ ಇರುವ  ಪರಿಸ್ಥಿತಿಗಳಲ್ಲಿ  ಸಹಾಯ ಮಾಡುತ್ತದೆ. ಇದಕ್ಕಾಗಿ ಮಧ್ಯಮ ಗಾತ್ರದ ಈರುಳ್ಳಿಯನ್ನು ,ಉದ್ದವಾದ ತೆಳುವಾದ ಹೋಳುಗಳಾಗಿ ಕತ್ತರಿಸಿ, ಬೆಣ್ಣೆಯಲ್ಲಿ ಮೆತ್ತಗಾಗುವವರೆಗೂ ಹುರಿಯಿರಿ . ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಹಸಿ  ಈರುಳ್ಳಿಯನ್ನು ಊಟದೊಂದಿಗೆ ಸೇವಿಸುವುದೂ ಸಹ ಅತ್ಯಂತ ಪರಿಣಾಮಕಾರಿ . ಪೌಷ್ಠಿಕಾಂಶದ ಮೌಲ್ಯವನ್ನು ಹೆಚ್ಚಿಸಲು ಕಚ್ಚಾ ಈರುಳ್ಳಿಯನ್ನು ತಾಜಾ ಸಲಾಡ್‌ಗಳೊಂದಿಗೆ ಸೇರಿಸಬಹುದು.

ಬೆಳ್ಳುಳ್ಳಿ ಹಾಲು

ಲಶುನ ಕ್ಷೀರ ಪಾಕ ಎಂದೂ ಕರೆಯಲ್ಪಡುವ ಬೆಳ್ಳುಳ್ಳಿ ಹಾಲು, ಶಕ್ತಿ ಮತ್ತು ಚೈತನ್ಯ  ಹೆಚ್ಚಿಸಲು ಬಹಳ ಸಹಾಯಕವಾಗಿದೆ. ಇದು ಲೈಂಗಿಕ ಶಕ್ತಿ, ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯ ಚಲನಶೀಲತೆಯನ್ನು ಹೆಚ್ಚಿಸುತ್ತದೆ.

ಹಾಲಿನೊಂದಿಗೆ  ಪಿಪ್ಪಲಿ ಅಥವಾ ಹಿಪ್ಪಲಿ

ಹಿಪ್ಪಲಿಯನ್ನು ಹಾಕಿ ಕುದಿಸಿದ ಹಾಲು  ಅತ್ಯುತ್ತಮ ವಾಜಿಕರಣ  ಆಹಾರವಾಗಿದೆ. ಪಿಪ್ಪಲಿ ಹಾಲು ಪುರುಷರ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಶಿಶ್ನ ನಿಮಿರುವಿಕೆಯ ಅವಧಿಯನ್ನು ಹೆಚ್ಚಿಸುತ್ತದೆ.  ಅಲ್ಲದೆ ಅಕಾಲಿಕ  ಸ್ಖಲನವನ್ನೂ ತಡೆಯುತ್ತದೆ.

ಹಾಲು ಮತ್ತು ಖರ್ಜೂರ

ಹಾಲು ಮತ್ತು  ಖರ್ಜೂರ ಪುರುಷರಿಗೆ ಅಸಂಖ್ಯಾತ ಆರೋಗ್ಯ ಲಾಭಗಳನ್ನು ನೀಡುತ್ತದೆ . ಆಯುರ್ವೇದದಲ್ಲಿನ  ಖರ್ಜೂರ ಮತ್ತು ಹಾಲು ಬಹಳ ಜನಪ್ರಿಯವಾದ  ಆಹಾರವಾಗಿದ್ದು  ಇದನ್ನು ಲೈಂಗಿಕ ಶಕ್ತಿ ಹೆಚ್ಚಿಸಲು ಕುಡಿಯುವಂತೆ  ಶಿಫಾರಸು ಮಾಡುತ್ತಾರೆ. ಇದನ್ನು ವಾಜಿಕರಣ ಆಹಾರ ಎಂದು ಪರಿಗಣಿಸಲಾಗುತ್ತದೆ.

ಅಶ್ವಗಂಧದ  ಹಾಲು  ಮತ್ತು ಲೇಹ್ಯ

ಬೇಕಾದ ಗಿಡಮೂಲಿಕೆಗಳು

  • ಅಶ್ವಗಂಧ (ವಿಥಾನಿಯಾ ಸೋಮ್ನಿಫೆರಾ)
  • ಶತಾವರಿ,
  • ಬಲಾ (ಸಿಡಾ ಕಾರ್ಡಿಫೋಲಿಯಾ),
  • ಅತಿ ಬಲಾ,
  • ಬೆಟ್ಟದ ನೆಲ್ಲಿಕಾಯಿ ಅಥವಾ  ಆಮ್ಲಾ (ಎಂಬ್ಲಿಕಾ ಅಫಿಷಿನಾಲಿಸ್)
  • ಒಣ ದ್ರಾಕ್ಷಿ
  • ಕಪಿಕಚ್ಚು  (ಮ್ಯೂಕುನಾ ಪ್ರುರಿಯೆನ್ಸ್),
  • ಬಿಳಿ ಮುಶಲಿ

ಈ ಗಿಡಮೂಲಿಕೆಗಳನ್ನು ಸಕ್ಕರೆ, ತುಪ್ಪ ಅಥವಾ ಹಾಲಿನೊಂದಿಗೆ ಸಂಸ್ಕರಿಸಿ ಲೇಹದಂತಹ ಸಿದ್ಧತೆಗಳನ್ನು ತಯಾರಿಸಬಹುದು. ಇವು ಹೆಚ್ಚು ರುಚಿಕರ ಮತ್ತು ಬಲ ಹೆಚ್ಚಿಸುವಂತಹುವು . ಈ ಸಿದ್ಧತೆಗಳ ಔಷಧೀಯ ಗುಣಗಳನ್ನು ಹೆಚ್ಚಿಸಲು ಜೇನುತುಪ್ಪವನ್ನು ಧಾರಾಳವಾಗಿ ಸೇರಿಸಲಾಗುತ್ತದೆ.

ಲೇಖಕಿ : ಡಾ.ಸವಿತಾ ಸೂರಿ, ಸಲಹೆಗಾರ ಆಯುರ್ವೇದ ವೈದ್ಯೆ

ಉಚಿತ ಆಯುರ್ವೇದ ಸಮಾಲೋಚನೆ

+91 9945995660 / +91 9448433911 ಗೆ ಕರೆ ಮಾಡಿ

ವಾಟ್ಸ್ ಅಪ್ + 91 6360108663 /