ಗಂಡಸರಲ್ಲಿ ನಿಮಿರು ದೌರ್ಬಲ್ಯ Erectile Dysfunction or Impotence in Kannada

ನಿಮಿರು ದೌರ್ಬಲ್ಯದ ಬಗ್ಗೆ ಸಹಸ್ರಾರು ವರ್ಷಗಳ ಹಿಂದೆಯೇ ಆಯುರ್ವೇದ ಶಾಸ್ತ್ರವು ಧೀರ್ಘವಾಗಿ ಚರ್ಚಿಸಿದೆ . ಈ ಆಯುರ್ವೇದ ಲೇಖನ ಸರಣಿ ,ನಿಮಿರು ದೌರ್ಬಲ್ಯ ಹಾಗು ಅದರ ಆಯುರ್ವೇದೀಯ ಚಿಕಿತ್ಸೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತದೆ

Read this article in English Ayurvedic Medicines and Treatment for Erectile dysfunction

ವಿಷಯ ಸೂಚಿ
.
ನಿಮಿರು ದೌರ್ಬಲ್ಯ ಎಂದರೇನು ?

ಗಂಡಸರಲ್ಲಿ ನಿಮಿರು ದೌರ್ಬಲ್ಯಕ್ಕೆ ಕಾರಣಗಳು

ನಿಮಿರು ದೌರ್ಬಲ್ಯ ಎಂದರೇನು ? (Erectile Dysfunction or Impotence Meaning)

ಗಂಡಸು ಯೌವ್ವನಕ್ಕೆ ಕಾಲಿಡುತ್ತಿರುವಾಗ ಅವನ ಜನನಾಂಗವು ಸಂಭೋಗ ಕ್ರಿಯೆಗೆ ಸಹಕರಿಸುವ ನಿಟ್ಟಿನಲ್ಲಿ , ಗಟ್ಟಿಯಾಗಿ ನಿಮಿರುತ್ತದೆ . ಈ ಸಮಯದಲ್ಲಿ ಜನನಾಂಗಕ್ಕೆ ರಕ್ತದ ಪರಿಚಲನೆ ಹೆಚ್ಚ್ಚಾಗಿ ಶಿಶ್ನದ ಉದ್ದ ಹಾಗು ಗಾತ್ರ ಹೆಚ್ಚುತ್ತದೆ. ಇದು ಪ್ರಾಕೃತಿಕ. ಆದರೆ ಕೆಲವೊಮ್ಮೆ ಈ ಪ್ರಕ್ರಿಯೆ ಕುಂಠಿತಗೊಂಡು ನಿಮಿರುವಿಕೆ ದುರ್ಬಲವಾಗುತ್ತದೆ . ಇದಕ್ಕೆ ಕಾರಣಗಳು ಹಲವಾರು .

ಗಂಡಸರಲ್ಲಿ ನಿಮಿರು ದೌರ್ಬಲ್ಯಕ್ಕೆ ಕಾರಣಗಳು

ಗಂಡಸರಲ್ಲಿ ಜನನಾಂಗ ನಿಮಿರುವಿಕೆ ಶಾರೀರಿಕವಾದ ಕ್ರಿಯೆಯಾಗಿದೆ . ಹಲವಾರು ಕಾರಣಗಳಿಂದ ನಿಮಿರುವಿಕೆ ದುರ್ಬಲಗೊಳ್ಳುತ್ತದೆ. ಬಹಳಷ್ಟು ಜನ ಪುರುಷರು ಈ ತೊಂದರೆಯನ್ನು ವ್ಯಕ್ತಪಡಿಸಲಾಗದೆ ಮಾನಸಿಕವಾಗಿ ಬಳಲುತ್ತಾರೆ . ಇದರ ಬಗ್ಗೆ ಸಹಸ್ರಾರು ವರ್ಷಗಳ ಹಿಂದೆಯೇ ಆಯುರ್ವೇದ ಶಾಸ್ತ್ರವು ಧೀರ್ಘವಾಗಿ ಚರ್ಚಿಸಿದೆ . ಈ ಆಯುರ್ವೇದ ಲೇಖನ ಸರಣಿ ,ನಿಮಿರು ದೌರ್ಬಲ್ಯ ಹಾಗು ಅದರ ಆಯುರ್ವೇದೀಯ ಚಿಕಿತ್ಸೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತದೆ

ನಿಮಿರು ದೌರ್ಬಲ್ಯಕ್ಕೆ ಸಾಮಾನ್ಯವಾದ ಕಾರಣಗಳು

1. ವಯಸ್ಸು :

ವೃದ್ಧರಲ್ಲಿ ಈ ದೌರ್ಬಲ್ಯ ಹೆಚ್ಚಾಗಿರುತ್ತದೆ. ದೇಹದ ಶಕ್ತಿಯ ಕುಂದುವಿಕೆ, ಅಂಗಾಂಗಗಳ ಕ್ಷೀಣತೆ , ಕಡಿಮೆಯಾಗುತ್ತ ಬರುವ ಟೆಸ್ಟೋಸ್ಟೆರಾನ್ ಹಾರ್ಮೋನ್ ಸ್ರಾವ ಇವೆಲ್ಲ ಸೇರಿ ಹಿರಿಯ ವಯಸ್ಕ ಗಂಡಸರಲ್ಲಿ ಇದು ಕಾಣಬರುತ್ತದೆ

2. ಮಧುಮೇಹ ಅಥವಾ ಡಯಾಬಿಟಿಸ್:

ಸಕ್ಕರೆ ಖಾಯಿಲೆ ಅಥವಾ ಡಯಾಬಿಟಿಸ್(ಮಧುಮೇಹ) , ಡಯಾಬಿಟಿಸ್ ನಿಮಿರುವಿಕೆಗೆ ಸಹಕರಿಸುವ ನರಗಳನ್ನು ದುರ್ಬಲಗೊಳಿಸುತ್ತದೆ . ಇದರಿಂದ ಜನನಾಂಗದ ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ .

ಮಧುಮೇಹ (diabetes) ಮತ್ತು ಪ್ರಾಸ್ಟೇಟ್ ಸಮಸ್ಯೆಗಳು ಸಹ ಅಹಿತಕರ ವೈದ್ಯಕೀಯ ಸಮಸ್ಯೆಗಳನ್ನು ತರುತ್ತವೆ. ದುರದೃಷ್ಟವಶಾತ್, ಮಧುಮೇಹವು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುವುದರಿಂದ ಆಗಾಗ್ಗೆ  ದುರ್ಬಲತೆ ಉಂಟಾಗುತ್ತದೆ, ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಆಗ ಶಿಶ್ನದ ನಿಮಿರುವಿಕೆ ಕಡಿಮೆಯಾಗುತ್ತದೆ

3. ಹೃದ್ರೋಗ :

ಹೃದಯ ಅಥವಾ ಹಾರ್ಟ್ ಗೆ ಸಂಭದಿಸಿದ ರೋಗಗಳು . ಹೃದ್ರೋಗ ಮತ್ತು ಹಾನಿಗೊಳಗಾದ ಕವಾಟಗಳಂತಹ ಹೃದಯ ಸಮಸ್ಯೆಗಳು ನಿಮಿರುವಿಕೆಯನ್ನು ಕಡಿಮೆ ಮಾಡುತ್ತವೆ. ಹೃದಯದ ಮೇಲಿನ ಒತ್ತಡವು ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ, ಇದು ನಿಮ್ಮ ಶಿಶ್ನಕ್ಕೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರವಾದ ರಕ್ತ ಪರಿಚಲನೆ , ನಿಮಿರುವಿಕೆಗೆ ಅತ್ಯವಶ್ಯಕ . ಹೃದಯ ದುರ್ಬಲಗೊಂಡಾಗ ರಕ್ತ ಪರಿಚಲನೆಯೂ ದುರ್ಬಲಗೊಳ್ಳುತ್ತದೆ .

ಎಲ್ಡಿಎಲ್ (LDL) ಕೊಲೆಸ್ಟ್ರಾಲ್ (ಕೆಟ್ಟ ಕೊಲೆಸ್ಟ್ರಾಲ್) ಮಟ್ಟ ಹೆಚ್ಚಾದಾಗ , ಅದು ರಕ್ತ ನಾಳಗಳನ್ನು ಮುಚ್ಚಿ  ರಕ್ತವು ಹೃದಯಕ್ಕೆ ಸರಿಯಾಗಿ ಹರಿಯದಂತೆ ಮಾಡುತ್ತದೆ .  ಅಲ್ಲದೆ ಶಿಶ್ನದ ರಕ್ತನಾಳಗಳು ಕೊಲೆಸ್ಟ್ರಾಲ್ ಇಂದ ಮುಚ್ಚಿದಾಗ ರಕ್ತದ ಹರಿವು ಕಡಿಮೆಯಾಗಿ ನಿಮಿರು ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ .

4. ಮಾನಸಿಕ ಒತ್ತಡ –

ಮಾನಸಿಕ ಒತ್ತಡ ಲೈಂಗಿಕ ವಿಷಯಗಳ ಬಗ್ಗೆ ಇರುವ ಆಸಕ್ತಿಯನ್ನು ಕುಂಠಿತಗೊಳಿಸುತ್ತದೆ . ನಿರಾಸಕ್ತಿಯಿಂದ ಗಂಡಸು ಲೈಂಗಿಕವಾಗಿ ನಿಶಕ್ತನಾಗುತ್ತಾನೆ

5. ಆಘಾತ –

ಸೊಂಟದ ಕೆಳಗೆ ಪೆಟ್ಟು ಬೀಳುವುದು ಅಥವಾ ಜನನಾಂಗಗಳಿಗೆ ಆಘಾತವಾಗುವುದರಿಂದ ಜನನಾಂಗಗಳೆಡೆಗೆ ಹೋಗುವ ನರಗಳಿಗೆ ಪೆಟ್ಟು ಬಿದ್ದು ಅವು ನಿಶ್ಚೇಷ್ಟಿತವಾಗುತ್ತವೆ . ಇದರಿಂದ ನಿಮಿರುವಿಕೆ ಕಡಿಮೆಯಾಗುತ್ತದೆ .ಬೆನ್ನುಮೂಳೆಯ ಆಘಾತಗಳು  ನಿಭಾಯಿಸಲು ಬಹಳ  ಕಠಿಣ , ಏಕೆಂದರೆ ಇದು ನಿಮ್ಮ ಮೆದುಳು ಮತ್ತು ಶಿಶ್ನದ ನಡುವಿನ ಸಂವಹನ ಸಮಸ್ಯೆಗೆ ಕಾರಣವಾಗುತ್ತದೆ, ಆದರೆ ಮೇಲೆ ಪಟ್ಟಿ ಮಾಡಲಾದ ಇತರ ಕಾರಣಗಳು ದೈಹಿಕ ಸಮಸ್ಯೆಗಳನ್ನು ಮಾತ್ರ ಉಂಟುಮಾಡುತ್ತವೆ. ಬೆನ್ನುಮೂಳೆಯ ಆಘಾತದಿಂದ ಉಂಟಾಗುವ ಶಿಶ್ನದ ದುರ್ಬಲತೆಗೆ  ಚಿಕಿತ್ಸೆ ನೀಡಲು ವಾಸ್ತವಿಕವಾಗಿ ಅಸಾಧ್ಯ.

6. ಟೆಸ್ಟೋಸ್ಟೆರಾನ್ ಹಾರ್ಮೋನ್ ಕಡಿಮೆಯಾಗುವಿಕೆ –

ಟೆಸ್ಟೋಸ್ಟೆರಾನ್ ಗಂಡಸಿಗೆ ಬಹಳ ಮುಖ್ಯವಾದ ಹಾರ್ಮೋನ್. ಇದು ಗಂಡಸಿನ ಎಲ್ಲಾ ಲಕ್ಷಣಗಳಾದ ಗಡ್ಡ, ಮೀಸೆ, ಗಡಸು ಧ್ವನಿ, ಧೃಡವಾದ ಮಾಂಸ ಖಂಡಗಳು, ವೀರ್ಯ ಮತ್ತು ವೀರ್ಯಾಣುಗಳ ಸ್ರವಿಸುವಿಕೆ , ನಿಮಿರುವಿಕೆ, ಲೈಂಗಿಕ ಆಸಕ್ತಿ ಇವುಗಳಿಗೆ ಕಾರಣವಾಗಿರುತ್ತದೆ . ಇದು ಕಡಿಮೆಯಾದರೆ ಪುರುಷತ್ವದ ಲಕ್ಷಣಗಳೂ ಕಡಿಮೆಯಾಗುತ್ತವೆ .

7. ಅತಿಯಾದ ದೇಹದ ತೂಕ –

ಹಲವಾರು ವೈಜ್ಞಾನಿಕ ಸಂಶೋಧನೆಗಳಿಂದ ಗಂಡಸಿನ ದೇಹದ ತೂಕ ಹೆಚ್ಚಾದಂತೆ ಲೈಂಗಿಕ ಶಕ್ತಿ ಕಡಿಮೆಯಾಗುವುದನ್ನು ಧೃಡಪಡಿಸಿವೆ . ದೇಹದ ತೂಕ ಇಳಿಸಲು ಆಯುರ್ವೇದ ಹರ್ಬಲ್ ಟೀಗಳು ಸಹಾಯ ಮಾಡುತ್ತವೆ

8. ವ್ಯಸನಗಳು –

ತಂಬಾಕು, ಸಿಗರೇಟ್ , ಮದ್ಯ , ಮಾದಕ ಪದಾರ್ಥಗಳ ಸೇವನೆ – ಇವುಗಳು ದೇಹಕ್ಕೆ ಮಾರಕವಾಗಿರುವಂತೆ , ಲೈಂಗಿಕತೆಗೂ ಮಾರಕವಾಗಿವೆ. ಉತ್ತರ ಅಮೆರಿಕಾದಲ್ಲಿ ಪುರುಷರಲ್ಲಿ ದುರ್ಬಲತೆಗೆ ಧೂಮಪಾನವು ಪ್ರಥಮ ಕಾರಣವಾಗಿದೆ. ಧೂಮಪಾನವು ನಿಮ್ಮ ಅಪಧಮನಿಗಳ ಕ್ಯಾಲ್ಸಿಫಿಕೇಶನ್‌ಗೆ ಕಾರಣವಾಗುತ್ತದೆ, ಇದು ನಿಮ್ಮ ಇಡೀ ದೇಹದಾದ್ಯಂತ ರಕ್ತದ ಹರಿವನ್ನು ನಿರ್ಬಂಧಿಸುತ್ತದೆ. ಶಿಶ್ನಕ್ಕೆ ರಕ್ತದ ಹರಿವಿನಿಂದ ನಿಮಿರುವಿಕೆಯನ್ನು ನಿಯಂತ್ರಿಸಲಾಗುತ್ತದೆ, ನಿಮ್ಮ ಅಪಧಮನಿಗಳು ಧೂಮಪಾನದಿಂದ ಮುಚ್ಚಿಹೋಗಿದ್ದರೆ ಶಿಶ್ನ ನಿಮಿರುವುದು ಬಹಳ ಕಷ್ಟಕರ

9. ವ್ಯಾಯಾಮ ಮಾಡದೆ ಇರುವುದು ಹಾಗು ಹೆಚ್ಚಿನ ದೈಹಿಕ ಪರಿಶ್ರಮ ಇಲ್ಲದಿರುವುದು –

ವ್ಯಾಯಾಮ ಮಾಡದೆ ಇರುವುದರಿಂದ ದೇಹದ ತೂಕ ಹೆಚ್ಚಿ ಡಯಾಬಿಟಿಸ್, ರಕ್ತದಲ್ಲಿ ಕೊಬ್ಬಿನ ಅಂಶದ ಹೆಚ್ಚುವಿಕೆ , ಹೃದ್ರೋಗ, ರಕ್ತ ಪರಿಚಲನೆ ಕಡಿಮೆಯಾಗುವುದು ಮುಂತಾದ ತೊಂದರೆಗಳು ಕಾಲಿಡುತ್ತವೆ . ಇವೆಲ್ಲ ನಿಮಿರುವಿಕೆಗೆ ಮಾರಕವಾದವುಗಳು.

10.ಅನ್ಯ ರೋಗಗಳು

ಥೈರೊಯ್ಡ್ , ರಕ್ತಹೀನತೆ , ನರದೌರ್ಬಲ್ಯ ಮುಂತಾದ ಖಾಯಿಲೆಗಳು ಇದ್ದಲ್ಲಿ ಗಂಡಸರಲ್ಲೂ ಹಾಗು ಹೆಂಗಸರಲ್ಲೂ ಲೈಂಗಿಕ ಶಕ್ತಿ ಕಡಿಮೆಯಾಗುತ್ತದೆ

11.ಹಲವು ಔಷಧಿಗಳು

ಕೊಲೆಸ್ಟರಾಲ್ , ರಕ್ತದೊತ್ತಡ ಮುಂತಾದವುಗಳಿಗೆ ತೆಗೆದುಕೊಳ್ಳುವ ಔಷಧಿಗಳೂ ಸಹ ಈ ತೊಂದರೆ ಉಂಟುಮಾಡಬಹುದು ( ಆದರೆ ಯಾವುದೇ ಕಾರಣದಿಂದ ಈ ಔಷಧಿಗಳನ್ನು ನಿಲ್ಲಿಸಬಾರದು).

12. ಪೌಷ್ಟಿಕಾಂಶಗಳ ಕೊರತೆ

ಪೌಷ್ಟಿಕಾಂಶಗಳ ಕೊರತೆ ಸಹ ಗಂಡಸರ ಲೈಂಗಿಕ ಶಕ್ತಿ ಹ್ರಾಸ ಮಾಡಿ ದೌರ್ಬಲ್ಯತೆ ಉಂಟುಮಾಡುತ್ತದೆ

ಸಾಮಾನ್ಯವಾಗಿ ಈ ಮೇಲಿನ ಕಾರಣಗಳಿಂದ ಗಂಡಸರಲ್ಲಿ ನಿಮಿರು ದೌರ್ಬಲ್ಯ ಕಾಣಬರುತ್ತದೆ

ಸಂಪರ್ಕಿಸಿ :
ಡಾ|| ಕೃಷ್ಣ ರಾವ್ ೯೯೪೫೯೯೫೬೬೦  (9945995660)

email:  [email protected]