ತುಪ್ಪ ಅಥವಾ ಘೃತ ದ ಆಯುರ್ವೇದಿಯ ಔಷಧೀಯ ಗುಣಗಳು. ghee benefits in kannada

ತುಪ್ಪಕ್ಕೆ ಆಯುರ್ವೇದದಲ್ಲಿ ಮಹತ್ತರ ಸ್ಥಾನವಿದೆ . ತುಪ್ಪ ಒಣಕೆಮ್ಮಿಗೆ, ನೆನಪಿನ ಶಕ್ತಿ ಹೆಚ್ಚಿಸಲು, ತಲೆಗೂದಲ ಬೆಳವಣಿಗೆಗೆ, ಲೈಂಗಿಕ ಶಕ್ತಿ ಹೆಚ್ಚಿಸಲು , ಹೀಗೆ ಅನೇಕ ತೊಂದರೆಗಳಿಗೆ ಮನೆ ಮದ್ದಾಗಿದೆ .  ತುಪ್ಪ ಅಥವಾ ಘೃತ ದ ಆಯುರ್ವೇದಿಯ ಔಷಧೀಯ ಗುಣಗಳನ್ನು ( ghee benefits in kannada) ಇಲ್ಲಿ ವಿವರಿಸಲಾಗಿದೆ .

Read this article in English Ayurveda Health Benefits and Uses of Ghee

ತುಪ್ಪ ಹಾಗು ಆಯುರ್ವೇದ

ತುಪ್ಪದ ಔಷಧೀಯ ಉಪಯೋಗಗಳ ಬಗ್ಗೆ ಆಯುರ್ವೇದದಲ್ಲಿ ಬಹಳವಾಗಿ ಪ್ರಶಂಸಿಸಲಾಗಿದೆ. ಆಯುರ್ವೇದದಲ್ಲಿ ಅನೇಕ ಬಗೆಯ ತುಪ್ಪಗಳ ಬಗ್ಗೆ ಉಲ್ಲೇಖ ಇದೆ. ಹಸುವಿನ , ಎಮ್ಮೆಯ, ಆಡಿನ, ಒಂಟೆಯ ಹಾಲಿನ ತುಪ್ಪಗಳ ಔಷಧೀಯ ಗುಣಗಳನ್ನು ವರ್ಣಿಸಿದ್ದಾರೆ. ಇದಲ್ಲದೆ ಹೊಸದಾದ ತುಪ್ಪ ಅಥವಾ ನವೀನ ಗ್ರುತ ಹಾಗೂ ಹಳೆಯ ತುಪ್ಪ ಅಥವಾ ಪುರಾಣ ಗ್ರುತ , ಎಂಬ ಇನ್ನು ಅನೇಕ ಬಗೆಗಳಿವೆ.

ಹಾಲನ್ನು ಹೆಪ್ಪು ಹಾಕಿ ಮೊಸರು ಮಾಡಿ , ಕಡೆದು, ಅದರಿಂದ ಬೆಣ್ಣೆ ತೆಗೆದು, ಆ ಬೆಣ್ಣೆಯನ್ನು ಕಾಯಿಸಿ ತೆಗೆದ ತುಪ್ಪವೆ ಶ್ರೇಷ್ಠ. ಆಯುರ್ವೇದ ದ ನಿಯಮಾನುಸಾರ ತುಪ್ಪ ಮಧುರವಾಗಿರುತ್ತದೆ. ಇದು ಜೀರ್ಣವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಹಾಗೂ ದೇಹಕ್ಕೆ ತಂಪನ್ನು ಉಂಟು ಮಾಡುತ್ತದೆ. ವಾತ ದೋಷ ಹಾಗೂ ಪಿತ್ತ ದೋಷಗಳು ಇದರಿಂದ ಕಡಿಮೆಯಾಗುತ್ತವೆ.

ಅನೇಕ ಆರೋಗ್ಯ ಅಧ್ಯಯನಗಳು ನೀವು ತುಪ್ಪ ಅಥವಾ ಬೆಣ್ಣೆಯನ್ನು  ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ, ನಿಮ್ಮ ಹೃದ್ರೋಗದ ಅಪಾಯವನ್ನು ಹೆಚ್ಚಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ. ಹೈಡ್ರೋಜನೀಕರಿಸಿದ ಎಣ್ಣೆಯ (ವನಸ್ಪತಿ ತುಪ್ಪ) ಉಪಉತ್ಪನ್ನವಾದ ಟ್ರಾನ್ಸ್-ಫ್ಯಾಟಿ ಆಮ್ಲಗಳು ಎಲ್ಲಕ್ಕಿಂತ ಹೆಚ್ಚು ಹೃದಯಕ್ಕೆ  ಅನಾರೋಗ್ಯಕರ ಕೊಬ್ಬುಗಳಾಗಿವೆ . ಈ ನಿಟ್ಟಿನಲ್ಲಿ ಅನೇಕ ಅಧ್ಯಯನಗಳು ಬೆಳಕು ಬೀರಿವೆ .

ತುಪ್ಪದ ಔಷಧೀಯ ಗುಣಗಳನ್ನು ಆಯುರ್ವೇದ ಹೀಗೆ ವಿವರಿಸುತ್ತದೆ.

ವಿಡಿಯೋ ನೋಡಿ ಶುದ್ಧ ತುಪ್ಪ ಏಕೆ ಸೇವಿಸಬೇಕು ? ಎಷ್ಟು ಸೇವಿಸಬೇಕು ? Ghee Benefits in Kannada 

ಒಳ್ಳೆ ಹಸುವಿನ ತುಪ್ಪವು , ಪ್ರಮುಖ ಪೋಷಕಾಂಶಗಳನ್ನು  ಮತ್ತು ಗಿಡಮೂಲಿಕೆಗಳ ಸಾರವನ್ನು ಹೀರಿಕೊಳ್ಳುತ್ತದೆ.  ಹೀಗೆ ಹೀರಿಕೊಂಡ ಸಾರವನ್ನು ದೇಹದ ಜೀವಕೋಶಗಳಿಗೆ ತಲುಪಿಸುತ್ತದೆ .  ನಿಮ್ಮ ದೇಹದ ಅಂಗಾಂಶ ಮತ್ತು ಅಂಗಗಳನ್ನು ಸಂಪೂರ್ಣವಾಗಿ ನಯಗೊಳಿಸಿ ಚಲನೆಯನ್ನು ಸುಲಭಗೊಳಿಸುತ್ತದೆ.

 • ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ
 • ಜೀರ್ಣ ಶಕ್ತಿಯನ್ನು ವೃದ್ಧಿ ಮಾಡಿ ಹಸಿವನ್ನು ಹೆಚ್ಚಿಸುತ್ತದೆ.
 • ಪ್ರತಿದಿನವೂ ತುಪ್ಪವನ್ನು ಸೇವಿಸುತ್ತಿದ್ದರೆ ದೇಹದ ಅಂಗಾಂಶಗಳು ಮೃದುವಾಗಿ ದೇಹದ ಚಲನವಲನಗಳು ಸುಲಲಿತವಾಗಿ ನಡೆಯುತ್ತವೆ.
 • ತುಪ್ಪ ಮಲಭದ್ದತೆಯನ್ನು ನಿವಾರಿಸುತ್ತದೆ
 • ಇದನ್ನು ಮಿತಿಯಲ್ಲಿ ಬಳಸಿದರೆ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು
 • ಘೃತ ಶುಕ್ರ ಧಾತುವನ್ನು ಆರೋಗ್ಯಕರವಾಗಿರುವಂತೆ ಮಾಡಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ವೀರ್ಯಾಣುಗಳ ಸಂಖ್ಯೆಯನ್ನು ವೃದ್ಧಿಸುತ್ತದೆ.
 • ಆಯುರ್ವೇದ ಆಚಾರ್ಯರು ಇದನ್ನು ಪುರುಷರಿಗೆ ನಿಮಿರು ದೌರ್ಬಲ್ಯದಲ್ಲೂ ಉಪಯೋಗಿಸುವಂತೆ ಸಲಹೆ ನೀಡುತ್ತಾರೆ
 • ಇದನ್ನು ಪ್ರತಿದಿನ ಉಪಯೋಗಿಸುವುದರಿಂದ ಚರ್ಮದ ಕಾಂತಿ ಹಾಗೂ ಹೊಳಪು ಹೆಚ್ಚಾಗುತ್ತದೆ.
 • ಕಣ್ಣುಗಳ ಆರೋಗ್ಯ ಹೆಚ್ಚಿಸುತ್ತದೆ.
 • ತಲೆ ಕೂದಲಿಗೂ ಬಹಳ ಒಳ್ಳೆಯದು.
 • ಸರ್ಪಸುತ್ತು ಅಥವಾ ಹರ್ಪಿಸ್ ರೋಗಕ್ಕೆ ಇದು ರಾಮಬಾಣ
 • ಗಾಯವನ್ನು ಬೇಗನೆ ಮಾಯುವಂತೆ ಮಾಡಿ ಒಣಗಿಸುತ್ತದೆ.

ಉತ್ತಮ ಆರೋಗ್ಯಕ್ಕೆ ತುಪ್ಪ ಬಳಸುವುದು ಹೇಗೆ ? ತುಪ್ಪದಿಂದ ಉಪಯುಕ್ತವಾದ ಮನೆ ಮದ್ದುಗಳು

ನೆನಪಿನ ಶಕ್ತಿ ಹೆಚ್ಚಿಸಲು

2 ಬಟ್ಟಲು ಮಂಡೂಕ ಪರ್ಣಿ ಅಥವಾ ಒಂದೆಲಗ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಇದನ್ನು 5 ಟೀ ಚಮಚ ತುಪ್ಪದಲ್ಲಿ ಚೆನ್ನಾಗಿ ಹುರಿಯಿರಿ.ಒಂದು ಗಾಜಿನ ಭರಣಿಯಲ್ಲಿ ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಿ ಶೇಖರಿಸಿಡಿ. ಪ್ರತಿ ದಿನ ಬಿಸಿ ಅನ್ನದ ಜೊತೆ ಇದನ್ನು ಒಂದು ಚಮಚದಷ್ಟು ಕಲಿಸಿಕೊಂಡು ತಿನ್ನಿ. ಇದಕ್ಕೆ ಸೈನ್ಧ ವ ಉಪ್ಪು ಸಹ ಬೆರೆಸಿಕೊಳ್ಳಬಹುದು.

ಒಣ ಕೆಮ್ಮಿಗೆ ತುಪ್ಪದ ಮನೆ ಮದ್ದು

ಯಾವುದಕ್ಕೂ ಬಗ್ಗದ ಒಣ ಕೆಮ್ಮಿದ್ದಾಗ ಈ ಮನೆ ಮದ್ದು ಮಾಡಿ . ಒಂದು ಲೋಟ ಹಾಲನ್ನು ಬಿಸಿ ಮಾಡಿ . ಅದು ಕುಡಿಯಲು ಬಂದಾಗ ಒಂದು ಚಿಟಿಕೆ ಅರಿಶಿಣ ಹಾಕಿ . ಇದಕ್ಕೆ ಒಂದು ಟೀ ಚಮಚ ಕೆಂಪು ಕಲ್ಲು ಸಕ್ಕರೆ ಹಾಕಿ , ಹಾಲನ್ನು ಕೆಳಗಿಳಿಸಿ . ಇದನ್ನು ಚಿನ್ನದ ಹಾಲು ( Golden milk or Turmeric Milk ) ಎಂದು ಹೇಳುತ್ತಾರೆ . ಇದಕ್ಕೆ ಒಂದು ಚಮಚ ತುಪ್ಪ ಹಾಕಿ ಕುಡಿಯುವ ಹದಕ್ಕೆ ಆರಿಸಿ , ರಾತ್ರಿ ಹಾಗು ಬೆಳಗ್ಗೆ ಕುಡಿಯಿರಿ . ಇದಕ್ಕೆ ತುಪ್ಪದಲ್ಲಿ ಹುರಿದ ಬಾದಾಮಿ ಚೂರುಗಳನ್ನೂ ಸಹ ಸೇರಿಸಬಹುದು .ಈ ಹಾಲು ನಿದ್ರಾಹೀನತೆಗೆ ಒಳ್ಳೆಯ ಆಯುರ್ವೇದೀಯ ಚಿಕಿತ್ಸೆ .

ಒಣ ಕೂದಲಿಗೆ ಮತ್ತು ಬಿರಿದ ಕೂದಲ ತುದಿಗಳಿಗೆ ಮನೆ ಮದ್ದು

ಒಂದು ಟೀ ಚಮಚ ತುಪ್ಪಕ್ಕೆ ೨ ಟೀ ಚಮಚ ಪರಿಶುದ್ಧ ತೆಂಗಿನೆಣ್ಣೆ ಬೆರೆಸಿ ಸ್ವಲ್ಪವೇ ಬಿಸಿ ಮಾಡಿ . ಇದಕ್ಕೆ ೮ರಿಂದ ೧೦ ಕರಿಬೇವಿನ ಎಲೆಗಳನ್ನು ಹಾಕಿ ಕುದಿಸಿ. ಇದು ಸ್ವಲ್ಪ ಆರಿದ ಮೇಲೆ ಕೂದಲಿನ ತುದಿಗೆ ಹಚ್ಚಿ . ಇದರೊಡನೆ ಪ್ರತಿ ದಿನ ೨ ಟೀ ಚಮಚದಷ್ಟು ತುಪ್ಪ ಸೇವಿಸಿ .

ಮಲಬದ್ಧತೆಗೆ ಹಾಗು ಗರ್ಭಿಣಿಯರಲ್ಲಿನ ಮಲಬದ್ಧತೆಗೆ ಪರಿಹಾರ

ಮಲಭದ್ದತೆ ಗರ್ಭಿಣಿಯರಲ್ಲಿ ಸರ್ವೇಸಾಮಾನ್ಯ . ಇದಕ್ಕೆ ಪರಿಹಾರವಾಗಿ ಒಂದು ಚಮಚ ತುಪ್ಪವನ್ನು ಒಂದು ಲೋಟ ಬಿಸಿನೀರಿಗೆ ಬೆರೆಸಿ ಪ್ರತಿದಿನ ಬೆಳಗ್ಗೆ ಹಾಗು ರಾತ್ರಿ ಕುಡಿಯುವದರಿಂದ ಮಲಭದ್ದತೆ ನಿವಾರಣೆಯಾಗುತ್ತದೆ . ಈ ಮನೆ ಮದ್ದು ವಯಸ್ಕರಿಗೆ , ಮಕ್ಕಳಿಗೆ ಹಾಗು ಹಿರಿಯರಿಗೂ ಉಪಯುಕ್ತ .

ತುಪ್ಪ ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ:

ತುಪ್ಪದ ಒಂದು ಪ್ರಮುಖ ಪ್ರಯೋಜನವೆಂದರೆ ಅದು ತೂಕ ನಷ್ಟಕ್ಕೆ (ದೇಹದ ತೂಕ ಇಳಿಸಲು ಆಯುರ್ವೇದ ಹರ್ಬಲ್ ಟೀಗಳು ) ಸಹಾಯ ಮಾಡುತ್ತದೆ. ಶುದ್ಧ ತುಪ್ಪದಲ್ಲಿ ಕಾಂಜುಗೇಟೆಡ್ ಲಿನೋಲೆನಿಕ್ ಆಸಿಡ್ (ಸಿಎಲ್‌ಎ) ಇದೆ ಎಂದು ಹೇಳಲಾಗುತ್ತದೆ. ಸಿಎಲ್‌ಎ ನಿಮ್ಮ ಹೊಟ್ಟೆಯು ಬಹಳ ಸಮಯದವರೆಗೆ ತುಂಬಿದಂತೆ ಇರಲು ಸಹಾಯ ಮಾಡುತ್ತದೆ .ಹೀಗಾಗಿ, ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಸಿಎಲ್‌ಎ ದೇಹದಲ್ಲಿನ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಇದರ ಪರಿಣಾಮವಾಗಿ ಅನಗತ್ಯ ಕೊಬ್ಬು ಕರಗುತ್ತದೆ .

ಲೇಖಕಿ : ಡಾ.ಸವಿತಾ ಸೂರಿ, ಸಲಹೆಗಾರ ಆಯುರ್ವೇದ ವೈದ್ಯೆ

ಉಚಿತ ಆಯುರ್ವೇದ ಸಮಾಲೋಚನೆ

+91 9945995660 / +91 9448433911 ಗೆ ಕರೆ ಮಾಡಿ

ವಾಟ್ಸ್ ಅಪ್ + 91 6360108663 /