ಎಣ್ಣೆಯುಕ್ತ ಚರ್ಮಕ್ಕೆ ೩ ಸುಲಭ ಆರೈಕೆಗಳು (Oily skin care tips in kannada)

Read this article in english Ayurvedic Home Remedies, Tips, Face packs for Oily Skin

# 1 ಎಣ್ಣೆಯುಕ್ತ ಚರ್ಮಕ್ಕಾಗಿಯೇ ತಯಾರಿಸಲಾದ ಸೌಂದರ್ಯವರ್ಧಕಗಳನ್ನು ಬಳಸಿ .

ನಿಮಗೆ ಎಣ್ಣೆಯುಕ್ತ ಚರ್ಮವಿದ್ದರೆ ಅದಕ್ಕೆ ಸಾಧಾರಣ ಆರೈಕೆ ಸಾಕಾಗುವುದಿಲ್ಲ . ಏಕೆಂದರೆ ಇದರಿಂದ ನಿಮ್ಮ ಮುಖವು ಜಿಡ್ಡಿನಿಂದ ಕೂಡಿ ಮೊಡವೆಗಳು ಉದ್ಭವಿಸಲು ಕಾರಣವಾಗುತ್ತದೆ. ಇದರಿಂದ ಮುಖದ ಅಂದಗೆಟ್ಟು ನಿಮಗೆ ಮಾನಸಿಕವಾಗಿ ಹಿಂಸೆ ನೀಡಬಹುದು . ಎಣ್ಣೆಯುಕ್ತ ಚರ್ಮವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಹಾಗು ಎಣ್ಣೆಯ ಅಂಶ ಕಡಿಮೆ ಮಾಡಲು ಉತ್ತಮ ೩ ಸುಲಭ ಸಲಹೆಗಳು ಇಲ್ಲಿವೆ.

ಆಲ್ಕೊಹಾಲ್ ಮುಕ್ತ ಕ್ಲೆನ್ಸರ್ (alcohol free cleanser) ಮೂಲಕ ನಿಮ್ಮ ಮುಖವನ್ನು ಪ್ರತಿದಿನ ಎರಡು ಬಾರಿ ತೊಳೆಯಿರಿ.  ಆದರೆ ಎರಡಕ್ಕಿಂತ ಹೆಚ್ಚು ಸಲ ತೊಳೆಯಬೇಡಿ . ನಂತರ ಆಲ್ಕೋಹಾಲ್ ಮುಕ್ತ ಟೋನರ್ ( alcohol free toner ) ಬಳಸಿ.  ಇದರಿಂದ  ಹೆಚ್ಚುವರಿ ಎಣ್ಣೆ ಹೀರಲ್ಪಟ್ಟು , ರಂಧ್ರಗಳನ್ನು ಮುಚ್ಚಲು ಸಹಾಯ ಮಾಡುತ್ತದೆ .  ಹೊರಗಡೆ ಒಣ ಹವ ಇದ್ದರೆ , ನೀವು ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕೆಲಸ ಮಾಡುತ್ತಿದ್ದರೆ  ಅಥವಾ  ಮೊಡವೆಗಳಿಗೆ ಔಷಧ ಹಚ್ಚುತ್ತಿದ್ದರೆ , ತೆಳುವಾದ  ಮಾಯಿಶ್ಚರೈಸರ್ (light moisturiser ) ಹಚ್ಚಿಕೊಳ್ಳುವುದನ್ನು ಮರೆಯ ಬೇಡಿ . ನೀವು ಮೇಕ್ಅಪ್ ಬಳಸುತ್ತಿದ್ದರೆ, ಹೆಚ್ಚು ಮ್ಯಾಟ್ ಫಿನಿಷ್ ಗೆ  ತೈಲ ಮುಕ್ತ ಸೌಂದರ್ಯವರ್ಧಕಗಳನ್ನು ಬಳಸಿ

ಪ್ರತಿಯೊಬ್ಬರ ಚರ್ಮವೂ ವಿಭಿನ್ನವಾಗಿರುತ್ತದೆ . ಎಣ್ಣೆಯುಕ್ತ ಚರ್ಮ, ಒಣ ಚರ್ಮ , ಸಾಧಾರಣ ಚರ್ಮ ಅಥವಾ ಮಿಶ್ರ ರೀತಿಯ ಚರ್ಮವನ್ನು ಹೊಂದಿರುತ್ತಾರೆ . ಎಣ್ಣೆಯುಕ್ತ ಚರ್ಮವಿರುವಾಗ , ಚರ್ಮವನ್ನು ಹೆಚ್ಚು ಒಣಗಿಸದೆ , ಹೆಚ್ಚಾದ ಚರ್ಮದ ಎಣ್ಣೆಯನ್ನು  ನಿಯಂತ್ರಿಸುವುದು ಅಗತ್ಯ . ಹಾಗಾಗಿ ನೀವು ತ್ವಚೆಯ  ಉತ್ಪನ್ನಗಳನ್ನು ಖರೀದಿಸುವಾಗ ,  ಎಣ್ಣೆಯುಕ್ತ ಚರ್ಮಕ್ಕಾಗಿ ವಿಶೇಷವಾಗಿ ರೂಪಿಸಲಾದ ಸೌಂದರ್ಯ ಪ್ರಸಾದನಗಳನ್ನು ಕೊಳ್ಳಿರಿ.  ವಿಲ್ಲೋ ತೊಗಟೆ ಮತ್ತು ಝಿನ್ಕ್  ಆಕ್ಸೈಡ್ ಅನ್ನು  ಘಟಕಾಂಶಗಳಾಗಿ ಒಳಗೊಂಡಿರುವ ಪ್ರಸಾದನಗಳನ್ನು ಬಳಸಿ . ಈ ಎರಡು ಘಟಕಾಂಶಗಳು ಹೆಚ್ಚುವರಿ ಎಣ್ಣೆಯನ್ನು ಚರ್ಮದ ಮೇಲ್ಮೈಯಿಂದ ಹೀರಿಕೊಳ್ಳಲು ಸಹಾಯ ಮಾಡುತ್ತವೆ .

# 2: ಆರೋಗ್ಯಕರವಾದ  ಆಹಾರವನ್ನು ಸೇವಿಸಿ

ನೀವು ಬಹಳವಾಗಿ  ಎಣ್ಣೆ ಹಾಗು ಕೊಬ್ಬಿನ ಆಹಾರವನ್ನು ಸೇವಿಸುವುದರಿಂದ ನಿಮ್ಮ ಚರ್ಮದ ತೈಲ ಗ್ರಂಥಿಗಳು ಹೆಚ್ಚು ಎಣ್ಣೆಯನ್ನು ಉತ್ಪಾದಿಸುತ್ತವೆ ಎಂದು ವಿಜ್ಞಾನಿಗಳು ಗಮನಿಸಿದ್ದಾರೆ. ಆದ್ದರಿಂದ ನೀವು ಕರಿದ, ಕೊಬ್ಬಿನ ಫ್ರೈಸ್ ಮತ್ತು ಚಿಪ್ಸ್  ‌ಗಳಿಂದ ದೂರವಿರಿ.  ಇದರ ಬದಲು ಹೆಚ್ಚಾಗಿ  ಹಣ್ಣು ಮತ್ತು ತರಕಾರಿಗಳನ್ನು ಬಳಸಿ .  ಇವು ದೇಹಕ್ಕೆ ಒಳ್ಳೆಯದು ಮಾತ್ರವಲ್ಲದೆ,  ಚರ್ಮವನ್ನು ಆರೋಗ್ಯಕರ, ಕಾಂತಿಯುಕ್ತ ಮತ್ತು ಶುಭ್ರವಾಗಿರಿಸಲು ಸಹಾಯ ಮಾಡುವ, ವಿಟಮಿನ್, ಖನಿಜ ಮತ್ತು ಇತರ  ಪೋಷಕಾಂಶಗಳಿಂದ ಕೂಡಿವೆ .

ನೀವು ತಿಳಿದುಕೊಳ್ಳಬೇಕಾದ ಒಂದು ವಿಷಯವೆಂದರೆ  ವಿಟಮಿನ್ ಎ ಮತ್ತು ಬಿ 5, ಚರ್ಮದ ಮೇಲಿನ ತೈಲ ಗ್ರಂಥಿಗಳನ್ನು ಆರೋಗ್ಯಯುತವಾಗಿ  ಮಾಡುವ ಜೀವಸತ್ವಗಳು . ವಿಟಮಿನ್ ‘ಎ’ ಯು  ಕ್ಯಾರೆಟ್, ಮಾವಿನಹಣ್ಣು, ಕೋಸುಗಡ್ಡೆ ಮತ್ತು ಪಾಲಕ್ ಸೊಪ್ಪಿನಲ್ಲಿ ಹೇರಳವಾಗಿರುತ್ತದೆ . ವಿಟಮಿನ್ ಬಿ 5,  ದ್ವಿದಳ ಧಾನ್ಯಗಳು, ಮೊಟ್ಟೆ ಮತ್ತು ಮಾಂಸದಲ್ಲಿ ಇರುತ್ತದೆ .

# 3: ಉತ್ತಮ ಪೌಷ್ಟಿಕಾಂಶಗಳ ಪೂರೈಕೆ 

ನಿಮಗೆ ನಿರ್ವಹಿಸಲು ಆಗದಷ್ಟು ಎಣ್ಣೆಯುಕ್ತ ಚರ್ಮವಿದ್ದರೆ , ಅದಕ್ಕೆ  ವಿಟಮಿನ್ ಎ ಮತ್ತು ಬಿ 5 ಜೀವಸತ್ವಗಳನ್ನು  ಉಳ್ಳ ಆಹಾರವನ್ನು ಸೇವಿಸಬೇಕಾಗುತ್ತದೆ . ಅಥವಾ ಇದೇ ಜೀವಸತ್ವಗಳುಳ್ಳ ಮಾತ್ರೆ ಅಥವಾ ಕ್ಯಾಪ್ಸುಲ್ ಗಳನ್ನೂ ಸೇವಿಸಬಹುದು .  ವಿಟಮಿನ್ ‘ಎ ‘ ತೈಲ ಉತ್ಪಾದನೆ ಮತ್ತು ತೈಲ ಸಂಬಂಧಿತ ಮೊಡವೆಗಳನ್ನು ತೀವ್ರವಾಗಿ ಸುಧಾರಿಸಬಹುದಾದರೂ, ಇದರ ಅಡ್ಡಪರಿಣಾಮಗಳೂ ಇರುತ್ತದೆ .  ವಿಟಮಿನ್ ಬಿ 5 ಪೂರಕಗಳನ್ನು ತೆಗೆದುಕೊಳ್ಳುವುದು ಸುರಕ್ಷಿತ. ಇದು  ತೈಲ ಗ್ರಂಥಿಗಳನ್ನು ಮುಚ್ಚದೆ ಚರ್ಮದ ಮೇಲೆ ತೈಲವನ್ನು ನಿಯಂತ್ರಿಸುತ್ತದೆ ಮತ್ತು ಕಡಿಮೆ ಅಡ್ಡಪರಿಣಾಮಗಳನ್ನು ಹೊಂದಿರುತ್ತವೆ. ಆದರೂ ಅತಿರೇಕಕ್ಕೆ ಹೋಗಬೇಡಿ. ಆದ್ದರಿಂದ ನಿಮ್ಮ ಕುಟುಂಬ ವೈದ್ಯರೊಡನೆ ಚರ್ಚಿಸಿ ಇದನ್ನು ತೆಗೆದುಕೊಳ್ಳುವುದು ಒಳ್ಳೆಯದು .