ಆಯುರ್ವೇದದ ಪ್ರಕಾರ ಈರುಳ್ಳಿಯ ಪ್ರಯೋಜನಗಳು onion benefits in kannada

ಆಯುರ್ವೇದ ಆಚಾರ್ಯರು ಪುರುಷರಿಗೆ ಈರುಳ್ಳಿಯನ್ನು ನಿಮಿರು ದೌರ್ಬಲ್ಯದಲ್ಲಿ  ಮತ್ತು ವೀರ್ಯಾಣುಗಳ ಸಂಖ್ಯೆ ಮತ್ತು ಚಲನಶೀಲತೆಯನ್ನು ಹೆಚ್ಚಿಸಲು ಉಪಯೋಗಿಸುವಂತೆ  ಶಿಫಾರಸು ಮಾಡುತ್ತಾರೆ. ಕೀಲು ನೋವು, ಮೊಡವೆ, ಗುಳ್ಳೆ, ಕೂದಲು ಉದುರುವುದು ಮತ್ತು ದಂತ ಕ್ಷಯವನ್ನು ಕಡಿಮೆ ಮಾಡಲೂ ಸಹ ನೀರುಳ್ಳಿ ಉಪಯುಕ್ತವಾಗಿದೆ.

ವಿಷಯ ಸೂಚಿ

ಆಯುರ್ವೇದದಲ್ಲಿ  ಈರುಳ್ಳಿ

ಆಯುರ್ವೇದದಲ್ಲಿ ಈರುಳ್ಳಿಯ ಔಷಧೀಯ ಗುಣಗಳು

ಕೂದಲು ಬೆಳವಣಿಗೆಗೆ ಈರುಳ್ಳಿ ರಸ  onion juice for hair growth in kannada

ಕೂದಲಿನ ಬೆಳವಣಿಗೆಗೆ  ಈರುಳ್ಳಿ ಬಳಸುವುದು ಹೇಗೆ ?

ಈರುಳ್ಳಿಯ ಅರೋಗ್ಯ ಪ್ರಯೋಜನಗಳು Onion Health Benefits Kannada

ಈರುಳ್ಳಿಯ ಮನೆಮದ್ದುಗಳು

Read This Article in English  Ayurveda Health Benefits of Onion

.

ಆಯುರ್ವೇದದಲ್ಲಿ  ಈರುಳ್ಳಿ

ಈರುಳ್ಳಿಯನ್ನು ಆಯುರ್ವೇದದಲ್ಲಿ  ಫಲಾಂಡು ಎಂದು ಕರೆಯಲಾಗುತ್ತದೆ. ಇದನ್ನು ‘ಯವನೇಷ್ಟ ’ (ಪಶ್ಚಿಮದಿಂದ ಬಂದದ್ದು), ದುರ್ಗಂಧ, (ಇದು ದುರ್ವಾಸನೆ ಹೊಂದಿದೆ), ಮುಖಾ ದೂಷಕಾ (ಇದು ಬಾಯಿಯ ದುರ್ಗಂಧ ಉಂಟುಮಾಡುತ್ತದೆ) ಎಂದೂ ಕರೆಯುತ್ತಾರೆ.

ಸಮಶೀತೋಷ್ಣ ವಲಯಗಳಲ್ಲಿ ಗಿಡಮೂಲಿಕೆ ಸಸ್ಯ ಈರುಳ್ಳಿ ಬೆಳೆಯುತ್ತದೆ . ಇದು “ಲಿಲಿಯಾಸಿ” ಕುಟುಂಬಕ್ಕೆ ಸೇರಿದೆ ಮತ್ತು “ಆಲಿಯಮ್ ಸೆಪಾ” ಎಂಬ ಲ್ಯಾಟಿನ್ ಹೆಸರನ್ನು ಹೊಂದಿದೆ. ಈ ಸಸ್ಯವು 2-5 ಅಡಿ ಎತ್ತರವನ್ನು ತಲುಪುತ್ತದೆ ಮತ್ತು ಹಸಿರು ಬಿಳಿ ಹೂವುಗಳ ಗುಚ್ಛ ಹೊಂದಿರುತ್ತದೆ . ಎಲೆಗಳ ಬುಡದಿಂದ ಈರುಳ್ಳಿ ಬೆಳೆದು ಭೂಗತ ಗಡ್ಡೆಗಳನ್ನು  ರೂಪಿಸುತ್ತದೆ. ಈರುಳ್ಳಿಯ ಬೀಜಗಳು ಕಪ್ಪು ಬಣ್ಣದಲ್ಲಿರುತ್ತವೆ.

ಇದನ್ನು ಭಾರತದಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ

ಹಿಂದಿ – ಪ್ಯಾಜ್ , ಪಿಯಾಜ್
ಕನ್ನಡ – ನೀರುಳ್ಳಿ , ಈರುಳ್ಳಿ
ಬಂಗಾಳಿ – ಪ್ಯಾಂಜ್
ಮಲಯಾಳಂ – ಚುವನ್ನೌಲ್ಲಿ
ತೆಲುಗು – ನಿರುಲ್ಲಿ
ತಮಿಳು – ವೆಂಗಯಂ
ಪಂಜಾಬಿ– ಗಂಡಾ
ಮರಾಠಿ – ಕಾಂದ
ಗುಜರಾತಿ – ಡುಂಗಲಿ, ಡುಂಗರಿ, ಕಂದೋ

.

ಆಯುರ್ವೇದದಲ್ಲಿ ಈರುಳ್ಳಿಯ ಔಷಧೀಯ ಉಪಯೋಗಗಳು

ಆಯುರ್ವೇದದಲ್ಲಿ ಈರುಳ್ಳಿಯ ಔಷಧೀಯ ಗುಣಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ

ಆಯುರ್ವೇದದ ಪ್ರಕಾರ ಈರುಳ್ಳಿ ಜೀರ್ಣಿಸಿಕೊಳ್ಳಲು ಕಷ್ಟವಾಗಿರುತ್ತದೆ  (ಗುರು) ಮತ್ತು ಸ್ಪರ್ಶಿಸಿದಾಗ ಜಾರಿಕೆ ಕಂಡು ಬರುತ್ತದೆ (ಸ್ನಿಗ್ಧಾ). ರುಚಿಯಲ್ಲಿ  ಸಿಹಿ (ಮಧುರ ರಸ) ಮತ್ತು ಖಾರವಾಗಿದ್ದು ,  ತೀಕ್ಷ್ಣವಾದ ವಾಸನೆ (ಕಟು) ಹೊಂದಿರುತ್ತದೆ . ಇವು  ದೇಹದ ಉಷ್ಣತೆ ಹೆಚ್ಚಿಸುತ್ತವೆ (ಉಷ್ಣ  ವೀರ್ಯ ) .  ಜೀರ್ಣಕ್ರಿಯೆಯ ನಂತರ (ಮಧುರಾ ವಿಪಾಕಾ) ಸಿಹಿ ರುಚಿಯನ್ನು ಪಡೆಯುತ್ತವೆ .ಇದರ  ಬೀಜಗಳನ್ನು  ಮತ್ತು ಗಡ್ಡೆಗಳನ್ನು  ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇವು ವಾತ ದೋಷವನ್ನು ಸಮತೋಲನಗೊಳಿಸುತ್ತದೆ, ಮಧ್ಯಮವಾಗಿ ಕಫ ದೋಷವನ್ನು ಹೆಚ್ಚಿಸುತ್ತದೆ ಮತ್ತು ಪಿತ್ತ ದೋಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

.

ಕೂದಲು ಬೆಳವಣಿಗೆಗೆ ಈರುಳ್ಳಿ ರಸ  onion juice for hair growth in kannada

ಈರುಳ್ಳಿಯು  ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿ  ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು ಅನೇಕ ಪೌಷ್ಟಿಕಾಂಶಗಳನ್ನೂ ಹೊಂದಿದೆ. ಈರುಳ್ಳಿಯು  ದೇಹ ಶುದ್ಧೀಕರಣ ಮತ್ತು ಉತ್ತೇಜಕ ಗುಣಗಳನ್ನು ಹೊಂದಿದೆ. ಈರುಳ್ಳಿಯಲ್ಲಿ ವಿಟಮಿನ್ ಸಿ ಮತ್ತು ಬಿ 6, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಜರ್ಮೇನಿಯಂನಂತಹ ಅನೇಕ ಪ್ರಮುಖ ಖನಿಜಗಳು ಮತ್ತು ಜೀವಸತ್ವಗಳಿವೆ. ಈರುಳ್ಳಿಯಲ್ಲಿ ಗಂಧಕವೂ ಅಧಿಕವಾಗಿದೆ. ಸಲ್ಫರ್ ಅಥವಾ ಗಂಧಕ  ನಮ್ಮ ದೇಹದ ಪ್ರತಿಯೊಂದು ಜೀವಕೋಶದಲ್ಲೂ ಇರುವ ಖನಿಜವಾಗಿದೆ.  ಇದು ಕೂದಲು, ಚರ್ಮ ಮತ್ತು ಉಗುರುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ  ಇರುತ್ತದೆ . ರಕ್ತಪರಿಚಲನೆಯನ್ನು ಉತ್ತೇಜಿಸುವ ಮತ್ತು ಉರಿಯೂತವನ್ನು ಕಡಿಮೆ ಮಾಡುವ ಸಾಮರ್ಥ್ಯದಿಂದಾಗಿ ಗಂಧಕವನ್ನು  ಹೆಚ್ಚಾಗಿ “ಸೌಂದರ್ಯ ಖನಿಜ” ಮತ್ತು “ಗುಣಪಡಿಸುವ ಖನಿಜ” ಎಂದು ಕರೆಯಲಾಗುತ್ತದೆ.

ಇದು  ಗಂಧಕವು ಜನರಲ್ಲಿ ಕೂದಲು ಬೆಳವಣಿಗೆಯನ್ನು ಪ್ರಾರಂಭಿಸುತ್ತದೆ ಎಂಬ ಸಿದ್ಧಾಂತಕ್ಕೂ ಪುರಾವೆ  ನೀಡುತ್ತದೆ. ಈರುಳ್ಳಿಯಲ್ಲಿರುವ  ಹೆಚ್ಚಿನ ಪ್ರಮಾಣದ ಗಂಧಕವು ಕೂದಲಿನ ಬೇರುಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

.

ಕೂದಲಿನ ಬೆಳವಣಿಗೆಗೆ  ಈರುಳ್ಳಿ ಬಳಸುವುದು ಹೇಗೆ ?

ಹೊಸದಾಗಿ ಹಿಂಡಿದ ಹಸಿ ಈರುಳ್ಳಿ ರಸವನ್ನು ತೆಗೆದುಕೊಳ್ಳಿ. ಇದನ್ನು ನೇರವಾಗಿ ನೆತ್ತಿಗೆ ಹಚ್ಚಿ, ನೆತ್ತಿ ಮತ್ತು ಕೂದಲಿನ ಬೇರುಗಳಿಗೆ ಆಳವಾಗಿ ಮಸಾಜ್ ಮಾಡಿ. ಶಾಂಪೂ ಮಾಡುವ ಮೊದಲು ಸುಮಾರು ಅರ್ಧ ಘಂಟೆಯವರೆಗೆ ನೆತ್ತಿಯ ಮೇಲೆ ಈ ರಸವನ್ನು ಬಿಡಿ. ಈ ಚಿಕಿತ್ಸೆಯನ್ನು ಪ್ರತಿದಿನ ಮಾಡಿ. ಹೆಚ್ಚಿನ ಸಂದರ್ಭಗಳಲ್ಲಿ, ನಿಯಮಿತವಾಗಿ ಮಾಡುವ ಈ  ಈರುಳ್ಳಿ ಚಿಕಿತ್ಸೆಯು ಹಲವಾರು ತಿಂಗಳುಗಳಲ್ಲಿ ಕೂದಲಿನ ಬೆಳವಣಿಗೆ ಹೆಚ್ಚಿಸಿ ದಟ್ಟವಾಗಿಸುತ್ತದೆ. ಈರುಳ್ಳಿ ರಸವು ಕೂದಲಿನ ಬೇರುಗಳನ್ನು  ಪುನಃಚೇತನಗೊಳಿಸುತ್ತದೆ  ಮತ್ತು ನೆತ್ತಿಯ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ, ಇದರಿಂದ  ಕೂದಲಿನ ಬಲವಾದ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

.

ಈರುಳ್ಳಿಯ ಅರೋಗ್ಯ ಪ್ರಯೋಜನಗಳು

ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ .

ಹೃದಯ ಸಂಬಂಧಿ ಕಾಯಿಲೆಗಳ  ಅಪಾಯವನ್ನು ಕಡಿಮೆ ಮಾಡಲು ಸಹಕರಿಸುತ್ತದೆ .

ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಸಹಾಯ ಮಾಡುತ್ತದೆ

ಇದು ಕ್ಯಾನ್ಸರ್ ಅಪಾಯವನ್ನು ಸಹ ಕಡಿಮೆ ಮಾಡಲು ಸಹಾಯ ಮಾಡಬಹುದು.

ಸಾಂಪ್ರದಾಯಿಕ ಔಷಧದ ರೀತಿ  ಕೆಮ್ಮ ಮತ್ತು  ಶೀತದಲ್ಲಿ  ಬಳಸಲಾಗುತ್ತದೆ.

ಇದು ಚರ್ಮದ ತುರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದರ ರಸವು ಮೊಡವೆ ಮತ್ತು  ಗುಳ್ಳೆಗಳನ್ನು, ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೂದಲಿನ ಬೆಳವಣಿಗೆ ಹೆಚ್ಚಿಸುತ್ತದೆ .

ಪುರುಷರಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ. ( ಲೈಂಗಿಕ ಶಕ್ತಿ ಹೆಚ್ಚಿಸಲು 5 ಸೂಪರ್ ಹಣ್ಣುಗಳು 5 Fruits for Erectile Dysfunction in Kannada )

ನಿಮಿರು ದೌರ್ಬಲ್ಯದಲ್ಲಿ  ಪುರುಷರಿಗೆ ಸಹಾಯ ಮಾಡುತ್ತದೆ. ( ಗಂಡಸರಲ್ಲಿ ನಿಮಿರು ದೌರ್ಬಲ್ಯ Erectile Dysfunction or Impotence in Kannada )

ಹಸಿ ಈರುಳ್ಳಿ ತಿನ್ನುವುದರಿಂದ ಉಂಟಾಗುವ ಹಾನಿಗಳು

  1. ಮೈಗ್ರೇನ್ ತಲೆನೋವನ್ನು  ಪ್ರಚೋದಿಸಬಹುದು.
  2. ಹಸಿ ಈರುಳ್ಳಿ  ತಿಂದಾಗ ಬಾಯಿಯಿಂದ ದುರ್ಗಂಧ ಬರುತ್ತದೆ. ಇಂತಹ ಸಮಯದಲ್ಲಿ ಬಾಯಿಯ ದುರ್ಗಂಧ ಹೋಗಲಾಡಿಸಲು ಸೋಂಪು ಕಾಳನ್ನು ಜಗಿಯ ಬಹುದು ( ಸೋಂಪು ಕಾಳಿನ ಪ್ರಯೋಜನಗಳು fennel seeds health benefits in kannada )
  3. ಕೆಲವು ಜನರಲ್ಲಿ, ಹೊಟ್ಟೆಯಲ್ಲಿ ವಾಯು ತುಂಬಿಕೊಂಡು ಹೊಟ್ಟೆ ಉಬ್ಬರಿಸಬಹುದು
  4. ಹೊಟ್ಟೆ ಮತ್ತು ಎದೆ ಉರಿ  ಕೂಡ ಪ್ರಾರಂಭವಾಗಬಹುದು.

.

ಈರುಳ್ಳಿಯ ಮನೆಮದ್ದುಗಳು

ಎದೆಯಲ್ಲಿ ಕಫದ  ದಟ್ಟಣೆಯನ್ನು ಸಡಿಲಗೊಳಿಸುತ್ತದೆ

ನಿಮಗೆ ಧೀರ್ಘವಾದ , ಕಫಭರಿತ  ಕೆಮ್ಮು ಇದ್ದರೆ, ಅದನ್ನು ಎದುರಿಸಲು ಅದ್ಭುತ ಮತ್ತು ಸೂಪರ್ ಕೈಗೆಟುಕುವ ಮಾರ್ಗವೆಂದರೆ ಈರುಳ್ಳಿ. ಇದು ಕಫವನ್ನು ಸಡಿಲಿಸಿ ಕೆಮ್ಮು ನಿವಾರಿಸುತ್ತದೆ .

ಇದಕ್ಕಾಗಿ ಈರುಳ್ಳಿ ಬಳಸುವ ಒಂದು ಸರಳ ವಿಧಾನವೆಂದರೆ – ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ ಕೊಬ್ಬರಿ ಎಣ್ಣೆಯೊಂದಿಗೆ ಜಜ್ಜಿ ಪೇಸ್ಟ್ ನಂತೆ ಮಾಡಿಕೊಳ್ಳಿ . ಇದನ್ನು ತೆಳುವಾದ ಶುದ್ಧವಾದ ಬಟ್ಟೆಯಲ್ಲಿ ಕಟ್ಟಿ , ಹಬೆಯ ಮೇಲೆ ಹಿಡಿದು ಬಿಸಿ ಮಾಡಿ . ಇದನ್ನು ೧೫ ರಿಂದ ೨೦ ನಿಮಿಷ ಎದೆಯ ಮೇಲೆ ಇಟ್ಟು , ಇದರಿಂದ ಬರುವ ಬಿಸಿ ಹಬೆಯನ್ನು ಉಸಿರಾಡಿಸಿ . ಇದರಿಂದ ಕಫ ಸಡಿಲಾಗಿ ಹೊರಬರುತ್ತದೆ . ನಿಮಗೆ ಈರುಳ್ಳಿಯಿಂದ ಚರ್ಮದ ಅಲರ್ಜಿ ಇದ್ದರೆ ಉಪಯೋಗಿಸಬೇಡಿ .

ಹೊಟ್ಟೆನೋವಿಗೆ ಈರುಳ್ಳಿಯ ಟೀ

ಅರ್ಧ ಈರುಳ್ಳಿಯನ್ನು ಉದ್ದಕ್ಕೆ ಕತ್ತರಿಸಿ, ೧ ಟೀ ಚಮಚ ಸೋಂಪು ಕಾಳಿನೊಂದಿಗೆ  ೧/೨ ಲೀಟರ್ ನೀರಿನಲ್ಲಿ ಕುದಿಸಿ . ಇದನ್ನು ಸ್ವಲ್ಪ ಸ್ವಲ್ಪವಾಗಿ ಕುಡಿಯಿರಿ . ಇದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ

ಲೇಖಕಿ : ಡಾ.ಸವಿತಾ ಸೂರಿ, ಸಲಹೆಗಾರ ಆಯುರ್ವೇದ ವೈದ್ಯೆ

ಉಚಿತ ಆಯುರ್ವೇದ ಸಮಾಲೋಚನೆ

+91 9945995660 / +91 9448433911 ಗೆ ಕರೆ ಮಾಡಿ

ವಾಟ್ಸ್ ಅಪ್ + 91 6360108663 /