ವೀರ್ಯಾಣುಗಳ ಸಂಖ್ಯೆ ಹಾಗು ಚಲನೆ ಹೆಚ್ಚಿಸಲು ಅತ್ಯುತ್ತಮ ಒಣ ಹಣ್ಣುಗಳು

ವೀರ್ಯಾಣುಗಳ ಸಂಖ್ಯೆ ಹಾಗು ಚಲನೆ ಮತ್ತು ಪುರುಷರ ಫಲವತ್ತತೆಯನ್ನು ಹೆಚ್ಚಿಸಲು ಅತ್ಯುತ್ತಮ ಒಣ ಹಣ್ಣುಗಳು – ಒಂದು ಮುಷ್ಟಿಯಷ್ಟು  ಒಣ ಹಣ್ಣುಗಳು ವೀರ್ಯಾಣುಗಳ ಸಂಖ್ಯೆ ಮತ್ತು ಚಲನಶೀಲತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಪ್ರಕೃತಿಚಿಕಿತ್ಸಕರು ಅಭಿಪ್ರಾಯಪಟ್ಟಿದ್ದಾರೆ. ವೀರ್ಯಾಣುಗಳ ಸಂಖ್ಯೆ, ಚಲನಶೀಲತೆ ಮತ್ತು ಫಲವತ್ತತೆಯನ್ನು ಹೆಚ್ಚಿಸುವ ಅತ್ಯುತ್ತಮ ಒಣ ಹಣ್ಣುಗಳು ಯಾವುವು ಎಂಬುದನ್ನು ಈ ಲೇಖನವು ವಿವರಿಸುತ್ತದೆ.

Read this article in English Best Dry Fruits to Increase Sperm Count, Motility and Fertility

ಪುರುಷ ಬಂಜೆತನಕ್ಕೆ ಪರಿಹಾರ ಕಂಡುಕೊಳ್ಳಲು ವಿವಿಧ ಹೊಸ ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ನಿಯಮಿತ ವ್ಯಾಯಾಮ, ದೇಹದ ತೂಕ ನಿರ್ವಹಣೆ ಮತ್ತು ಆರೋಗ್ಯಕರ ಆಹಾರದ ಜೊತೆಗೆ, ಮೆತ್ತಗಿನ ಖರ್ಜೂರ , ಒಣದ್ರಾಕ್ಷಿ ಮತ್ತು ಅಂಜೂರದಂತಹ ಒಣ ಹಣ್ಣುಗಳು ಪುರುಷ ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಇಟಾಲಿಯನ್ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಪುರುಷ ಬಂಜೆತನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಹೆಚ್ಚಿದ ಒತ್ತಡ, ವಿಸ್ತೃತ ಕೆಲಸದ ಸಮಯ, ಸೆಲ್ ಫೋನ್, ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ಗಳಂತಹ ಆಧುನಿಕ ಗ್ಯಾಜೆಟ್‌ಗಳ ಬಳಕೆಯಿಂದಾಗಿರಬಹುದು. ಜಡ ಜೀವನ ಶೈಲಿಯಿಂದಾಗಿ ದೈಹಿಕ ಚಟುವಟಿಕೆಯು ಕಡಿಮೆಯಾಗುವುದು ಸಹ ಪುರುಷರ ಬಂಜೆತನಕ್ಕೆ ಕಾರಣವಾಗಬಹುದು . ಬೊಜ್ಜು, ಮಧುಮೇಹ ಮತ್ತು ರಕ್ತದಲ್ಲಿ ಕಡಿಮೆ ಟೆಸ್ಟೋಸ್ಟೆರಾನ್ ಮಟ್ಟ ಇವೆಲ್ಲ ಹೊಸ ಜೀವನಶೈಲಿ ಕಾಯಿಲೆಗಳಾಗಿ ಕಾಣಿಸಿಕೊಳ್ಳುತ್ತಿವೆ . ಪೋಷಕಾಂಶಗಳ ಅಸಮರ್ಪಕ ಪೂರೈಕೆ, ಲ್ಯಾಪ್‌ಟಾಪ್‌ಗಳಿಂದಾಗಿ ವೃಷಣಗಳು  ಅಧಿಕ ಬಿಸಿಯಾಗುವುದು, ಹೊಟ್ಟೆಯ ಬೊಜ್ಜು ವೃಷಣಗಳ ಉಷ್ಣತೆಯನ್ನು ಹೆಚ್ಚು ಮಾಡುವುದು  ಇವೇ ಮುಂತಾದ ಕಾರಣಗಳು ವೀರ್ಯಾಣುಗಳ ಸಂಖ್ಯೆ ಮತ್ತು ಕಡಿಮೆ ವೀರ್ಯ ಚಲನಶೀಲತೆಗೆ ಕಾರಣವೆಂದು ಪರಿಗಣಿಸಲಾಗುತ್ತಿದೆ.

ವೀರ್ಯಾಣುಗಳ ಸಂಖ್ಯೆ ಮತ್ತು ಚಲನಶೀಲತೆಯನ್ನು ಹೆಚ್ಚಿಸಲು ಸಹಾಯ ಮಾಡುವ ಮೂರು ಒಣ ಹಣ್ಣುಗಳ ಪಟ್ಟಿ ಇಲ್ಲಿದೆ.

ಉತ್ತಮ ವೀರ್ಯಾಣುಗಳಿಗೆ ಖರ್ಜೂರ

ಖರ್ಜೂರಗಳನ್ನು ಆಯುರ್ವೇದದಲ್ಲಿ “ಖರ್ಜುರಾ” ಎಂದು ಕರೆಯಲಾಗುತ್ತದೆ. ಇದು “ಮಧುರ ರಸ” (ರುಚಿಗೆ ಸಿಹಿ) ಮತ್ತು “ಸ್ನಿಗ್ಧಾ” (ಅಂಗಾಂಶಗಳ ತೇವಾಂಶ ಅಥವಾ ಜಿಗುಟುತನವನ್ನು ಹೆಚ್ಚಿಸುತ್ತದೆ) ಗುಣಗಳನ್ನು  ಹೊಂದಿದೆ. ಆಯುರ್ವೇದ  ತತ್ವಗಳ ಪ್ರಕಾರ ಖರ್ಜೂರ ದೇಹದ ಶೀತಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ವೀರ್ಯ ಉತ್ಪಾದನೆಗೆ ಉತ್ತಮ ವಾತಾವರಣವನ್ನು ನೀಡುತ್ತದೆ. ಆದ್ದರಿಂದ ಇದನ್ನು “ಶುಕ್ರಲಾ” ಅಥವಾ ಶುಕ್ರ ಧಾತು ಅಥವಾ ವೀರ್ಯವನ್ನು ಹೆಚ್ಚಿಸುವ ಹಣ್ಣು ಎಂದು ಆಯುರ್ವೇದದಲ್ಲಿ ಪ್ರಶಂಸಿಸಲಾಗಿದೆ . ಖರ್ಜೂರದಲ್ಲಿ ನಾರಿನ ಅಂಶ ಹೆಚ್ಚಾಗಿರುವುದರಿಂದ ಕರುಳಿನ ಚಲನೆಯನ್ನು ಹೆಚ್ಚಿಸಿ ಮಲಬದ್ಧತೆಯನ್ನು ನಿವಾರಿಸಲು  ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ.

ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ಒಣದ್ರಾಕ್ಷಿ:

ಒಣದ್ರಾಕ್ಷಿ ರುಚಿಗೆ ಸಿಹಿಯಾಗಿರುತ್ತದೆ ಮತ್ತು ಅವು ದೇಹದ ಶೀತಕಗಳಾಗಿ ಕಾರ್ಯನಿರ್ವಹಿಸುತ್ತವೆ. ಒಣದ್ರಾಕ್ಷಿ , ಕಬ್ಬಿಣ ಮತ್ತು ನಾರುಗಳ ಸಮೃದ್ಧ ಮೂಲವಾಗಿದೆ. ಒಣದ್ರಾಕ್ಷಿಗಳು ತಾಜಾ ದ್ರಾಕ್ಷಿಗಿಂತ ಭಿನ್ನವಾಗಿದ್ದು , ಸಮೃದ್ಧವಾದ ವಿಟಮಿನ್, ಖನಿಜಾಂಶ, ಲವಣಗಳು ಹಾಗು  ಆಂಟಿ-ಆಕ್ಸಿಡೆಂಟ್‌ಗಳನ್ನು  ಒಳಗೊಂಡಿದೆ. ಆದ್ದರಿಂದ ಅವು ರಕ್ತಹೀನತೆ ಮತ್ತು ಮಲಬದ್ಧತೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತವೆ. ಒಣದ್ರಾಕ್ಷಿ ಪುರುಷರು ಮತ್ತು ಮಹಿಳೆಯರ ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅವು ವೀರ್ಯ, ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯ ಚಲನಶೀಲತೆಯ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸುತ್ತವೆ. ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಬಲಪಡಿಸಲು ಸಹ ಈ ಒಣಹಣ್ಣುಗಳು ಸಹಾಯ ಮಾಡುತ್ತವೆ . ಒಣದ್ರಾಕ್ಷಿಗಳನ್ನು “ವೃಶ್ಯ” ಎಂದು ಕರೆಯಲಾಗುತ್ತದೆ, ಅಂದರೆ ಅವು ನಿಮಿರು ದೌರ್ಬಲ್ಯ , ಶೀಘ್ರ ಸ್ಖಲನ ಮತ್ತು ಪುರುಷರ ಬಂಜೆತನಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತವೆ. ಆದ್ದರಿಂದ ಒಣದ್ರಾಕ್ಷಿಯನ್ನು ಆಯುರ್ವೇದದ ಉತ್ಪನ್ನಗಳಾದ “ವಾಜಿಕರಣ ರಸಾಯನ” ಮತ್ತು “ಸುಪ್ರಜ ಲೇಹ್ಯ” ಗಳಲ್ಲಿ  ಬಳಸಲಾಗುತ್ತದೆ.

ಉತ್ತಮ ಆರೋಗ್ಯಕರ ವೀರ್ಯಕ್ಕೆ ಅಂಜೂರ

ಅಂಜೂರವನ್ನು ಆಯುರ್ವೇದದಲ್ಲಿ ಫಲ್ಗು ಅಥವಾ ರಾಜೌದುಂಬರ ಎಂದು ಕರೆಯಲಾಗುತ್ತದೆ. ಒಣಗಿದ ಅಂಜೂರದ ಹಣ್ಣುಗಳು ವೀರ್ಯಾಣುಗಳ ಉತ್ಪತ್ತಿಗೆ ಮುಖ್ಯವಾಗಿರುವ ಖನಿಜಗಳಾದ ಕ್ಯಾಲ್ಸಿಯಂ, ತಾಮ್ರ, ಪೊಟ್ಯಾಸಿಯಮ್, ಮ್ಯಾಂಗನೀಸ್, ಕಬ್ಬಿಣ, ಸೆಲೆನಿಯಮ್ ಮತ್ತು ಸತು ಇವುಗಳ  ಅತ್ಯುತ್ತಮ ಮೂಲವಾಗಿದೆ. ಪೊಟ್ಯಾಸಿಯಮ್ ಜೀವಕೋಶಗಳ  ಮತ್ತು ದೇಹದ ದ್ರವಗಳಲ್ಲಿರುವ  ಪ್ರಮುಖ ಖನಿಜವಾಗಿದೆ.  ಕೆಂಪು ರಕ್ತ ಕಣಗಳ ಉತ್ಪಾದನೆಗೆ  ತಾಮ್ರದ  ಅಗತ್ಯವಿದೆ. ಕೆಂಪು ರಕ್ತ ಕಣಕ್ಕೆ ಕಬ್ಬಿಣದ ಅವಶ್ಯಕತೆ ಇದೆ . ಈ ಎಲ್ಲಾ ಖನಿಜಗಳು ಅಂಜೂರದ ಹಣ್ಣಿನಲ್ಲಿ ಸಾಕಷ್ಟು ಕಂಡುಬರುತ್ತವೆ, ಹೀಗಾಗಿ ವೀರ್ಯ ಕೋಶಗಳ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಅವುಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಅಂಜೂರವನ್ನು ಆಯುರ್ವೇದ ಆಚಾರ್ಯರು ವೃಶ್ಯ ಅಥವಾ ಕಾಮೋತ್ತೇಜಕ ಎಂದು ಶ್ಲಾಘಿಸುತ್ತಾರೆ. ಅವುಗಳನ್ನು ವಾಜೀಕರಣ ಚಿಕಿತ್ಸೆಯಲ್ಲಿ , “ಶುಕ್ರ ಧಾತು” ಅಥವಾ ಆರೋಗ್ಯಕರ ವೀರ್ಯ ಹೆಚ್ಚಿಸುವುದಕ್ಕಾಗಿ ಬಳಸಲಾಗುತ್ತದೆ.

ಲೇಖಕಿ : ಡಾ.ಸವಿತಾ ಸೂರಿ, ಸಲಹೆಗಾರ ಆಯುರ್ವೇದ ವೈದ್ಯೆ

ಉಚಿತ ಆಯುರ್ವೇದ ಸಮಾಲೋಚನೆ

+91 9945995660 / +91 9448433911 ಗೆ ಕರೆ ಮಾಡಿ

ವಾಟ್ಸ್ ಅಪ್ + 91 6360108663 /