ಪ್ರಸವದ ನಂತರ ತೂಕ ಕಡಿಮೆ ಮಾಡುವುದು ಹೇಗೆ ? (Weight Loss After Delivery in Kannada)

ಜೀರಿಗೆ ಅಥವಾ ಓಂಕಾಳಿನ ಕಷಾಯ , ಬೆಳ್ಳುಳ್ಳಿ ಹಾಲು , ಎಣ್ಣೆ ಸ್ನಾನ , ಮೆಣಸು , ದಾಲ್ಚಿನಿ , ಹಸುವಿನ ಹಾಲಿನ ತುಪ್ಪ  ಇವೆಲ್ಲಾ ಪ್ರಸವದ ನಂತರ ತೂಕ ಇಳಿಸಲು ಸಹಾಯ ಮಾಡುತ್ತವೆ .

ಪ್ರಸವದ ನಂತರ ತೂಕ ಕಡಿಮೆ ಮಾಡುವುದು ಹೇಗೆ ?

Read this article in English – Ayurvedic Tips for Weight Loss After Delivery

ಆಯುರ್ವೇದದ ಗ್ರಂಥಗಳು  ಹೆರಿಗೆಯ ನಂತರ ತೂಕ ನಷ್ಟಕ್ಕೆ ವಿವಿಧ ಆಯುರ್ವೇದ ಸಲಹೆಗಳು ಮತ್ತು ಮನೆಮದ್ದುಗಳನ್ನು ಶಿಫಾರಸು ಮಾಡುತ್ತವೆ. ಪ್ರಸವದ ನಂತರ ತೂಕವನ್ನು ಹೇಗೆ ಕಡಿಮೆಮಾಡಿಕೊಳ್ಳಬೇಕೆಂದು ಅವುಗಳು ಕಲಿಸುತ್ತವೆ . ಹೆರಿಗೆಯ ನಂತರ ತೂಕ ಇಳಿಸಿಕೊಳ್ಳಲು ಈ ಆಯುರ್ವೇದ ಮನೆಮದ್ದುಗಳು ಭಾರತೀಯ ಮನೆಗಳಲ್ಲಿ ನಿಯಮಿತವಾಗಿ ಬಾಣಂತನದ ರೂಪದಲ್ಲಿ ರೂಢಿಯಲ್ಲಿವೆ . ಈ ಆರೋಗ್ಯಕರ ವಿಧಾನಗಳು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಡೆಲಿವರಿ ನಂತರ ತೂಕವನ್ನು ಕಳೆದುಕೊಳ್ಳುವಲ್ಲಿ ಸಹಾಯ ಮಾಡುತ್ತವೆ.

ಹೆರಿಗೆಯ  ಸಮಯದಲ್ಲಿ ತ್ರಿದೋಷಗಳು ಸಮತೋಲನ ಕಳೆದುಕೊಳ್ಳುತ್ತವೆ ಮತ್ತು ಇದರಿಂದ ತೂಕ ಹೆಚ್ಚಾಗುತ್ತದೆ. ಆಯುರ್ವೇದ ಚಿಕಿತ್ಸೆಯ ಮೊದಲ ಹೆಜ್ಜೆ ಅಸಂತುಲಿತ ದೋಷಗಳನ್ನು ಸಾಮಾನ್ಯ ಸ್ಥಿತಿಗೆ ತರುವುದು.

ನಿಮ್ಮ ಮಗುವಿಗೆ ನೀವು ಜನ್ಮ ನೀಡಿದ ತಕ್ಷಣ, ಸಾಕಷ್ಟು ವಿಷಯಗಳ ಕಡೆ ಗಮನ ಹರಿಸಬೇಕು.  ಮಗುವಿಗೆ ಸಮಯಕ್ಕೆ ತಕ್ಕಂತೆ ಆಹಾರವನ್ನು ನೀಡಬೇಕು, ಮಗುವಿನ ಹಾಗು ನಿಮ್ಮ ಶುಚಿತ್ವದ ಕಡೆ ಲಕ್ಷ್ಯ ನೀಡಬೇಕು . ಎರಡು ಸಂತತಿಗಳ  ನಡುವಿನ ಅಂತರವನ್ನು ನೀಡುವ ಬಗ್ಗೆ  ಆದ್ಯತೆ ಕೊಡಬೇಕು . ಇವುಗಳ ಜೊತೆಗೆ, ಗರ್ಭಾವಸ್ಥೆಯಲ್ಲಿ ನೀವು ಗಳಿಸಿದ ತೂಕವನ್ನು ಕಳೆದುಕೊಳ್ಳುವುದು ಸಹ ನಿಮ್ಮನ್ನು ಕಾಡುತ್ತಿರುತ್ತದೆ .ಹೆರಿಗೆಯ  ನಂತರ ತೂಕವನ್ನು ಕಳೆದುಕೊಳ್ಳುವುದು ಬಹಳ ದೊಡ್ಡ ಕೆಲಸ. ನಿಮ್ಮ ಅರೋಗ್ಯ  ನಿಮ್ಮ ಶಿಶುವಿನೊಂದಿಗೆ ನೇರವಾಗಿ ಸಂಬಂಧಿಸಿರುವುದರಿಂದ ಆಹಾರ ಮತ್ತು ವ್ಯಾಯಾಮದೊಂದಿಗೆ ಸೂಕ್ಷ್ಮ ಸಮತೋಲನವನ್ನು ಕಾಪಾಡಿಕೊಳ್ಳಬೇಕು.

ಹೆರಿಗೆಯ ( ಪ್ರಸವದ) ನಂತರ ಸಣ್ಣಗಾಗಲು ಆಯುರ್ವೇದೀಯ ಮನೆಮದ್ದು

ಆಯುರ್ವೇದ ಆಚಾರ್ಯರು  ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಪ್ರಸವದ  ನಂತರ ತೂಕ ಇಳಿಸಿಕೊಳ್ಳಲು ಆರೋಗ್ಯಕರ ವಿಧಾನಗಳನ್ನು ಸಲಹೆ ಮಾಡುತ್ತಾರೆ . ಮುಂಚೆಯೇ ಹೇಳಿದಂತೆ ಡೆಲಿವರಿ  ನಂತರ, ದೇಹದ ಮೂರು ಸಮತೋಲನ ಶಕ್ತಿಗಳು (ತ್ರಿದೋಷಗಳು – ವಾತ ದೋಷ , ಪಿತ್ತ ದೋಷ ಮತ್ತು ಕಫ ದೋಷ) ಅಸಂತುಲಿತವಾಗುತ್ತವೆ . ಮೊದಲ ಹಂತವೆಂದರೆ ಈ ದೋಷಗಳನ್ನು ಸಾಮಾನ್ಯ ಸ್ಥಿತಿಗೆ ತರುವುದು.

ಪ್ರಸವದ  ನಂತರದ ತೂಕ ನಷ್ಟದ ಮೊದಲ ಮೂರು ತಿಂಗಳು ಆಯುರ್ವೇದ ವೈದ್ಯರು ಈ ಕೆಳಗಿನ ದಿನಚರಿಯನ್ನು ಸಲಹೆ ಮಾಡುತ್ತಾರೆ

ಜೀರಿಗೆ ಕಷಾಯ ಅಥವಾ ಜೀರಿಗೆ ನೀರು

ಯಾವಾಗಲೂ ಪ್ರತಿ ದಿನ 10 ರಿಂದ  12 ಗ್ಲಾಸ್ ಬಿಸಿಯಾದ  ಜೀರಿಗೆ  ನೀರನ್ನು ಕುಡಿಯಿರಿ. ಇದು ದೇಹದ ಜೀರ್ಣಶಕ್ತಿ  ಹೆಚ್ಚಿಸುತ್ತದೆ ಮತ್ತು ದೇಹದ ಎಲ್ಲಾ ಚಟುವಟಿಕೆಗಳನ್ನು ಸಮತೋಲನದಲ್ಲಿ ಇರಿಸುತ್ತದೆ .

ಜೀರಿಗೆ ಕಷಾಯ ತಯಾರಿಸುವ ವಿಧಿ

ಇದನ್ನು ತಯಾರಿಸಲು, ಒಂದು ಲೀಟರ್ ನೀರಿಗೆ ಎರಡು ಚಮಚ ಜೀರಾ ಅಥವಾ ಜೀರಿಗೆ ಸೇರಿಸಿ, ಚೆನ್ನಾಗಿ ಕುದಿಸಿ. ಈ ನೀರನ್ನು ಪ್ಲಾಸ್ಕಿನಲ್ಲಿ ಹಾಕಿಟ್ಟುಕೊಂಡು ಗಂಟೆಗೊಮ್ಮೆ ಒಂದೊಂದು ಲೋಟ ಕುಡಿಯಬಹುದು . ಜೀರಿಗೆ ಬದಲು ಓಂಕಾಳು ಅಥವಾ ಅಜಯವಾನವನ್ನೂ  ಉಪಯೋಗಿಸಬಹುದು. ಮೊಳೆ ರೋಗ (ಪೈಲ್ಸ್ ) ಹಾಗು ಮಲಭದ್ದತೆ ಇದ್ದರೆ  ಓಂಕಾಳನ್ನು ಉಪಯೋಗಿಸಬೇಡಿ . ಸಾವಯವ ಜೀರಾ ಮತ್ತು ಸಾವಯವ ಅಜ್ವೈನ್ ಅನ್ನು ಯಾವಾಗಲೂ ಖರೀದಿಸಿ.

ಬಾಡಿ ಮಸಾಜ್ ಅಥವಾ ಎಣ್ಣೆ  ಸ್ನಾನ ಹಾಗು ಉದ್ವರ್ತನ

ವಾರಕ್ಕೆ ಎರಡು ಬಾರಿ 20 ನಿಮಿಷಗಳ ಕಾಲ ಬೆಚ್ಚಗಿನ ಸಾವಯವ ಎಳ್ಳೆಣ್ಣೆಯಿಂದ  ದೇಹವನ್ನು ಮಸಾಜ್ ಮಾಡಿ ನಂತರ ಬಿಸಿನೀರಿನ ಸ್ನಾನ ಮಾಡಿ. ಸೋಪ್ ಅಥವಾ ಬಾಡಿ ವಾಶ್ ಬದಲಿಗೆ, ಬಾಡಿ ಸ್ಕ್ರಬ್ ಅಥವಾ ಸ್ನಾನದ ಚೂರ್ಣವನ್ನು  ಬಳಸಿ. ಸ್ನಾನದ ಚೂರ್ಣವನ್ನು ದೇಹಕ್ಕೆ ಉಜ್ಜಿಕೊಳ್ಳುವ ವಿಧಾನವನ್ನು ಆಯುರ್ವೇದದಲ್ಲಿ ಉದ್ವರ್ತನ ಎಂದು ಕರೆಯಲಾಗುತ್ತದೆ. ಸ್ಥೂಲಕಾಯತೆಯ ಚಿಕಿತ್ಸೆಯಲ್ಲಿ ಇದನ್ನು ವಿಶೇಷವಾಗಿ ಬಳಸಲಾಗುತ್ತದೆ. ಈ ವಿಧಾನದಲ್ಲಿ ಮಸಾಜ್ ಅನ್ನು ‘ಡೌನ್ ಟು ಅಪ್’ ಚಲನೆಯಲ್ಲಿ ಮಾಡಲಾಗುತ್ತದೆ (ಕೆಳಗಿನಿಂದ ಮೇಲಕ್ಕೆ ಉಜ್ಜುವುದು )  (ಅಭ್ಯಂಗ ದಲ್ಲಿನ ಸಾಂಪ್ರದಾಯಿಕ ಮಸಾಜ್‌ಗೆ ವಿರುದ್ಧವಾಗಿ, ಉದ್ವರ್ತನ ಮಾಡಲಾಗುತ್ತದೆ ). ಇದನ್ನು ದೇಹದ ಕೂದಲಿನ ಬೆಳವಣಿಗೆಗೆ ವಿರುದ್ಧವಾದ ದಿಕ್ಕಿನಲ್ಲಿ ಮಾಡಲಾಗುತ್ತದೆ. ಮನೆಯಲ್ಲಿಯೇ ನೀವು ಆಯುರ್ವೇದ ಬಾಡಿ ಸ್ಕ್ರಬ್ ಅಥವಾ ಸ್ನಾನದ ಚೂರ್ಣವನ್ನು  ತಯಾರಿಸಬಹುದು. 

ತೂಕ ನಷ್ಟಕ್ಕೆ ಬೆಳ್ಳುಳ್ಳಿ ಹಾಲು ಅಥವಾ ಲಶುನ ಕ್ಷೀರ

 

ಆಯುರ್ವೇದ ವೈದ್ಯರು  ಬಾಣಂತಿಯರು  ಲಶುನ ಕ್ಷೀರ ಅಥವಾ ಬೆಳ್ಳುಳ್ಳಿ ಹಾಲನ್ನು  ಉಪಯೋಗಿಸಲು  ಶಿಫಾರಸು ಮಾಡುತ್ತಾರೆ . ಬೆಳ್ಳುಳ್ಳಿ ಹಾಲು ಜೀರ್ಣ ಶಕ್ತಿ ಹೆಚ್ಚಿಸಿ , ದೇಹದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ಹಾಲು ತಯಾರಿಸುವ ಪಾಕವಿಧಾನ ಇಲ್ಲಿದೆ-

ಬೆಳ್ಳುಳ್ಳಿ ಹಾಲು ತಯಾರಿಸುವ ವಿಧಾನ

4 ರಿಂದ 5 ಬೆಳ್ಳುಳ್ಳಿಯ ಎಸಳುಗಳನ್ನು  ತೆಗೆದುಕೊಂಡು ಒಂದು ಲೋಟ ಹಾಲಿನಲ್ಲಿ ಕುದಿಸಿ. ಸಕ್ಕರೆ ಸೇರಿಸಬೇಡಿ. ಬೆಳಗಿನ ಉಪಾಹಾರ ಮತ್ತು ಊಟದ ನಂತರ ಈ ಹಾಲನ್ನು ಪ್ರತಿದಿನ ಎರಡು ಬಾರಿ ಸೇವಿಸಿ.

ಪ್ರಸವದ ನಂತರ ತೂಕ ನಷ್ಟಕ್ಕೆ ಸಾಂಬಾರಗಳು

ಉದ್ದನೆಯ ಮೆಣಸು ಅಥವಾ ಪಿಪ್ಪಲಿ, ಜೀರಿಗೆ, ಮತ್ತು ಓಂಕಾಳು, ಸೋಂಪುಕಾಳು , ದಾಲ್ಚಿನ್ನಿ ಮುಂತಾದ ಮಸಾಲೆ ಪದಾರ್ಥಗಳು ತ್ರಿದೋಷಗಳ ಸಮತೋಲನವನ್ನು ಮರಳಿ ತರುವಲ್ಲಿ ಉತ್ತಮ ಪಾತ್ರವಹಿಸುತ್ತವೆ ಎಂದು ಆಯುರ್ವೇದ ಆಚಾರ್ಯರು ನಂಬಿದ್ದಾರೆ. ಈ ಮಸಾಲೆಗಳು ತೂಕ ನಷ್ಟಕ್ಕೆ ಹೆಚ್ಚು ಸಹಾಯ ಮಾಡುತ್ತವೆ ಎಂದು ಆಹಾರ ತಜ್ಞರೂ ಸಹ  ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಲಹೆಗಳು

ನಿಮ್ಮ  ಮೆಟಬೋಲಿಕ್ (ಚಯಾಪಚಯವನ್ನು ) ಕ್ರಿಯೆ ಹೆಚ್ಚಿಸಲು  ಏರೋಬಿಕ್ ವ್ಯಾಯಾಮವನ್ನು ಮಾಡಿ . ಇದರ ಜೊತೆ ಸರಿಯಾದ ಪುಷ್ಟಿಯುಕ್ತ ಆಹಾರವನ್ನು ಸೇವಿಸಿ .  ಮತ್ತು ಆಹಾರದೊಂದಿಗೆ ಸಂಯೋಜಿಸುವುದು ಅವಶ್ಯಕ. ದಿನವಿಡೀ ಸಾಕಷ್ಟು ಸಣ್ಣ , ಸಣ್ಣ ಊಟ ಮಾಡುವುದು ತೂಕ ಕಡಿಮೆಮಾಡಲು ಅತ್ಯವಶ್ಯಕ .

ಗರ್ಭಧಾರಣೆಯ ಮೊದಲು ನೀವು ವ್ಯಾಯಾಮ ಮಾಡದಿದ್ದರೆ , ಪ್ರಸವದ ನಂತರ ನಿಧಾನವಾಗಿ ವ್ಯಾಯಾಮ ಮಾಡಿ . ನಿಮ್ಮ ದೇಹವು ವ್ಯಾಯಾಮಕ್ಕೆ ಒಗ್ಗಿಕೊಳ್ಳುವವರೆಗೆ ಸ್ವಲ್ಪವೇ ದೂರ  ಸೈಕ್ಲಿಂಗ್, ವಾಕಿಂಗ್ ಮತ್ತು ಜಾಗಿಂಗ್ ಮೂಲಕ ಪ್ರಾರಂಭಿಸುವುದು ಉತ್ತಮ . ನಂತರ ನಿಮ್ಮ ಅರೋಗ್ಯ ಕೆಡದಂತೆ ಉತ್ತಮ ಆಹಾರದೊಂದಿಗೆ ವ್ಯಾಯಾಮವನ್ನೂ ಮುಂದುವರೆಸಿ

ಆಯುರ್ವೇದ ಚಿಕಿತ್ಸೆಗಳು ಮತ್ತು ಪರಿಹಾರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ವಾಟ್ಸ್ ಆ್ಯಪ್ ಡಾ.ಸವಿತಾ ಸೂರಿ @ + 91 6360108663 /

ಲೇಖಕಿ : ಡಾ.ಸವಿತಾ ಸೂರಿ, ಸಲಹೆಗಾರ ಆಯುರ್ವೇದ ವೈದ್ಯೆ

ಉಚಿತ ಆಯುರ್ವೇದ ಸಮಾಲೋಚನೆ

+91 9945995660 / +91 9448433911 ಗೆ ಕರೆ ಮಾಡಿ

ವಾಟ್ಸ್ ಅಪ್ + 91 6360108663 /