ನುಗ್ಗೆಕಾಯಿ ಉಪಯುಕ್ತತೆ ಬಗ್ಗೆ ಆಯುರ್ವೇದ ಏನು ಹೇಳುತ್ತದೆ ? Benefits of Drumsticks or Moringa in Kannada


ಆಯುರ್ವೇದದ ತತ್ವಗಳ ಪ್ರಕಾರ ನಿಮಿರು ದೌರ್ಬಲ್ಯ , ಗರ್ಭಧಾರಣೆ ಮತ್ತು ಅಲರ್ಜಿಯ ಸ್ಥಿತಿಗಳಲ್ಲಿ ನುಗ್ಗೆಕಾಯಿ ಬಳಸಬಾರದು. ಇದು ಕಣ್ಣುಗಳು, ತಲೆನೋವು ಮತ್ತು ಕೀಲು ನೋವುಗಳಿಗೆ ಒಳ್ಳೆಯದು.

Read this article in English Ayurveda Health Benefits of Drumsticks or Moringa

ವಿಷಯದ ಸೂಚಿ

ಮೊರಿಂಗ ಅಥವಾ ನುಗ್ಗೆಕಾಯಿ  ಮತ್ತು ಆಯುರ್ವೇದ

ಡ್ರಮ್ ಸ್ಟಿಕ್ ಅಥವಾ ನುಗ್ಗೆಕಾಯಿಯ  ಆಯುರ್ವೇದೀಯ ಔಷಧಿ ಗುಣಗಳು

ಡ್ರಮ್ ಸ್ಟಿಕ್ ಅಥವಾ ಮೊರಿಂಗಾದ ಆಯುರ್ವೇದ ಆರೋಗ್ಯ ಪ್ರಯೋಜನಗಳು

ಗರ್ಭಾವಸ್ಥೆಯಲ್ಲಿ ನುಗ್ಗೆಕಾಯಿ ಬಳಸಬಹುದೇ?

ನುಗ್ಗೆಕಾಯಿಯ ದುಷ್ಪರಿಣಾಮಗಳು. (ಸೈಡ್ ಎಫೆಕ್ಟ್ಸ್).

ಆಯುರ್ವೇದದಲ್ಲಿ ಮೊರಿಂಗಾ ಅಥವಾ ನುಗ್ಗೆಕಾಯಿ

ಮೊರಿಂಗಾ ಒಲಿಫೆರಾ ಎಂಬುದು ನುಗ್ಗೆಕಾಯಿಯ  ಸಸ್ಯಶಾಸ್ತ್ರೀಯ ಹೆಸರು . ಇದು ಮೊರಿಂಗೇಸಿ ಕುಟುಂಬಕ್ಕೆ ಸೇರಿದೆ. ಇದನ್ನು ಹಿಂದಿಯಲ್ಲಿ ಸಹಜಿನ್ ಅಥವಾ ಮುನಾಗಾ, ತಮಿಳಿನಲ್ಲಿ ಮುರುಂಗೈ, ತೆಲುಗಿನಲ್ಲಿ ಮುನಾಗಕಾಯಿ, ಕನ್ನಡದಲ್ಲಿ ನುಗ್ಗೆಕಾಯಿ ಮತ್ತು ಇಂಗ್ಲಿಷ್‌ನಲ್ಲಿ ಡ್ರಮ್ ಸ್ಟಿಕ್ ಅಥವಾ ಮೊರಿಂಗಾ ಎಂದು ಕರೆಯಲಾಗುತ್ತದೆ.

ಈ ಗಿಡದ  ಆರೋಗ್ಯ ಪ್ರಯೋಜನಗಳನ್ನು ಆಯುರ್ವೇದದ ಪಠ್ಯಗಳಲ್ಲಿ ಪ್ರಶಂಸಿಸಲಾಗುತ್ತದೆ. ಇದರ  ಬೀಜಗಳು, ಎಲೆಗಳು, ಹಣ್ಣು ಮತ್ತು ಎಣ್ಣೆಯು ವಿವಿಧ ಉಪಯೋಗಗಳನ್ನು ಹೊಂದಿವೆ. ಈ ಮರದ ಹಣ್ಣುಗಳು ಮತ್ತು ಎಲೆಗಳನ್ನು ವಿವಿಧ ಪಾಕವಿಧಾನಗಳಲ್ಲಿ ಬಳಸಲಾಗುತ್ತದೆ.

ಆಯುರ್ವೇದ ಆಚಾರ್ಯರು ಈ ಸಸ್ಯವನ್ನು ಅದರ ಔಷಧೀಯ ಉಪಯೋಗಗಳ ಆಧಾರದ ಮೇಲೆ ಸಮಾನಾರ್ಥಕ ಪದಗಳೊಂದಿಗೆ ಶ್ಲಾಘಿಸುತ್ತಾರೆ.

ಶೋಭಾಂಜನ  – ಬಹಳ ಶುಭವಾದ  ಮರ
ಶಿಗ್ರು  – ಬಲವಾದ, ತೀಕ್ಷ್ಣ  ಗುಣಗಳನ್ನು ಹೊಂದಿದೆ
ತೀಕ್ಷ್ಣಗಂಧ – ಬಲವಾದ ಮತ್ತು ತೀವ್ರವಾದ ವಾಸನೆ ಉಳ್ಳದ್ದು
ಅಕ್ಷೀವ  – ಮಾದಕತೆಯನ್ನು ನಿವಾರಿಸುತ್ತದೆ
ಮೊಚಕಾ – ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ

ಭಾರತೀಯ ಭಾಷೆಗಳಲ್ಲಿ ನುಗ್ಗೆಕಾಯಿ
ತಮಿಳು: ಮುರಿಂಗಕ್ಕೈ
ಮಲಯಾಳಂ: ಮುರಿಂಗಕ್ಕಾಯ, ಮುರಿಂಗಕ್ಕ
ತೆಲುಗು: ಮುನ್ನಕಾಯ, ಮುನಾಗಕಾಯಲು, ಮುಲಾಕ ಕಡ, ಮುನಾಗ
ಕನ್ನಡ: ನುಗ್ಗೆಕಾಯಿ
ಹಿಂದಿ: ಸಜ್ಜನ್ ಕಿ ಫಲ್ಲಿ, ಸೈಗಾನ್, ಶಿಂಗಾ, ಸೆಗ್ವಾ, ಸೆಹಿಜ್ಜನ್
ಬಂಗಾಳಿ: ಸಜಾನೆ ದೌತಾ, ಸಜ್ನಾ ದಂತಾ
ಗುಜರಾತಿ: ಸರಗ್ವಾನಿ ಶಿಂಗ್, ಸಾರ್, ಅಗಾವೊ, ಸುರಗಾವೊ
ಕೊಂಕಣಿ: ಮಾಸಿಂಗ್‌ಸಾಂಗ್ ಮೊಸ್ಕಾ ಸಾಂಗ್
ಮರಾಠಿ: ಶೆವಾಗಾ, ಶೆಂಗ್, ಶೀರೆಂಗಾ
ಒರಿಯಾ: ಸಜಾನಾ ಚುಯಿನ್
ಪಂಜಾಬಿ: ಸಾವೊಂಜ
ತುಳು: ನುರ್ಗೆ

ನುಗ್ಗೆಕಾಯಿಯ ಆಯುರ್ವೇದೀಯ  ಔಷಧೀಯ ಗುಣಗಳು

ಡ್ರಮ್ ಸ್ಟಿಕ್ ಅನ್ನು ಆಯುರ್ವೇದದಲ್ಲಿ “ಶೋಭಾಂಜನ ” ಅಥವಾ “ಶಿಗ್ರು” ಎಂದು ಕರೆಯಲಾಗುತ್ತದೆ. ಆಯುರ್ವೇದದ ಗ್ರಂಥಗಳು ಈ ಸಸ್ಯದ ಅನೇಕ  ಔಷಧೀಯ ಗುಣಗಳನ್ನು ವಿವರಿಸುತ್ತದೆ.

ಆಯುರ್ವೇದದ ತತ್ವಗಳ ಪ್ರಕಾರ ಇದರಲ್ಲಿ ಕಟು ರಸ ಅಥವಾ ಕಟುವಾದ ರುಚಿ ಮತ್ತು ತಿಕ್ತ  ರಸ ಅಥವಾ ಕಹಿ ರುಚಿ ಇರುತ್ತದೆ. ಇದು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ . ಇದು ಜೀರ್ಣಿಸಿಕೊಳ್ಳಲು ಹಗುರವಾಗಿದ್ದು (ಲಘು)  ದೇಹದ ಶುಷ್ಕತೆಯನ್ನು (ರೂಕ್ಷಾ) ಹೆಚ್ಚಿಸುತ್ತದೆ . ಇದು ತೀಕ್ಷ್ಣವಾದ ಗುಣಗಳನ್ನು ಹೊಂದಿದ್ದು ದೇಹದಲ್ಲಿ ತ್ವರಿತವಾಗಿ ಹರಡುತ್ತದೆ. ನುಗ್ಗೆ  ಪಿತ್ತ ದೋಶವನ್ನು ಹೆಚ್ಚು ಮಾಡುತ್ತದೆ ಮತ್ತು ವಾತ ದೋಷ  ಹಾಗು  ಕಫ ದೋಷ ವನ್ನು ನಿವಾರಿಸುತ್ತದೆ.

ಡ್ರಮ್ ಸ್ಟಿಕ್ ಅಥವಾ ನುಗ್ಗೆಕಾಯಿಯ  ಆಯುರ್ವೇದ ಆರೋಗ್ಯ ಪ್ರಯೋಜನಗಳು

ಬಳಸುವ  ಭಾಗಗಳು:

ಐದರ  ಬೇರು ತೊಗಟೆ, ಕಾಂಡದ ತೊಗಟೆ, ಎಲೆಗಳು, ಹಣ್ಣುಗಳು ಮತ್ತು ಬೀಜಗಳನ್ನು ಚಿಕಿತ್ಸಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಈ ಭಾಗಗಳು ತಮ್ಮದೇ ಆದ ವಿಶಿಷ್ಟ ಔಷಧೀಯ ಗುಣಗಳನ್ನು ಹೊಂದಿವೆ.

ಆಯುರ್ವೇದ ಆಚಾರ್ಯರು ಈ ಸಸ್ಯದ ಆರೋಗ್ಯ ಪ್ರಯೋಜನಗಳನ್ನು ಈ ಕೆಳಗಿನಂತೆ ವಿವರಿಸುತ್ತಾರೆ.

ನುಗ್ಗೆ  ಬೀಜಗಳು ನಿಮಿರು ದೌರ್ಬಲ್ಯಕ್ಕೆ  ಉಪಯೋಗಿಸುವಂತೆ ಇಲ್ಲ  (ಅವೃಶ್ಯಂ):

ಆಯುರ್ವೇದ ಆಚಾರ್ಯರು ಹೇಳುವಂತೆ ಡ್ರಮ್ ಸ್ಟಿಕ್ ಬೀಜಗಳು ಪುರುಷರ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಅವು ಕಾಮೋತ್ತೇಜಕವಲ್ಲ ಮತ್ತು ನಿಮಿರು ದೌರ್ಬಲ್ಯದಲ್ಲಿ ಸಹಾಯ ಮಾಡುವುದಿಲ್ಲ. ಆದ್ದರಿಂದ ಆಯುರ್ವೇದ ಆಚಾರ್ಯರು  ನಿಮಿರು ದೌರ್ಬಲ್ಯದಲ್ಲಿ ಮತ್ತು ಕಡಿಮೆ ವೀರ್ಯಾಣುಗಳ ಸಂಖ್ಯೆ ಮತ್ತು ಕಡಿಮೆ ವೀರ್ಯ ಚಲನಶೀಲತೆಯಂತಹ ಪರಿಸ್ಥಿತಿಗಳಲ್ಲಿ ಇದನ್ನು ಶಿಫಾರಸು ಮಾಡುವುದಿಲ್ಲ.

ವಿಷವನ್ನು ನಿವಾರಿಸಲು ನುಗ್ಗೆ  ಬೀಜಗಳು (ವಿಷ ನಾಶನಂ ):

ಒಬ್ಬ ವ್ಯಕ್ತಿಯು ವಿಷ ಸೇವಿಸಿದಾಗ ಆಯುರ್ವೇದದ ಪಠ್ಯಗಳು ಈ  ಬೀಜಗಳನ್ನು ಬಳಸಲು ಶಿಫಾರಸು ಮಾಡುತ್ತವೆ. ಸಸ್ಯಶಾಸ್ತ್ರಜ್ಞರು ನುಗ್ಗೆ ಬೀಜ ಮತ್ತು ಎಲೆಗಳ ರೋಗ ನಿರೋಧಕ ಗುಣಗಳನ್ನು ಮೆಚ್ಚುತ್ತಾರೆ. ಅವು ದೇಹವನ್ನು ನಿರ್ವಿಷಗೊಳಿಸುತ್ತವೆ ಮತ್ತು ವಿಷವನ್ನು ಹೊರಹಾಕುತ್ತವೆ. ಇದು ಉತ್ತಮ ಆಯುರ್ವೇದ ಡಿಟಾಕ್ಸ್ ಮೂಲಿಕೆ.

ಕಫ ಮತ್ತು ವಾತವನ್ನು  (ಕಫವಾತಘ್ನಮ್ ) ಸಮತೋಲನಗೊಳಿಸುತ್ತದೆ:

ಇದರ  ಬೀಜಗಳು ವಾತ ಮತ್ತು ಕಫವನ್ನು ನಿವಾರಿಸುತ್ತವೆ . ಆದ್ದರಿಂದ ಈ ಬೀಜಗಳಿಂದ ತಯಾರಿಸಿದ ಎಣ್ಣೆಯನ್ನು ಪಾರ್ಶ್ವವಾಯು ಮತ್ತು ನರಗಳ ಖಾಯಿಲೆಗಳಿಗೆ ಆಯುರ್ವೇದ ಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ.

ತಲೆನೋವು ನಿವಾರಿಸುತ್ತದೆ (ಶಿರೋರ್ಥಿಹತಂ):

ಇದರ ಒಣಗಿದ ಮತ್ತು ನುಣ್ಣಗೆ ಪುಡಿ ಮಾಡಿದ ಬೀಜಗಳು ತಲೆನೋವಿನಲ್ಲಿ ಬಹಳ ಪರಿಣಾಮಕಾರಿ. ತಲೆನೋವಿಗೆ ಮಾಡುವ  ನಸ್ಯಕರ್ಮದಲ್ಲಿ  ಇವನ್ನು ಉಪಯೋಗಿಸುತ್ತಾರೆ .

ಗರ್ಭಾವಸ್ಥೆಯಲ್ಲಿ ನುಗ್ಗೆಕಾಯಿ ಅಥವಾ ಮೊರಿಂಗಾವನ್ನು ಬಳಸಬಹುದೇ ?

ಇದರ ಕಾಯಿ ಪೋಷಕಾಂಶಗಳ ಆಗರ . ಇದರಲ್ಲಿ ಪ್ರೋಟೀನ್, ಜೀವಸತ್ವಗಳು, ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಗರ್ಭಾವಸ್ಥೆಯಲ್ಲಿ ಕಾಯಿಗಳನ್ನು ಮಾತ್ರ ಬಳಸಬಹುದು. ಗರ್ಭಾವಸ್ಥೆಯಲ್ಲಿ ಎಲೆಗಳು, ಹೂಗಳು, ತೊಗಟೆ ಮತ್ತು ಬೇರುಗಳನ್ನು  ಬಳಸುವಂತಿಲ್ಲ.  ಏಕೆಂದರೆ ಅವು ಗರ್ಭಾಶಯದ ಸಂಕೋಚನವನ್ನು ಉಂಟುಮಾಡಬಹುದು.


ನುಗ್ಗೆಕಾಯಿ ಅಥವಾ ಡ್ರಮ್ ಸ್ಟಿಕ್ ನ ಅಡ್ಡಪರಿಣಾಮಗಳು. (ಸೈಡ್ ಎಫೆಕ್ಟ್ಸ್ )

ಅದರ ತೀಕ್ಷ್ಣವಾದ ಗುಣಲಕ್ಷಣಗಳಿಂದಾಗಿ ಇದು ದೇಹದಲ್ಲಿ ತುಂಬಾ ಉಷ್ಣತೆ ಹೆಚ್ಚಿಸುತ್ತದೆ . ಇದರಿಂದ ಗ್ಯಾಸ್ಟ್ರಿಕ್ ಹುಣ್ಣು ಅಥವಾ ತುಂಬಾ ಸೂಕ್ಷ್ಮವಾದ ಜಠರ ಹೊಂದಿರುವ ಜನರು ಇದನ್ನು ಬಳಸಬಾರದು.

ಋತು ಸ್ರಾವದ ಸಮಯದಲ್ಲಿ ಮಹಿಳೆಯರು ಇದನ್ನು ಉಪಯೋಗಿಸಬಾರದು . ಇದು ರಕ್ತ ಮತ್ತು ಪಿತ್ತವನ್ನು ಹದಗೆಡಿಸುವುದರಿಂದ ರಕ್ತಸ್ರಾವ ಹೆಚ್ಚಿಸುವ ಸಾಧ್ಯತೆಗಳಿವೆ . ಆದ್ದರಿಂದ ಇದನ್ನು ಋತುಸ್ರಾವದ ದಿನಗಳಲ್ಲಿ ಬಳಸುವಂತಿಲ್ಲ .

ಈ  ಸಸ್ಯದ ಬೇರುಗಳು ಮತ್ತು ಸಾರಗಳನ್ನು ಎಂದಿಗೂ ಬಳಸಬೇಡಿ. ಇದು ಪಾರ್ಶ್ವವಾಯು ಮತ್ತು ಸಾವಿಗೆ ಕಾರಣವಾಗಬಹುದು.

ಗರ್ಭಧಾರಣೆಯ ಸಮಯದಲ್ಲಿ ಈ  ಸಸ್ಯದ ಯಾವುದೇ ಭಾಗಗಳನ್ನು ಸೇವಿಸಬಾರದು ಏಕೆಂದರೆ ಅವು ಗರ್ಭಾಶಯದ ಸಂಕೋಚನವನ್ನು ಉಂಟುಮಾಡಬಹುದು.

ಹಾಲುಣಿಸುವ ತಾಯಂದಿರಲ್ಲಿ ಈ ಮರದ ಕಾಯಿ ಮತ್ತು ಎಲೆಗಳ ಬಳಕೆ ಸೂಕ್ತವಲ್ಲ.

ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ತಮ್ಮ ಆಹಾರದಲ್ಲಿ ಇದನ್ನು ಸೇರಿಸಬಾರದು.

ನೀವು ಮೊದಲ ಬಾರಿಗೆ ನುಗ್ಗೆಕಾಯಿ ಅಥವಾ ನುಗ್ಗೆಸೊಪ್ಪು  ಬಳಸುತ್ತಿದ್ದರೆ, ಸಣ್ಣ ಪ್ರಮಾಣದಲ್ಲಿ ತಿನ್ನಿರಿ. ಈ ಸಸ್ಯದ ಕಾಯಿ ಹಾಗು  ಎಲೆಗಳನ್ನು ಸೇವಿಸಿದ ನಂತರ ಕೆಲವರಲ್ಲಿ  ತೀವ್ರ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು.

ಈ ಸಸ್ಯದ ಭಾಗಗಳನ್ನು ಔಷಧಿಯಾಗಿ ಬಳಸುವ ಮೊದಲು ಅರ್ಹ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ.

( ಆಯುರ್ವೇದ ಚಿಕಿತ್ಸೆಗಳು ಮತ್ತು ಪರಿಹಾರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ವಾಟ್ಸ್ ಆ್ಯಪ್ ಡಾ.ಸವಿತಾ ಸೂರಿ @ + 91 6360108663 / )

ಲೇಖಕಿ : ಡಾ.ಸವಿತಾ ಸೂರಿ, ಸಲಹೆಗಾರ ಆಯುರ್ವೇದ ವೈದ್ಯೆ

ಉಚಿತ ಆಯುರ್ವೇದ ಸಮಾಲೋಚನೆ

+91 9945995660 / +91 9448433911 ಗೆ ಕರೆ ಮಾಡಿ

ವಾಟ್ಸ್ ಅಪ್ + 91 6360108663 /


Chat with us!
Need help?
Hello!
How can we help you?