ಕಬ್ಬಿನ ರಸ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ? Sugarcane juice benefits in kannada


ಆಯುರ್ವೇದ ಆಚಾರ್ಯರು ಕಬ್ಬಿನ ರಸವನ್ನು ಕಾಮಾಲೆ , ನಿಮಿರು ದೌರ್ಬಲ್ಯ , ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವಂತಹ ಸ್ಥಿತಿಗಳಲ್ಲಿ ಬಳಸಲು ನಿರ್ದೇಶಿಸಿರುತ್ತಾರೆ . ಕಬ್ಬಿನ ರಸ ತೃಷೆ ನೀಗಿಸುವುದಲ್ಲದೆ , ದಣಿವನ್ನೂ ನಿವಾರಿಸಿ ತತ್ಕ್ಷಣ ದೇಹಕ್ಕೆ ಶಕ್ತಿ ನೀಡುತ್ತದೆ .

ವಿಷಯ ಸೂಚಿ
ಆಯುರ್ವೇದದಲ್ಲಿ  ಕಬ್ಬಿನ ಮಹತ್ವ
ಆಯುರ್ವೇದದ ಪ್ರಕಾರ ಕಬ್ಬಿನ ರಸದ ಪ್ರಯೋಜನಗಳು
ವೀರ್ಯಾಣುಗಳ ಸಂಖ್ಯೆ, ಚಲನಶೀಲತೆ ಹೆಚ್ಚಿಸಲು ಮತ್ತು ನಿಮಿರು ದೌರ್ಬಲ್ಯ ಕಡಿಮೆ ಮಾಡಲು ಕಬ್ಬಿನ ರಸ (ವೃಷ್ಯ)
ಕಬ್ಬಿನ ಇತರ ಅರೋಗ್ಯ ಪ್ರಯೋಜನಗಳು

Read about Sugar Cane in English Ayurveda Health Benefits of Sugarcane

ಆಯುರ್ವೇದದಲ್ಲಿ  ಕಬ್ಬಿನ ಮಹತ್ವ

ಕಬ್ಬು ಅಥವಾ ಇಕ್ಷು ಅಥವಾ ಸೆಕರಂ ಅಫಿಸಿನೇರಿಯಂನ ಪ್ರಯೋಜನಗಳನ್ನು ಆಯುರ್ವೇದದಲ್ಲಿ ವಿವರಿಸಲಾಗಿದೆ. ಪುರುಷರ ಬಂಜೆತನ, ಕಾಮಾಲೆ, ಲೈಂಗಿಕ ದೌರ್ಬಲ್ಯ ಇತ್ಯಾದಿಗಳಲ್ಲಿ ಇದು ಪ್ರಯೋಜನಕಾರಿಯಾಗಿದೆ. ನಿಮಿರು ದೌರ್ಬಲ್ಯ ದೋಷಗಳಲ್ಲಿಯೂ ಅವುಗಳನ್ನು ಬಳಸಬಹುದು.

ಕಬ್ಬು ಅಥವಾ ಇಕ್ಷು ಅದರ ಮಾಧುರ್ಯ ಮತ್ತು ಆಕಾರಕ್ಕಾಗಿ ಅನೇಕ ಸಂಸ್ಕೃತ ಹೆಸರುಗಳನ್ನು ಪಡೆದಿದೆ. ನಮ್ಮ ಆಯುರ್ವೇದ ಆಚಾರ್ಯರು ಕಬ್ಬಿನ ಔಷಧೀಯ ಗುಣಗಳು, ಉಪಯೋಗಗಳು, ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಗಳುತ್ತಾರೆ .

ಆಯುರ್ವೇದದ ಪ್ರಕಾರ ಕಬ್ಬಿನ ರಸದ ಪ್ರಯೋಜನಗಳು

ಕಬ್ಬಿನ ಪ್ರಯೋಜನಗಳನ್ನು ಆಯುರ್ವೇದ ಗ್ರಂಥಗಳಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ.

ಇಕ್ಷು ಅಥವಾ ಕಬ್ಬು ರುಚಿಯಲ್ಲಿ ಸಿಹಿಯಾಗಿರುತ್ತದೆ (ಮಧುರ ರಸ). ಹೊಟ್ಟೆಯಲ್ಲಿ ಜೀರ್ಣವಾದ ನಂತರವೂ ರುಚಿ ಸಿಹಿಯಾಗಿರುತ್ತದೆ. ಇದನ್ನು ಜೀರ್ಣಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ (ಗುರು ) ಮತ್ತು ಅಂಗಾಂಶಗಳ ತೇವಾಂಶ ಮತ್ತು ಸ್ನಿಗ್ಧತೆಯನ್ನು ಸುಧಾರಿಸುತ್ತದೆ (ಸ್ನಿಗ್ಧಾ). ಇದು ಶೀತಲವಾಗಿದ್ದು ದೇಹವನ್ನು ತಂಪಾಗಿಸುತ್ತದೆ (ಶೀತ ವೀರ್ಯ). ಇದು ವಾತ ದೋಷ ಮತ್ತು ಪಿತ್ತ ದೋಷಗಳನ್ನು ಸಮತೋಲನಗೊಳಿಸುತ್ತದೆ, ಆದರೆ ಕಫ ದೋಷವನ್ನು ಹೆಚ್ಚಿಸುತ್ತದೆ.

ವೀರ್ಯಾಣುಗಳ ಸಂಖ್ಯೆ, ಚಲನಶೀಲತೆ ಹೆಚ್ಚಿಸಲು ಮತ್ತು ನಿಮಿರು ದೌರ್ಬಲ್ಯ ಕಡಿಮೆ ಮಾಡಲು ಕಬ್ಬಿನ ರಸ (ವೃಷ್ಯ )

ಕಬ್ಬಿನ ರಸವು ಅದರ ಮಾಧುರ್ಯ, ಭಾರ ಮತ್ತು ತಂಪಾಗಿಸುವ ಗುಣಗಳಿಂದ ಶುಕ್ರಧಾತುವನ್ನು ಹೆಚ್ಚಿಸುತ್ತದೆ. ಪುರುಷರ ಫಲವತ್ತತೆಗೆ ಶುಕ್ರ ಧಾತು ಬೇಕಾಗುತ್ತದೆ. ಶುಕ್ರ ಧಾತು ಹೆಚ್ಚಾದಾಗ ವೀರ್ಯಾಣುಗಳ ಸಂಖ್ಯೆ ಹಾಗು ಚಲನಶೀಲತೆಯನ್ನು ಹೆಚ್ಚಿಸುತ್ತದೆ . ವೀರ್ಯದ ಪ್ರಮಾಣವು ಹೆಚ್ಚುತ್ತದೆ . ಆರೋಗ್ಯಕರವಾದ ಶುಕ್ರ ಧಾತು ನಿಮಿರು ದೌರ್ಬಲ್ಯವನ್ನು ಕಡಿಮೆ ಮಾಡಿ , ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ .

ಕಬ್ಬು ಅದರ ಆಯುರ್ವೇದ ಗುಣಲಕ್ಷಣಗಳಿಗಾಗಿ ಪ್ರಶಂಸಿಸಲ್ಪಟ್ಟಿದೆ, ಇದು ಪುರುಷ ಫಲವತ್ತತೆ ಮತ್ತು ಪುರುಷ ಲೈಂಗಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಕಾಮೋತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಆಲಿಗೋಸ್ಪೆರ್ಮಿಯಾದಲ್ಲಿ ಬಳಸಬಹುದು. ಇದು ವಾಜೀಕರಣ ಆಹಾರಗಳಲ್ಲಿ ಒಂದಾಗಿದೆ.


ಕಬ್ಬಿನ ಇತರ ಅರೋಗ್ಯ ಪ್ರಯೋಜನಗಳು

ರಕ್ತ ಧಾತು (ರಕ್ತ) ಮತ್ತು ಪಿತ್ತದೋಷಗಳನ್ನು ಸಮತೋಲನಗೊಳಿಸುತ್ತದೆ (ರಕ್ತಪಿತ್ತಘ್ನ )

ಕಬ್ಬು ಅಸಮತೋಲಿತ ರಕ್ತ ಮತ್ತು ಪಿತ್ತದೋಷವನ್ನು ಸಮತೋಲನಗೊಳಿಸುವ ಗುಣಗಳನ್ನು ಹೊಂದಿದೆ. ಇದು ಯಕೃತ್ತನ್ನು(ಲಿವರ್) ಪುನಶ್ಚೇತನಗೊಳಿಸುತ್ತದೆ. ಈ ವಿಶೇಷ ಗುಣದಿಂದ , ಇದನ್ನು ಕಾಮಾಲೆ ಚಿಕಿತ್ಸೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಕಾಮಾಲೆ ರೋಗದಲ್ಲಿ ಬಳಸುವಾಗ ರಸವು ಸ್ವಚ್ಛ ವಾಗಿರಬೇಕು ಮತ್ತು ಸೂಕ್ಷ್ಮ ಜೀವಿಗಳಿಂದ ಹೊರತಾಗಿರಬೇಕು ಎಂಬುದು ಬಹಳ ಮುಖ್ಯ.

ದೇಹದ ಶಕ್ತಿ ಮತ್ತು ಕಸುವನ್ನು ಹೆಚ್ಚಿಸುತ್ತದೆ (ಬಲ್ಯ):

ಕಬ್ಬಿನ ರಸವು ನಮ್ಮ ದೇಹವನ್ನು ತಕ್ಷಣವೇ ಶಕ್ತಿಯುತಗೊಳಿಸುತ್ತದೆ ಮತ್ತು ಕಸುವನ್ನು ನೀಡುತ್ತದೆ. ಕಬ್ಬಿನಲ್ಲಿ ಕಬ್ಬಿಣ ಮತ್ತು ಕಾರ್ಬೋಹೈಡ್ರೇಟ್‌ಗಳಿವೆ. ಇದರಿಂದ ಕಬ್ಬು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ .

ಯುಟಿಐ ಮತ್ತು ಸಿಸ್ಟೈಟಿಸ್‌ನಲ್ಲಿ (ಮೂತ್ರಲ):

ಸಿಸ್ಟೈಟಿಸ್ ಮತ್ತು ಯುಟಿಐ ನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಕಬ್ಬನ್ನು ಶಿಫಾರಸು ಮಾಡಲಾಗಿದೆ. ಇದು ಘಾಸಿಗೊಂಡ ಮೂತ್ರ ವಾಹಿನಿಗಳ ಅಂಗಾಂಶಗಳನ್ನು ಶಾಂತಗೊಳಿಸುತ್ತದೆ ಮತ್ತು ಮೂತ್ರದ ಹರಿವನ್ನು ಸರಾಗಗೊಳಿಸುತ್ತದೆ. ಇದು ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮೂತ್ರಪಿಂಡಗಳನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.

ಮಲಬದ್ಧತೆಯಲ್ಲಿ

ಕಬ್ಬಿನ ರಸವು ವಿರೇಚಕ ಗುಣಗಳನ್ನು ಹೊಂದಿದೆ . ಇದು ಕರುಳಿನ ಚಲನೆಯನ್ನು ಸರಾಗಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.

ಹಾಲುಣಿಸುವ ತಾಯಂದಿರಲ್ಲಿ ಇದು ಹಾಲು ಹೆಚ್ಚಿಸುತ್ತದೆ.

ಕಬ್ಬನ್ನು ಅಗಿದು , ಅದರ ರಸವನ್ನು ಹೀರುವುದರಿಂದ ಹಲ್ಲು ಮತ್ತು ಒಸಡುಗಳನ್ನು ಬಲಯುತವಾಗುತ್ತವೆ .

ಇದು ಕಡಿಮೆ ತೂಕ ಹೊಂದಿರುವ ಅನೇಕ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಇದು ದೇಹದ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಬ್ಬಿನ  ರಸದ ಉಪಯುಕ್ತತೆ

  • ಉಷ್ಣವಲಯದ ಹಸಿರು ಕಬ್ಬು ರಸಭರಿತ ಮತ್ತು ಸಿಹಿಯಾಗಿರುತ್ತದೆ
  • ಇದು ಹೊಟ್ಟೆ, ಮೂತ್ರಪಿಂಡಗಳು, ಹೃದಯ, ಕಣ್ಣುಗಳು, ಮೆದುಳು ಮತ್ತು ಲೈಂಗಿಕ ಅಂಗಗಳನ್ನು ಬಲಪಡಿಸುತ್ತದೆ.
  • ಸಾಂಕ್ರಾಮಿಕ ಜ್ವರಗಳಲ್ಲಿ ಕಬ್ಬನ್ನು ದೇಹದ ಬಲ ವೃದ್ಧಿಸಲು ಹಾಗು ಪೋಷಕಾಂಶಗಳ ಕೊರತೆ ನೀಗಿಸಲು ಬಳಸಬಹುದು . ಇದರಿಂದ ತ್ವರಿತವಾಗಿ ದೇಹಕ್ಕೆ ಶಕ್ತಿ ಸೇರುತ್ತದೆ .
  • ಕಬ್ಬು ಕಬ್ಬಿಣ ಮತ್ತು ಕಾರ್ಬೋಹೈಡ್ರೇಟ್ ಗಳ ಆಗರವಾಗಿದೆ .
  • ಕಬ್ಬಿನ ರಸವನ್ನು ನಿಂಬೆ ಮತ್ತು ಶುಂಠಿ ರಸದೊಂದಿಗೆ ಬೆರೆಸಿ ಕುಡಿದಾಗ , ಮೂತ್ರವನ್ನು ಸುಲಭವಾಗಿ ವಿಸರ್ಜಿಸುವಂತೆ  ಮಾಡುತ್ತದೆ
  • ಕಾಮಾಲೆ ಅಥವಾ ಜಾಂಡೀಸ್ ನಲ್ಲಿ ಶುದ್ಧ ಕಬ್ಬಿನ  ರಸ ಬಳಸಲು ಸಲಹೆ ನೀಡಲಾಗುತ್ತದೆ . ಕಾಮಾಲೆಗಾಗಿ ಕಬ್ಬಿನ  ರಸವನ್ನು ಉಪಯೋಗಿಸುವಾಗ, ಸೂಕ್ಷ್ಮಜೀವಿಗಳ ಸೋಂಕಿಲ್ಲದ ಶುದ್ಧವಾದ ರಸವನ್ನು ಉಪಯೋಗಿಸಬೇಕು .
  • ಕಬ್ಬನ್ನು ಅಗಿಯುವುದು ಮತ್ತು ಅದರ ರಸವನ್ನು ಹೀರುವುದರಿಂದ  ಹಲ್ಲು ಮತ್ತು ಒಸಡುಗಳು ಬಲವಾಗುತ್ತವೆ.
  • ದೇಹದ ತೂಕ ಹೆಚ್ಚಿಸಲು ಶ್ರಮ ಪಡುತ್ತಿರುವವರಿಗೆ ಕಬ್ಬು  ಅತಿ ಉತ್ತಮ ಆಹಾರ . ಇದು ಆರೋಗ್ಯಕರ ತೂಕವನ್ನು ಪಡೆಯಲು ಸಹಾಯ ಮಾಡುತ್ತದೆ

ಲೇಖಕಿ : ಡಾ.ಸವಿತಾ ಸೂರಿ, ಸಲಹೆಗಾರ ಆಯುರ್ವೇದ ವೈದ್ಯೆ

ಉಚಿತ ಆಯುರ್ವೇದ ಸಮಾಲೋಚನೆ

+91 9945995660 / +91 9448433911 ಗೆ ಕರೆ ಮಾಡಿ

ವಾಟ್ಸ್ ಅಪ್ + 91 6360108663 /


Chat with us!
Need help?
Hello!
How can we help you?